Bigg Boss Kannada 13: ಈ ವಾರ ಮಹಾಕವಿ ಮಂಜ ಎಲಿಮಿನೇಟ್? ವೀಕ್ಷಕರಿಗೆ ಭಾರೀ ಅಸಮಾಧಾನ
Bigg Boss Kannada 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಮಾಡರ್ನ್ ಮಹಾಕವಿ ಮಂಜ ಬೀಪ್ ಪದಗಳನ್ನು ಮಂಜ ಬಳಸಿದ್ದಕ್ಕೆ ಇನ್ನುಳಿದ ಸ್ಪರ್ಧಿಗಳಿಗೆ ಅಸಹ್ಯ ಎನಿಸಿದೆ. ಶೋನ ಪ್ರಾಪರ್ಟಿ ಹಾನಿಗೊಳಿಸಿ ಇತರ ಸ್ಪರ್ಧಿ ನಿಂದಿಸಿದ ಅವರ ಈ ವರ್ತನೆಯಿಂದಾಗಿ, ಸುದೀಪ್ ತಮ್ಮ ವಿಶೇಷ ಅಧಿಕಾರ ಬಳಸಿ ಈ ವಾರವೇ ಅವರನ್ನು ಎಲಿಮಿನೇಟ್ (Eliminate) ಮಾಡ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಮಹಾಕವಿ ಮಂಜ -
‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ಶೋನಲ್ಲಿ ಮಾಡರ್ನ್ ಮಹಾಕವಿ ಮಂಜ ಬೀಪ್ ಪದಗಳನ್ನು ಮಂಜ ಬಳಸಿದ್ದಕ್ಕೆ ಇನ್ನುಳಿದ ಸ್ಪರ್ಧಿಗಳಿಗೆ ಅಸಹ್ಯ ಎನಿಸಿದೆ. ಶೋನ ಪ್ರಾಪರ್ಟಿ ಹಾನಿಗೊಳಿಸಿ ಇತರ ಸ್ಪರ್ಧಿ ನಿಂದಿಸಿದ ಅವರ ಈ ವರ್ತನೆಯಿಂದಾಗಿ, ಸುದೀಪ್ ತಮ್ಮ ವಿಶೇಷ ಅಧಿಕಾರ ಬಳಸಿ ಈ ವಾರವೇ ಅವರನ್ನು ಎಲಿಮಿನೇಟ್ (Eliminate) ಮಾಡ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ರಾಕ್ಷಸರು ಹಾಗೂ ಗಂಧರ್ವರು ಎಂಬ ಟಾಸ್ಕ್ ನೀಡಲಾಗಿತ್ತು. ಯಶಸ್ಗೆ ‘ಸ್ತ್ರೀ ವ್ಯಾಮೋಹ ಇರುವ ಕಳ್ಳನಾಯಿ’ ಎಂದು ಮಂಜ ಕರೆದಿದ್ದರು. ಯಶಸ್ ಅವರನ್ನು ಕಾಮುಕ ಎಂದರು. ಆ ಬಳಿಕ ಅತಿಯಾದ ಅವಾಚ್ಯ ಶಬ್ದಗಳ ಬಳಸಿದರು. ಯಶಸ್ ಅವರ ಕುಟುಂಬದವರ ಬಗ್ಗೆ ಮಂಜ ಅಶ್ಲೀಲ ಪದಗಳನ್ನು ಬಳಸಿದ್ದಾರೆ.
ಇದನ್ನೂ ಓದಿ: Bigg Boss Kannada 13: ರಾಕ್ಷಸನಾಗಿ ಮೆರೆದ ಮಂಜನ ವಿರುದ್ಧ ತಿರುಗಿ ಬಿದ್ದ ಸ್ಪರ್ಧಿಗಳು!
Manja said "kama pishachi" it was not telecast... if you get a pig from the gutter to a big show it will still enjoy rolling in sh** #BBK13
— Anonya PN (@Anonyaforyou) October 7, 2026
ರಾಕ್ಷಸರು ಹೇಳಿದ ಬಹುತೇಕ ಎಲ್ಲ ಕೆಲಸವನ್ನೂ ಮಂಜ ಮಾಡುತ್ತಿದ್ದರು.ಅಂತಿಮವಾಗಿ ತುಂಬಾ ಅಸಹ್ಯವಾಗಿ ಮಾತನಾಡಿದ್ದಾರೆ.ಈ ವಾರಾಂತ್ಯದಲ್ಲಿ ಮಂಜ ಹೊರಗೆ ಹೋಗೋದು ಪಕ್ಕಾ ಅಂತ ಕಮೆಂಟ್ ಮಾಡಿದ್ದಾರೆ ವೀಕ್ಷಕರು.
ಇದನ್ನೂ ಓದಿ: Bigg Boss Kannada 13: ರಾಕ್ಷಸನಾಗಿ ಮೆರೆದ ಮಂಜನ ವಿರುದ್ಧ ತಿರುಗಿ ಬಿದ್ದ ಸ್ಪರ್ಧಿಗಳು!
ಕೆಲವು ಟಾರ್ಚರ್ ಅತಿರೇಕಕ್ಕೆ ಹೋಗುತ್ತಿದ್ದರೂ, ನೋಡಿಕೊಂಡು ಸುಮ್ಮನಿದ್ದ ಉಸ್ತುವಾರಿ ಆಸಿಯಾ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಗಂಧರ್ವರು ಹಾಗೂ ರಾಕ್ಷಸರು ಟಾಸ್ಕ್ ಮೇಲೆ ವೀಕ್ಷಕರಿಗೆ ಭಾರೀ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆ ಮಟ್ಟ ತಲುಪುವಲ್ಲಿ ಸ್ಪರ್ಧಿಗಳು ವಿಫಲರಾಗಿದ್ದಾರೆ