ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ (Bigg Boss Kannada 13) ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮನೆಯ ಸ್ಪರ್ಧಿಗಳ ನಡುವೆ ನಡೆಯುತ್ತಿರುವ ನಾಮಿನೇಷನ್ ಪ್ರಕ್ರಿಯೆ, ಟಾಸ್ಕ್‌ಗಳು ಹಾಗೂ ವೈಯಕ್ತಿಕ ವಿಚಾರಗಳು ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗುತ್ತಿವೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಸೌಂದರ್ಯಾ (Soundarya Shetty) ಹಾಗೂ ಕಿರಣ್ ಶಾಸ್ತ್ರಿ (Kiran Shastri) ನಡುವೆ ಮಾತಿನ ಸಮರವೇ ನಡೆದಿದೆ. ಇಬ್ಬರ ನಡುವಿನ ವಾಗ್ವಾದದ ಹೊಸ ಪ್ರೋಮೋ ಸದ್ಯ ವೀಕ್ಷಕರ ಗಮನ ಸೆಳೆಯುತ್ತಿದೆ.
ಕಿರಣ್ ಶಾಸ್ತ್ರಿ ವಿರುದ್ಧ ಸೌಂದರ್ಯಾ ಕಿಡಿ
ನಾಮಿನೇಷನ್ ಪ್ರಕ್ರಿಯೆಯ ಸಂದರ್ಭದಲ್ಲಿ ಸೌಂದರ್ಯಾ ಅವರು ಕಿರಣ್ ಶಾಸ್ತ್ರಿ ವಿರುದ್ಧ ನೇರವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. 'ಈ ಮನೆಯಲ್ಲಿ ನೀವು ಇರೋದಕ್ಕೆ ಅರ್ಹರೇ ಅಲ್ಲ. ನೀವು ಮಾಡುವ ಕಾಂಟ್ರಿಬ್ಯೂಷನ್ ಏನೂ ಇಲ್ಲ, ಬರೀ ಕೆಲಸವಿಲ್ಲದ ಮಾತುಗಳು' ಎಂದು ಕಿರಣ್ ವಿರುದ್ಧ ಸೌಂದರ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೌಂದರ್ಯಾ ಅವರ ಈ ಮಾತುಗಳಿಂದ ಕೆರಳಿದ ಕಿರಣ್ ಶಾಸ್ತ್ರಿ ಕೂಡ ಸುಮ್ಮನಿರದೆ ತಿರುಗೇಟು ನೀಡಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ತೀವ್ರ ಸ್ವರೂಪದ ವಾಗ್ವಾದ ನಡೆದಿದೆ. ಇಷ್ಟು ದಿನ ಮನಸ್ಸಿನಲ್ಲಿದ್ದ ಅಸಮಾಧಾನ ಇದೀಗ ಬಹಿರಂಗವಾಗಿದ್ದು, ಮನೆಯ ವಾತಾವರಣ ಮತ್ತಷ್ಟು ಕಾವೇರಿದೆ.
ಇದನ್ನೂ ಓದಿ: Samantha: ಸಿಂಪಲ್ ಮೆಟರ್ನಿಟಿ ಫೋಟೋಶೂಟ್ ಶೇರ್ ಮಾಡಿದ ಸಮಂತಾ!
ಬಿಗ್ ಬಾಸ್ ಮನೆಯಲ್ಲಿ 'ಪರಿಷತ್' ಕಲಹ!
ಈ ವಾರದ ಬಿಗ್ ಬಾಸ್ ಮನೆಯ ವಿಶೇಷ ಪರಿಕಲ್ಪನೆ 'ಬಿಗ್ ಬಾಸ್ ಪರಿಷತ್'. ಈ ಪರಿಷತ್‌ಗೆ ಮಾಡರ್ನ್ ಮಹಾಕವಿ ಮಂಜ ಅಧ್ಯಕ್ಷರಾಗಿದ್ದಾರೆ. ನಿನ್ನೆ ನಡೆದ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ವಾಸ್ತವತೆಯ ಅರಿವು ಮೂಡಿಸಿದ್ದ ಮಂಜ, ಇದೀಗ ಮನೆಯೊಳಗಿನ ಅಸಮಾಧಾನಗಳಿಗೆ ವೇದಿಕೆ ಕಲ್ಪಿಸಿದ್ದಾರೆ.
ಸ್ಪರ್ಧಿಗಳ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ನೇರವಾಗಿ ಚರ್ಚಿಸುವ ಅವಕಾಶ ನೀಡಲಾಗಿದ್ದು, ಯಾರ ಮೇಲೆ ಯಾರಿಗೆ ಅಸಮಾಧಾನವಿದೆಯೋ ಅಂತಹ ಸ್ಪರ್ಧಿಗಳನ್ನು ಮುಖಾಮುಖಿಯಾಗಿ ನಿಲ್ಲಿಸಲಾಗಿದೆ. ಪರಿಣಾಮವಾಗಿ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.
'ನನ್ನ ಅಸೆಂಬ್ಲಿ' ಎಂದ ಮಂಜ!
ಇಂದಿನ ಸಂಚಿಕೆಯ ಪ್ರೋಮೋದಲ್ಲಿ ಸ್ಪರ್ಧಿಗಳು ಬಿಳಿ ಬಣ್ಣದ ಉಡುಪು ಹಾಗೂ ಕೇಸರಿ ಶಾಲು ಧರಿಸಿ ರಾಜಕೀಯ ಶೈಲಿಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಧ್ಯಕ್ಷರ ಸ್ಥಾನದಲ್ಲಿ ಕುಳಿತಿರುವ ಮಾಡರ್ನ್ ಮಹಾಕವಿ ಮಂಜ, 'ನನ್ನ ಅಸೆಂಬ್ಲಿ' ಎಂದು ಹೇಳುತ್ತಾ ತಮ್ಮದೇ ಶೈಲಿಯಲ್ಲಿ ಗುಟುರು ಹಾಕಿದ್ದಾರೆ.
ಇದನ್ನೂ ಓದಿ: Pawan Kalyan: ಪವನ್ ಕಲ್ಯಾಣ್ ಮೂರನೇ ವಿಚ್ಛೇದನಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು?
ಬಿಗ್ ಬಾಸ್ ಪರಿಷತ್‌ನಲ್ಲಿ ಸ್ಪರ್ಧಿಗಳ ನಡುವಿನ ಮುಸುಕಿನ ಗುದ್ದಾಟ ಈಗ ಬಹಿರಂಗ ವಾಗ್ವಾದವಾಗಿ ಬದಲಾಗಿದೆ. ಅದರಲ್ಲೂ ಸೌಂದರ್ಯಾ ಮತ್ತು ಕಿರಣ್ ಶಾಸ್ತ್ರಿ ನಡುವಿನ ಮಾತಿನ ಸಮರ ಇಂದಿನ ಸಂಚಿಕೆಯ ಪ್ರಮುಖ ಆಕರ್ಷಣೆಯಾಗುವ ನಿರೀಕ್ಷೆಯಿದೆ.