ಬಿಗ್ ಬಾಸ್ ಮನೆಯಲ್ಲಿ (Bigg Boss Kannada 13) ಪ್ರತಿಯೊಂದಕ್ಕೂ ಜಗಳ ಶುರು ಆಗಿದೆ. ಮೊದಲ ವಾರದಲ್ಲೇ ಮನೆಯ ಕೆಲಸ ವಿಚಾರವಾಗಿ ಜಗಳ ಆಗಿತ್ತು. ಈ ಬಗ್ಗೆ ವೀಕೆಂಡ್‌ನಲ್ಲಿ ಚರ್ಚೆಗಳೂ ಆಯ್ತು. ಇದೀಗ ಮತ್ತೆ ಮನೆ ಕೆಲಸ ವಿಚಾರದಲ್ಲಿ ತಾರತಮ್ಯ ಶುರುವಾದಂತಿದೆ. ಲಿಖಿತ್ (Likhith) ಹಾಗೂ ಸಂಗೀತಾ (Sangeetha) ನಡುವೆ ಮಾತಿನ ಚಕಮಕಿ ನಡೆದಿದೆ.
ಹೊಸ ಪ್ರೋಮೋ ಔಟ್
ಹೊಸ ಪ್ರೋಮೋ ಔಟ್ ಆಗಿದೆ. ಲಿಖಿತ್‌ಗೆ ವಹಿಸಿರುವ ಕೆಲಸ ಯಶಸ್‌ಗೆ ನೀಡುತ್ತಾರೆ. ಇದನ್ನು ಗಮನಿಸಿದ ಸಂಗೀತಾ ಈ ಬಗ್ಗೆ ಪ್ರಶ್ನೆ ಇಡುತ್ತಾರೆ. ಸಂಗೀತಾ ಅವರು ಯಶಸ್ ಬಳಿ ಒಬ್ಬರೇ ಯಾಕೆ ಕೆಲಸ ಮಾಡ್ತಾ ಇದ್ದೀರಾ ಎಂದು ಕೇಳಿದ್ದಾರೆ. ಇದು ಲಿಖಿತ್‌ಗೆ ಕೋಪ ತರಿಸವಂತೆ ಆಗಿದೆ. ಅಷ್ಟೇ ಅಲ್ಲದೇ ಮನೆಯಲ್ಲಿ ಬಾತ್ ರೂಮ್ ಎಲ್ಲವೂ ಕ್ಲೀನ್ ಮಾಡಿದೆ ನಾಳೆ ನಾನು ಗುಡಿಸುವೆ ಎಂದು ಯಶಸ್ ಬಳಿ ಲಿಖಿತ್ ಹೇಳಿದ್ದರು. ಆದರೆ ಇತ್ತ ಸಂಗೀತಾ ಕೊಟ್ಟ ಕೆಲಸ ಬೇರೆಯವರಿಗೆ ಯಾಕೆ ವಹಿಸಿದ್ದೀರಿ ಎಂದು ಪ್ರಶ್ನೆ ಇಟ್ಟಿದ್ದಾರೆ.
ಇದನ್ನೂ ಓದಿ: Amruthadhaare: 'ಅಮೃತಧಾರೆ'ಯ ಪ್ರೇಮ ಪರ್ವಕ್ಕೆ ಗೌತಮ್ - ಭೂಮಿಕಾನೇ ಮೇರು ಶಿಖರಗಳು!
ಲಿಖಿತ್ ಮರು ಪ್ರಶ್ನೆ ಇಟ್ಟಾಗ ನಾವು ಗೌರಯುತವಾಗಿ ಮಾತನಾಡುತ್ತಿದ್ದೀನಿ ಅಂದ್ರೆ ನೀವು ಹಾಗೇ ಮಾತನಾಡಬೇಕು ಎಂದು ಗರಂ ಆಗಿದ್ದಾರೆ.
ಸಂಗೀತಾ ಭಟ್, ಕಿರಣ್ ಶಾಸ್ತ್ರಿ ಅವರ ವಿರುದ್ಧ ಗೆದ್ದು ಪೈಲಟ್ ಪಟ್ಟಕ್ಕೇರಿದ್ದಾರೆ. ʻಬಿಗ್ ಬಾಸ್ʼ ಮನೆಗೆ ಕಾಲಿಟ್ಟ ಮೊದಲ ವಾರದಲ್ಲೇ ಪೈಲಟ್ ಆಗಿ ಹೊರಹೊಮ್ಮಿದ್ದಾರೆ ಸಂಗೀತಾ ಭಟ್.
ಲಟ್ ರೇಸ್‌ನಲ್ಲಿ ಹಲವು ಸ್ಪರ್ಧಿಗಳು ಭಾಗವಹಿಸಿದ್ದರೂ, ಅಂತಿಮ ಹಂತದಲ್ಲಿ ಸಂಗೀತಾ ಭಟ್ ಹಾಗೂ ಕಿರಣ್ ಶಾಸ್ತ್ರೀ ಅವರ ನಡುವೆ ಫೈಟ್ ಇತ್ತು. ಇಬ್ಬರೂ ʻಬಿಗ್ ಬಾಸ್ʼ ನೀಡಿದ ಸವಾಲನ್ನ ಎದುರಿಸಿದ್ರು. ಮೊದಲ ಪೈಲಟ್ ಆದ ಸಂಗೀತಾ ಭಟ್ ಅವರಿಗೆ ʻಬಿಗ್ ಬಾಸ್ʼ ಅಡ್ವಾಂಟೇಜ್ ಒಂದನ್ನ ನೀಡಿದ್ದರು.
ಇದನ್ನೂ ಓದಿ: Bigg Boss Kannada 13: ದೊಡ್ಮನೆಯಲ್ಲಿ ನಾಲಿಗೆ ಹರಿಬಿಟ್ಟ ಕಿರಣ್ ಶಾಸ್ತ್ರಿ; ಎದೆ ಮೇಲೆ ಕಾಲಿಕ್ತೀನಿ ಎಂದು ಗುಡುಗಿದ ತಾಂಡವ್!
ಈ ಅಧಿಕಾರವನ್ನ ಬಳಸಿಕೊಂಡು ಸಂಗೀತಾ ಅವರು ವೈಷ್ಣವಿ ಅವರನ್ನ ನಾಮಿನೇಷನ್ ಪ್ರಕ್ರಿಯೆಗೆ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಸಂಗೀತಾ ಭಟ್ ಅವರಿಗೆ ಕೋ-ಪೈಲಟ್‌ನ ಆಯ್ಕೆ ಮಾಡಿಕೊಳ್ಳುವ ಅಡ್ವಾಂಟೇಜ್ ಅನ್ನು ಕೂಡ ʻಬಿಗ್ ಬಾಸ್ʼ ನೀಡಿದ್ರು. ಹೀಗಾಗಿ, ಸಂಗೀತಾ ಭಟ್ ಅವರು ಆಸಿಯಾ ಫಿರ್ದೋಸ್ ಅವರನ್ನ ತಮ್ಮ ʻಕೋ ಪೈಲಟ್ʼ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ.