‘ಬಿಗ್ ಬಾಸ್ ಕನ್ನಡ 13’(Bigg Boss Kannada 13) ಕಾರ್ಯಕ್ರಮದ ‘ಅಗ್ನಿಪರೀಕ್ಷೆ’ ಭಾಗ ಆಗಸ್ಟ್ ತಿಂಗಳಲ್ಲೇ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ. ‘ಬಿಗ್ ಬಾಸ್ ಕನ್ನಡ 13’ ಕಾರ್ಯಕ್ರಮದಲ್ಲಿ ಸಾಮಾನ್ಯ ಜನರಿಗೂ ಅವಕಾಶ ಇದೆ. ಈಗಾಗಲೇ ಕಾಮನ್ ಮ್ಯಾನ್ ಆಡಿಷನ್ ಪ್ರಕ್ರಿಯೆ ಮುಗಿಸಿದ್ದಾರೆ. ಆಡಿಷನ್ ರೌಂಡ್‌ನಲ್ಲಿ ಸೆಲೆಕ್ಟ್ ಆದವರನ್ನ ಮುಂದಿನ ಹಂತಕ್ಕೆ ಕರೆತರಲಾಗಿದೆ. ಆಡಿಷನ್ಸ್ ಮೂಲಕ ಆಯ್ಕೆ ಆಗಿರುವ ಜನಸಾಮಾನ್ಯರು ‘ಬಿಗ್ ಬಾಸ್ - ಅಗ್ನಿಪರೀಕ್ಷೆ’ (Bigg Boss Agniparikshe) ಎದುರಿಸಬೇಕು. ಅಗ್ನಿಪರೀಕ್ಷೆಯಲ್ಲಿ ಪಾಸ್ ಆದವರು ‘ಬಿಗ್ ಬಾಸ್ ಕನ್ನಡ 13’ ಅಧಿಕೃತ ಟಿವಿ ಸೀಸನ್‌ಗೆ ಆಯ್ಕೆ ಆಗಲಿದ್ದಾರೆ. ಜಡ್ಜ್ ಸ್ಥಾನದಲ್ಲಿ ಹಳೇ ಸ್ಪರ್ಧಿಗಳಾದ ಸಂಗೀತಾ ಶೃಂಗೇರಿ, ವಿನಯ್ ಗೌಡ (Vinay Gowd) ಮತ್ತು ಗಿಲ್ಲಿ ನಟ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಹೊಸ ಸೀಸನ್‌ಗೆ ಜಡ್ಜ್‌ಗಳಾಗಿ ಬರಲಿದ್ದಾರಾ ಫೈಯರ್ ಬ್ರ್ಯಾಂಡ್ ಸ್ಪರ್ಧಿ?
ಈ ಮೊದಲು ಬಿಗ್ ಬಾಸ್ ಟೀಂ ಆಯ್ಕೆ ಮಾಡಿದವರಿಗೆ ನೇರವಾಗಿ ಎಂಟ್ರಿ ಸಿಗುತ್ತಿತ್ತು. ಆದರೆ, ಇತ್ತೀಚೆಗೆ ಇದನ್ನು ಬದಲಿಸಲಾಗಿತ್ತು. ಈ ಬಾರಿ ಈ ಶೈಲಿಯನ್ನು ಮತ್ತಷ್ಟು ಬದಲಿಸೋ ಸಾಧ್ಯತೆ ಇದೆ. ಹೊಸ ಸುದ್ದಿ ಎಂದರೆ ಅಗ್ನಿಪರೀಕ್ಷೆಯಲ್ಲಿ ಸಂಗೀತಾ ಶೃಂಗೇರಿ, ಗಿಲ್ಲಿ ನಟ ಹಾಗೂ ವಿನಯ್ ಗೌಡ ಜಡ್ಜ್ ಸ್ಥಾನದಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ಇದನ್ನೂ ಓದಿ: SIIMA Awards 2026: ಸೈಮಾ ಅವಾರ್ಡ್ 14ನೇ ಸೀಸನ್; ಪ್ರತಿನಿಧಿಸುವ ನಟ ಶ್ರೀಮುರುಳಿ
ಜೀ ಕನ್ನಡದಲ್ಲಿ ಶೀಘ್ರವೇ ‘ಹಳ್ಳಿ ಪವರ್ ರೀಲೋಡೆಡ್’ ಶೋ ಆಯೋಜನೆ ಮಾಡಲಾಗುತ್ತಿದೆ. ಬಿಗ್ ಬಾಸ್ ಪ್ರಸಾರ ಸಮಯ ಹಾಗೂ ಹಳ್ಳಿ ಪವರ್ ಶೋ ಸಮಯ ಒಂದೇ ಇರಲಿದೆ ಎನ್ನಲಾಗುತ್ತಿದೆ. ನೆಚ್ಚಿನ ನಟ, ನಿರೂಪಕ ಸುದೀಪ್ ಅವರನ್ನು ನೋಡಿ ವೀಕ್ಷಕರು ಖುಷ್ ಆಗಿದ್ದಾರೆ.
ಪ್ರೋಮೋ ಹೇಗಿದೆ?
ನಮಸ್ತೆ ಕರ್ನಾಟಕ, the Bigg wait is over! ಎಂದು ಪ್ರೋಮೋ ಹಂಚಿಕೊಂಡಿದೆ ವಾಹಿನಿ. ಆದರೆ ಯಾವಾಗಿನಿಂದ ಶುರು ಅನ್ನೋದು ಮಾತ್ರ ತಿಳಿಸಿಲ್ಲ. ಇತ್ತೀಚೆಗೆ ಜಿಯೋ ಹಾಟ್‌ಸ್ಟಾರ್, ಸೆಪ್ಟೆಂಬರ್‌ನಿಂದ 6 ಭಾಷೆಗಳಲ್ಲಿ ಬಿಗ್‌ಬಾಸ್ ಆರಂಭವಾಗಲಿದೆ ಎಂದು ಮಾಹಿತಿ ನೀಡಿತ್ತು. ಈ ಪ್ರೋಮೋದಲ್ಲಿ ಕಿಚ್ಚ ಹೊಸ ಲುಕ್‌ನ ಝಲಕ್ ಇದೆ. ಶಾರ್ಟ್ ಹೇರ್ ಸ್ಟೈಲ್ ಲುಕ್ ಇದರಲ್ಲಿ ರಿವೀಲ್ ಆಗಿದೆ. ಕಪ್ಪು ಬಣ್ಣದ ಕಾಸ್ಟೂಮ್ ಅಲ್ಲಿಯೇ ಸುದೀಪ್ ಇಲ್ಲಿ ಕಾಣಿಸಿಕೊಂಡಿದ್ದಾರೆ.
ಕರ್ನಾಟಕದ ಜನ ಯಾವತ್ತೂ ಯಾರಿಗೂ ಕಾದಿದ್ದು ಚರಿತ್ರೆ ಇಲ್ಲ. ಆದರೆ ವರ್ಷಕ್ಕೆ ಒಂದು ಸಲ ಕಾಯ್ತಾರೆ ಅಂದರೆ ಅದು ಬಿಗ್ ಬಾಸ್‌ಗೆ ಮಾತ್ರ. ಶುರು ಮಾಡೋಣ್ವಾ? ಅಂತ ರಗಡ್ ಆಗಿಯೇ ಕೇಳಿದ್ದಾರೆ ಸುದೀಪ್.
ಇದನ್ನೂ ಓದಿ: Bigg Boss Season 13: ಬಿಗ್ ಬಾಸ್ 13ರ ಹವಾ ಇನ್ಮುಂದೆ ಶುರು; ಕಿಚ್ಚನ ಲುಕ್ ಕಂಡು ವೀಕ್ಷಕರು ಖುಷ್
ಇನ್ನುಳಿದಂತೆ ಬಿಗ್ ಬಾಸ್ ಸೀಸನ್-12 ಅನ್ನ ಗಿಲ್ಲಿ ನಟ ಗೆದ್ದು ಕೊಂಡು ಹೋಗಿದ್ದಾರೆ. ಈ ಸೀಸನ್ ಅಲ್ಲಿ ಯಾರೆಲ್ಲ ಸ್ಪರ್ಧಿಗಳು ಇರ್ತಾರೆ ಅನ್ನುವ ಕುತೂಹಲ ವೀಕ್ಷಕರಲ್ಲಿದೆ.