Bigg Boss Kannada 13: ದೊಡ್ಮನೆಯಲ್ಲಿ ನಾಲಿಗೆ ಹರಿಬಿಟ್ಟ ಕಿರಣ್ ಶಾಸ್ತ್ರಿ; ಎದೆ ಮೇಲೆ ಕಾಲಿಕ್ತೀನಿ ಎಂದು ಗುಡುಗಿದ ತಾಂಡವ್!
Bigg Boss Kannada 13: ನಾಮಿನೇಷನ್ ಕದನ ಸ್ಫೋಟಗೊಂಡಿದೆ. ಕಿರಣ್ ಶಾಸ್ತ್ರಿ ಅಖಾಡಕ್ಕಿಳಿದು ವೈಷ್ಣವಿ ಕೌಂಡಿನ್ಯ, ಕಾವ್ಯ ಮೇಲೆ ವಾಗ್ದಾಳಿ ನಡೆಸಿದಲ್ಲದೇ, ತಾಂಡವ್ ರಾಮ್ ಮೇಲೆ ಜಗಳಕ್ಕೆ ಬಿದ್ದಿದ್ದಾರೆ. ‘ಅಗ್ನಿಪರೀಕ್ಷೆ’ಯಿಂದ ಆಯ್ಕೆ ‘ಬಿಗ್ ಬಾಸ್’ ಮನೆಯೊಳಗೆ ಬಂದ ನಾಲ್ವರ ಪೈಕಿ ಕಿರಣ್ ಶಾಸ್ತ್ರಿ ಬರಬರುತ್ತಲೇ ಪ್ರಥಮ ಪ್ರಸಾದ್ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಇದೀಗ ತಾಂಡವ್ ಸರದಿ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 13) ನಾಮಿನೇಷನ್ ಕದನ ಸ್ಫೋಟಗೊಂಡಿದೆ. ಕಿರಣ್ ಶಾಸ್ತ್ರಿ ಅಖಾಡಕ್ಕಿಳಿದು ವೈಷ್ಣವಿ ಕೌಂಡಿನ್ಯ, ಕಾವ್ಯ ಮೇಲೆ ವಾಗ್ದಾಳಿ ನಡೆಸಿದಲ್ಲದೇ, ತಾಂಡವ್ ರಾಮ್ ಮೇಲೆ ಜಗಳಕ್ಕೆ ಬಿದ್ದಿದ್ದಾರೆ. ‘ಅಗ್ನಿಪರೀಕ್ಷೆ’ಯಿಂದ ಆಯ್ಕೆ ‘ಬಿಗ್ ಬಾಸ್’ ಮನೆಯೊಳಗೆ ಬಂದ ನಾಲ್ವರ ಪೈಕಿ ಕಿರಣ್ ಶಾಸ್ತ್ರಿ (Kiran Shastri) ಬರಬರುತ್ತಲೇ ಪ್ರಥಮ ಪ್ರಸಾದ್ (Prathama Prasad) ಜೊತೆ ಕಿರಿಕ್ ಮಾಡಿಕೊಂಡಿದ್ದರು. ಇದೀಗ ತಾಂಡವ್ (Thandav) ಸರದಿ.
ಟಾಸ್ಕ್ ಅರ್ಥ ಮಾಡಿಕೊಳ್ಳದ ದಂಡಪಿಂಡ!
ಟಾಸ್ಕ್ ಮುಗಿದ ಬಳಿಕವೂ ಇಬ್ಬರ ನಡುವೆ ಮಾರಾಮಾರಿಯಾಗಿದೆ. ಪೈಲೆಟ್ ಆಯ್ಕೆಗಾಗಿ ನಡೆದ ಟಾಸ್ಕ್ ವೇಳೆ ಪಂಚೆಯಲ್ಲಿ ವಸ್ತುಗಳನ್ನ ತಂದೆ ಪರಿಗಣಿಸೋದಿಲ್ಲ ಎಂದು ನಿಯಮವಿತ್ತು. ಕೊನೆಯ ಸುತ್ತಿನಲ್ಲಿ ಪಂಚೆಯಲ್ಲಿ ವಸ್ತುಗಳನ್ನ ತಂದರು ಕಿರಣ್ ಶಾಸ್ತ್ರಿ.
ಕಿರಣ್ ಶಾಸ್ತ್ರಿ ಅವರನ್ನ ವ್ಯವಸ್ಥಾಪಕರು ಆಟದಿಂದ ಹೊರಗೆ ಹಾಕಿ ಎಂದು ಪಟ್ಟು ಹಿಡಿದರು. ಆದರೆ ಪಂಚೆಯಲ್ಲಿ ವಸ್ತುಗಳನ್ನ ತರಬಾರದು ಎಲ್ಲೂ ಬರೆದಿಲ್ಲ. ಪಂಚೆಯಲ್ಲಿ ತಂದ ವಸ್ತುಗಳನ್ನ ಬಿಟ್ಟು ಬಾಕಿ ವಸ್ತುಗಳನ್ನ ಲೆಕ್ಕ ಹಾಕಬೇಕಿತ್ತು ಎಂಬುದು ಕಿರಣ್ ವಾದ. ಈ ವಿಚಾರವಾಗಿ ನಾಮಿನೇಶನ್ ವೇಳೆ ತಾಂಡವ್ ಸೂಚಿಸಿದರು. ಟಾಸ್ಕ್ ಅರ್ಥ ಮಾಡಿಕೊಳ್ಳದ ದಂಡಪಿಂಡ ಎಂದು ತಾಂಡವ್ ಕುರಿತು ಕಿರಣ್ ಶಾಸ್ತ್ರಿ ಕೂಗಾಡಿದರು.
ಕೊಟ್ಟ ಕೆಲಸವನ್ನ ನಾನು ನೀಟ್ ಆಗಿ ಮಾಡಿದ್ದೇನೆ. ಸೋಲನ್ನ ಒಪ್ಪಿಕೊಳ್ಳುವ ಮನಸ್ಥಿತಿ ಕಿರಣ್ ಶಾಸ್ತ್ರಿಗೆ ಇಲ್ಲ ಎಂದು ತಾಂಡವ್ ಕಿರಣ್ ಅವರನ್ನು ನಾಮಿನೇಟ್ ಮಾಡಿದರು. ಗೆಲ್ಲದಿದ್ದರೆ ತೀರ್ಪು ಕೊಡುವ ಜಡ್ಜ್‌ಗಳೇ ಸರಿಯಿಲ್ಲ ಅಂತ ಹೇಳೋದು ಸರಿಯಲ್ಲ. ನಾವು ನಮ್ಮ ಕೆಲಸವನ್ನ ಅಚ್ಚುಕಟ್ಟಾಗಿ ಮಾಡಿದ್ದೀವಿ ಎಂದು ತಾಂಡವ್ ರಾಮ್ ಕಾರಣ ಕೊಟ್ಟರು.
ಕನ್ನಡ ಮಾತಾಡೋ ಕೋ’ದಂಡ’ ರಾಮ
ಇದಾದ ನಂತರ ಕಿರಣ್ ಅವರು ಕೂಗಾಡಲು ಶುರು ಮಾಡಿದರು. ಚೆನ್ನಾಗಿ ಕನ್ನಡ ಮಾತಾಡೋ ಕೋ’ದಂಡ’ ರಾಮನಿಗೆ ಒಂದು ಟಾಸ್ಕ್ ಅರ್ಥ ಮಾಡಿಕೊಳ್ಳೋಕೆ ಬರಲ್ಲ. ಚೀಪ್ ಆಗಿ ಸಂಚು ಮಾಡುವ ಗುಳ್ಳೆ ನರಿ ನೀನು. ಬ್ರೇನ್‌ಲೆಸ್ ಕೋದಂಡ ರಾಮ ನೀನು. ದಂಡಪಿಂಡ ಎಂದು ಹಲವು ಬಾರಿ ಹೇಳಿದರು.
ಟಾಸ್ಕ್ ಮುಗಿದ್ಮೇಲೆ ಮಾತನಾಡಿದರೆ ಎದೆಮೇಲೆ ಕಾಲು ಹಾಕ್ತೀನಿ ಅಂತ ತಾಂಡವ್ ರೊಚ್ಚಿಗೆದ್ದು ಕೂಗಾಡಿದರು. ಟಾಸ್ಕ್ ಮುಗೀತು. ಪಚಡಿ ಮಾಡ್ತೀನಿ ಮಗನೇ, ಆಟಕ್ಕೆ ಸಂಬಂಧಪಟ್ಟಂಗೆ ಇರಬೇಕು ಮಾತುಗಳು. ಇದೇ ಕೊನೆ ಎಂದು ಕಿರಣ್ ಶಾಸ್ತ್ರಿಗೆ ತಾಂಡವ್ ರಾಮ್ ವಾರ್ನಿಂಗ್ ಕೊಟ್ಟರು.
ಇದನ್ನೂ ಓದಿ: Amruthadhaare Serial: ಜೈದೇವ್ ಸತ್ತಿಲ್ಲ; ಮತ್ತೆ ಶುರು ಆಯ್ತು ಕೇಡಿ-ಟೀಚರಮ್ಮ ವಾರ್!
ನನ್ನ ಹೆಸರು ಕಿರಣ. ಶಾಸ್ತ್ರಿ ಅಲ್ಲ ಅಂತ ಕಿರಣ್ ಕೂಗಾಡಿದರು. ಮೈಕ್ ನೋಡು ಹೆಸರು ಕಣ್ಣಿಗೆ ಏನು ಇಟ್ಕೊಂಡಿದ್ದೀಯಾ? ಎಂದು ತಾಂಡವ್ ವಿರುದ್ಧ ಕೂಗಾಡಿದ್ದಾರೆ ಕಿರಣ್.