ಬಿಗ್ ಬಾಸ್ ಕನ್ನಡದ (Bigg Boss Kannada 13) ಮನೆಯಲ್ಲಿ ದಿನದಿಂದ ದಿನಕ್ಕೆ ಆಟವು ರೋಚಕ ಹಂತ ತಲುಪುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗಾಗಿ ಒಂದು ವಿಭಿನ್ನವಾದ ಅನಾಮಧೇಯ ಪತ್ರ ಬರೆಯುವ ಟಾಸ್ಕ್ ನೀಡಲಾಗಿದೆ. ಮನೆಯಲ್ಲಿ ಇಷ್ಟಪಡದ ಮೂರು ಸದಸ್ಯರನ್ನು ಉದ್ದೇಶಿಸಿ ಈ ಪತ್ರವನ್ನು(Letter) ಬರೆಯಬೇಕೆಂಬ ನಿಯಮ ವಿಧಿಸಲಾಗಿದೆ.ಸೌಂದರ್ಯ (jagga) ಅವರ ಮೇಲೆ ಜಗ್ಗ ಬೇಕಾಬಿಟ್ಟಿ ಮಾತನಾಡಿದ್ದಾರೆ.
ಎಲ್ಲರ ಬಗ್ಗೆ ಬೆನ್ನಹಿಂದೆ ಮಾತನಾಡುತ್ತೀಯಾ ಎಂದು ಬರೆದ ಪತ್ರಕ್ಕೆ, ಬರೆದವರು ಮಾನಗೇಡಿ. ಬರೆದವರು ಅತ್ಯಂತ ಲಫಂಗಾ ಎಂದು ಕೋಪದಿಂದ ಪತ್ರವನ್ನು ಹರಿದು ಹಾಕಿದ್ದಾರೆ. ಅಷ್ಟೇ ಅಲ್ಲ ಸೌಂದರ್ಯ ಅವರ ಮೇಲೆ ಹರಿಹಾಯ್ದರು. ನೀನು ನಾಯಿಗಿಂತ ಕಡೆ, ಹೋಗು ಕಚಡಾ ಎಂದು ಬೈದಿದ್ದಾರೆ ಜಗ್ಗ.
ಇದನ್ನೂ ಓದಿ: Bigg Boss Kannada 13: ಪತ್ರಕ್ಕಾಗಿ ಕಠಿಣ ಪೈಪೋಟಿ; ತಾಂಡವ್, ಧನುಷ್ ನಡುವೆ ಜಿದ್ದಾಜಿದ್ದಿ!
ಈ ಟಾಸ್ಕ್ನ ಭಾಗವಾಗಿ ಸ್ಪರ್ಧಿಗಳು ತಮ್ಮ ಆಕ್ರೋಶ ಹಾಗೂ ಅಸಮಾಧಾನವನ್ನು ಪತ್ರದ ಮೂಲಕ ಹೊರಹಾಕುತ್ತಿದ್ದಾರೆ. ಪ್ರಮುಖವಾಗಿ ತಾಂಡವ್ ಅವರನ್ನು ಉದ್ದೇಶಿಸಿ ಬರೆಯಲಾದ ಪತ್ರದಲ್ಲಿ, ಪ್ರಶಾಂತ್ ‘ಮನೆಯಲ್ಲಿ ನೀನೇ ದೊಡ್ಡ ರೌಡಿನೇನೋ, ಬಿಲ್ಡಪ್ ಜಾಸ್ತಿ’ ಎಂದು ತರಾಟೆಗೆ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಗೆಲ್ಲೋದು ಯಾರು?
ಸ್ಪರ್ಧಿಗಳು ಮುಖಾಮುಖಿಯಾಗಿ ಮಾತನಾಡಿಕೊಳ್ಳುವುದಕ್ಕಿಂತ ಈ ರೀತಿಯ ಪತ್ರಗಳ ಮೂಲಕ ತಮ್ಮ ವೈಮನಸ್ಸನ್ನು ವ್ಯಕ್ತಪಡಿಸುತ್ತಿರುವುದು ಮನೆಯ ವಾತಾವರಣವನ್ನು ಮತ್ತಷ್ಟು ಬಿಸಿಯೇರಿಸಿದೆ. ಯಾರು ಯಾವ ಸ್ಪರ್ಧಿಗೆ ಈ ಪತ್ರ ಬರೆದಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.