ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Season 13: ಬಿಗ್ ಬಾಸ್ 13ರ ಹವಾ ಇನ್ಮುಂದೆ ಶುರು; ಕಿಚ್ಚನ ಲುಕ್‌ ಕಂಡು ವೀಕ್ಷಕರು ಖುಷ್‌

Bigg Boss Kannada: ನಮಸ್ತೆ ಕರ್ನಾಟಕ, the Bigg wait is over! ಎಂದು ಪ್ರೋಮೋ ಹಂಚಿಕೊಂಡಿದೆ ವಾಹಿನಿ. ಆದರೆ ಯಾವಾಗಿನಿಂದ ಶುರು ಅನ್ನೋದು ಮಾತ್ರ ತಿಳಿಸಿಲ್ಲ. ಇತ್ತೀಚೆಗೆ ಜಿಯೋ ಹಾಟ್‌ಸ್ಟಾರ್, ಸೆಪ್ಟೆಂಬರ್‌ನಿಂದ 6 ಭಾಷೆಗಳಲ್ಲಿ ಬಿಗ್‌ಬಾಸ್ ಆರಂಭವಾಗಲಿದೆ ಎಂದು ಮಾಹಿತಿ ನೀಡಿತ್ತು. ಈ ಪ್ರೋಮೋದಲ್ಲಿ ಕಿಚ್ಚ ಹೊಸ ಲುಕ್‌ನ ಝಲಕ್ ಇದೆ. ಶಾರ್ಟ್ ಹೇರ್ ಸ್ಟೈಲ್ ಲುಕ್ ಇದರಲ್ಲಿ ರಿವೀಲ್ ಆಗಿದೆ. ಕಪ್ಪು ಬಣ್ಣದ ಕಾಸ್ಟೂಮ್ ಅಲ್ಲಿಯೇ ಸುದೀಪ್ ಇಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಗ್ ಬಾಸ್ 13ರ ಹವಾ ಇನ್ಮುಂದೆ ಶುರು; ಕಿಚ್ಚನ ಲುಕ್‌ ಕಂಡು ವೀಕ್ಷಕರು ಖುಷ್‌

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Aug 2, 2026 7:15 PM

ಕನ್ನಡಿಗರ ಕಾಯುವಿಕೆ ಮುಗಿದಿದೆ. ಇದೀಗ ಕಲರ್ಸ್‌ ಕನ್ನಡ ವಾಹಿನಿ (Colora Kannada) ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪ್ರೊಮೊ (Promo) ಹಂಚಿಕೊಂಡು, ಬಿಗ್‌ಬಾಸ್ (Bigg Boss Kannada 13) ಕುರಿತು ಅಪ್‌ಡೇಟ್ ನೀಡಿದೆ. ನೆಚ್ಚಿನ ನಟ, ನಿರೂಪಕ ಸುದೀಪ್‌ ಅವರನ್ನು ನೋಡಿ ವೀಕ್ಷಕರು ಖುಷ್‌ ಆಗಿದ್ದಾರೆ.

ನಮಸ್ತೆ ಕರ್ನಾಟಕ, the Bigg wait is over! ಎಂದು ಪ್ರೋಮೋ ಹಂಚಿಕೊಂಡಿದೆ ವಾಹಿನಿ. ಆದರೆ ಯಾವಾಗಿನಿಂದ ಶುರು ಅನ್ನೋದು ಮಾತ್ರ ತಿಳಿಸಿಲ್ಲ. ಇತ್ತೀಚೆಗೆ ಜಿಯೋ ಹಾಟ್‌ಸ್ಟಾರ್, ಸೆಪ್ಟೆಂಬರ್‌ನಿಂದ 6 ಭಾಷೆಗಳಲ್ಲಿ ಬಿಗ್‌ಬಾಸ್ ಆರಂಭವಾಗಲಿದೆ ಎಂದು ಮಾಹಿತಿ ನೀಡಿತ್ತು. ಈ ಪ್ರೋಮೋದಲ್ಲಿ ಕಿಚ್ಚ ಹೊಸ ಲುಕ್‌ನ ಝಲಕ್ ಇದೆ. ಶಾರ್ಟ್ ಹೇರ್ ಸ್ಟೈಲ್ ಲುಕ್ ಇದರಲ್ಲಿ ರಿವೀಲ್ ಆಗಿದೆ. ಕಪ್ಪು ಬಣ್ಣದ ಕಾಸ್ಟೂಮ್ ಅಲ್ಲಿಯೇ ಸುದೀಪ್ ಇಲ್ಲಿ ಕಾಣಿಸಿಕೊಂಡಿದ್ದಾರೆ.

ಕರ್ನಾಟಕದ ಜನ ಯಾವತ್ತೂ ಯಾರಿಗೂ ಕಾದಿದ್ದು ಚರಿತ್ರೆ ಇಲ್ಲ. ಆದರೆ ವರ್ಷಕ್ಕೆ ಒಂದು ಸಲ ಕಾಯ್ತಾರೆ ಅಂದರೆ ಅದು ಬಿಗ್‌ ಬಾಸ್‌ಗೆ ಮಾತ್ರ. ಶುರು ಮಾಡೋಣ್ವಾ? ಅಂತ ರಗಡ್‌ ಆಗಿಯೇ ಕೇಳಿದ್ದಾರೆ ಸುದೀಪ್.‌ ಇನ್ನುಳಿದಂತೆ ಬಿಗ್ ಬಾಸ್ ಸೀಸನ್-12 ಅನ್ನ ಗಿಲ್ಲಿ ನಟ ಗೆದ್ದು ಕೊಂಡು ಹೋಗಿದ್ದಾರೆ. ಈ ಸೀಸನ್‌ ಅಲ್ಲಿ ಯಾರೆಲ್ಲ ಸ್ಪರ್ಧಿಗಳು ಇರ್ತಾರೆ ಅನ್ನುವ ಕುತೂಹಲ ವೀಕ್ಷಕರಲ್ಲಿದೆ.

ಇದನ್ನೂ ಓದಿ: Bigg Boss Season 13: ಬಿಗ್ ಬಾಸ್ 13ರ ಹವಾ ಇನ್ಮುಂದೆ ಶುರು; ಕಿಚ್ಚನ ಲುಕ್‌ ಕಂಡು ವೀಕ್ಷಕರು ಖುಷ್‌

ಬಿಗ್‌ ಬಾಸ್‌ ಪ್ರೋಮೋ

‘ಬಿಗ್ ಬಾಸ್ ಕನ್ನಡ 13’ ಕಾರ್ಯಕ್ರಮದ ವಿಶೇಷತೆ ಏನಪ್ಪಾ ಅಂದ್ರೆ ಈ ಬಾರಿ ಜನ ಸಾಮಾನ್ಯರಿಗೂ ಚಾನ್ಸ್ ಇದೆ. ಜನ ಸಾಮಾನ್ಯರೂ ‘ಬಿಗ್ ಬಾಸ್’ ಮನೆಯೊಳಗೆ ಇರುವ ಅವಕಾಶವನ್ನ ಕಲ್ಪಿಸಲಾಗಿದೆ. ಈ ಹಿಂದೆ 2017ರಲ್ಲಿ ಪ್ರಸಾರವಾದ ಕಾರ್ಯಕ್ರಮ ‘ಬಿಗ್ ಬಾಸ್ ಕನ್ನಡ 5’. ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕಾಮನ್ ಮ್ಯಾನ್‌ಗೆ ಅವಕಾಶ ಕೊಟ್ಟ ಶೋ ‘ಬಿಗ್ ಬಾಸ್ ಕನ್ನಡ 5’. ವೂಟ್‌ ಮೂಲಕ ಅರ್ಜಿ ಸಲ್ಲಿಸಿ, ಆನ್‌ಲೈನ್‌ ಆಡಿಷನ್ಸ್‌ನಲ್ಲಿ ಭಾಗಿಯಾಗುವ ಅವಕಾಶ ಕಾಮನ್‌ ಮ್ಯಾನ್‌ಗಿತ್ತು.

ಇದನ್ನೂ ಓದಿ: Rajinikanth: ರಜನೀಕಾಂತ್‌ಗಾಗಿ ಈ ನಿಯಮ ಮುರಿದ ನಟ ವಿಜಯ್ ಸೇತುಪತಿ

‘ಬಿಗ್ ಬಾಸ್ ಕನ್ನಡ 6’ ಕಾರ್ಯಕ್ರಮದಲ್ಲೂ ಜನಸಾಮಾನ್ಯರಿಗೆ ಅವಕಾಶ ನೀಡಲಾಯ್ತು. ರೈತ ಶಶಿ ಕುಮಾರ್ ಹಾಗೂ ಆನಂದ್ ಮಾಲಗತ್ತಿ ಆಡಿಷನ್ಸ್ ಮೂಲಕ ಆಯ್ಕೆ ಆದರು. ಈ ಪೈಕಿ ಶಶಿ ಕುಮಾರ್‌ ವಿನ್ನರ್‌ ಆದರು.