Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಗೆಲ್ಲೋದು ಯಾರು?
Bigg Boss Kannada 13:ʻಬಿಗ್ ಬಾಸ್ʼ ಮನೆಯಲ್ಲಿ (Bigg Boss Kannada 13) ಬರುವ ಲೆಟರ್ ಟಾಸ್ಕ್ ಎಂದರೆ ಸ್ಪರ್ಧಿಗಳಿಗಷ್ಟೇ ಅಲ್ಲ, ವೀಕ್ಷಕರಿಗೂ ತೀವ್ರ ಭಾವನಾತ್ಮಕ ಕ್ಷಣ ಗೇಮ್ ಪ್ಲಾನ್ಗೆ ಹೊಸ ಟ್ವಿಸ್ಟ್ ನೀಡಿದೆ. ಲೆಟರ್ ಪಡೆದ ಖುಷಿಯಲ್ಲಿದ್ದವರಿಗೆ ಕ್ಯಾಪ್ಟನ್ಸಿ (Captaincy task) ಆಫರ್ ಸಿಕ್ಕರೆ, ಪತ್ರ ಸಿಗದೇ ನಿರಾಸೆಗೊಂಡಿದ್ದ ಸ್ಪರ್ಧಿಗಳ ಕೈಗೆ ʻಬಿಗ್ ಬಾಸ್ʼ ಬಿಗ್ ಪವರ್ ನೀಡಿದ್ದಾರೆ.ಸೌಂದರ್ಯ, ಯಶಸ್, ಗಾನವಿ, ಕಿರಣ್ ಶಾಸ್ತ್ರಿ, ಪ್ರಶಾಂತ್, ಧನುಷ್, ಜಗ್ಗ ಮಮ್ಮಿ ಹಾಗೂ ಗಗನ್ ಯಶಸ್ವಿಯಾಗಿ ತಮ್ಮ ಮನೆಗಳಿಂದ ಬಂದ ಪತ್ರಗಳನ್ನ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಬಿಗ್ ಬಾಸ್ ಕನ್ನಡ -
ʻಬಿಗ್ ಬಾಸ್ʼ ಮನೆಯಲ್ಲಿ (Bigg Boss Kannada 13) ಬರುವ ಲೆಟರ್ ಟಾಸ್ಕ್ ಎಂದರೆ ಸ್ಪರ್ಧಿಗಳಿಗಷ್ಟೇ ಅಲ್ಲ, ವೀಕ್ಷಕರಿಗೂ ತೀವ್ರ ಭಾವನಾತ್ಮಕ ಕ್ಷಣ ಗೇಮ್ ಪ್ಲಾನ್ಗೆ ಹೊಸ ಟ್ವಿಸ್ಟ್ ನೀಡಿದೆ. ಲೆಟರ್ ಪಡೆದ ಖುಷಿಯಲ್ಲಿದ್ದವರಿಗೆ ಕ್ಯಾಪ್ಟನ್ಸಿ (Captaincy task) ಆಫರ್ ಸಿಕ್ಕರೆ, ಪತ್ರ ಸಿಗದೇ ನಿರಾಸೆಗೊಂಡಿದ್ದ ಸ್ಪರ್ಧಿಗಳ ಕೈಗೆ ʻಬಿಗ್ ಬಾಸ್ʼ ಬಿಗ್ ಪವರ್ ನೀಡಿದ್ದಾರೆ.ಸೌಂದರ್ಯ, ಯಶಸ್, ಗಾನವಿ, ಕಿರಣ್ ಶಾಸ್ತ್ರಿ, ಪ್ರಶಾಂತ್, ಧನುಷ್, ಜಗ್ಗ ಮಮ್ಮಿ ಹಾಗೂ ಗಗನ್ ಯಶಸ್ವಿಯಾಗಿ ತಮ್ಮ ಮನೆಗಳಿಂದ ಬಂದ ಪತ್ರಗಳನ್ನ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಲೆಟರ್ ಪಡೆದ ಈ ಎಂಟು ಸದಸ್ಯರಿಗೆ ಮಾತ್ರ ಈ ವಾರದ ಕ್ಯಾಪ್ಟನ್ಸಿ ಓಟದಲ್ಲಿ ಭಾಗವಹಿಸುವ ಸುವರ್ಣ ಅವಕಾಶ ಕಲ್ಪಿಸಲಾಯ್ತು. 8 ಜನರ ಪೈಕಿ ಕೇವಲ ನಾಲ್ವರಿಗೆ ಮಾತ್ರ ಅಂತಿಮವಾಗಿ ಕ್ಯಾಪ್ಟನ್ಸಿ ಟಾಸ್ಕ್ ಆಡುವ ಅವಕಾಶ ಸಿಕ್ಕಿತು.
ಆಯ್ಕೆಯಾದ ನಾಲ್ವರ ನಡುವೆ ನಡೆದ ಮೊದಲನೇ ಸುತ್ತಿನ ಟಾಸ್ಕ್ನಲ್ಲಿ ಗಾನವಿ ಗೌಡ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದರು. ಈ ಗೆಲುವಿನೊಂದಿಗೆ ಅವರಿಗೆ ಸಿಕ್ಕ ವಿಶೇಷ ಅಧಿಕಾರ ಬಳಸಿ, ಧನುಷ್ ಅವರನ್ನ ಕ್ಯಾಪ್ಟನ್ಸಿ ರೇಸ್ನಿಂದ ಹೊರಗಿಟ್ಟರು. ಅಂತಿಮವಾಗಿ ಯಶಸ್ ಹಾಗೂ ಗಾನವಿ ಇದ್ದಾರೆ. Captain ಆಗೋಕೆ ಹಗ್ಗ ಜಗ್ಗಾಟ ನಡೆದಿದೆ. ಇವರಿಬ್ಬರಲ್ಲಿ ಯಾರು ಕ್ಯಾಪ್ಟನ್ ಆಗಲಿದ್ದಾರೆ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Vijay Trisha: ಜಗನ್ ಮೋಹನ್ ರೆಡ್ಡಿ ಕುಟುಂಬದ ಮದುವೆಯಲ್ಲಿ ಒಟ್ಟಾಗಿ ಬಂದ ವಿಜಯ್-ತ್ರಿಷಾ!