ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಬಿಗ್ ಬಾಸ್ ಮನೆಯಿಂದ ಕಾವ್ಯ ಔಟ್‌!

Bigg Boss Kannada 13: 'ಬಿಗ್‌ ಬಾಸ್‌ ಕನ್ನಡ ಸೀಸನ್‌-13'ರ ಈ ವೀಕ್‌ ಕಾವ್ಯ ಗೌಡ (Kavya Gowda) ಅವರು ಎಲಿಮಿನೇಟ್‌ ಆಗಿದ್ದಾರೆ . 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಶ್ರೇಷ್ಠಾ ಎಂಬ ಪಾತ್ರ ಮಾಡಿದ್ದರು ನಟಿ. ‘ಕ್ವಾಟ್ಲೆ ಕಿಚನ್‌’ಶೋನಲ್ಲಿ ಕೂಡ ಭಾಗಿಯಾಗಿದ್ದರು. ಧಾರಾವಾಹಿ ಮುಕ್ತಾಯದ ನಂತರ ಇವರು ಯಾವುದೇ ಹೊಸ ಪ್ರಾಜೆಕ್ಟ್‌ ಬಗ್ಗೆ ಅನೌನ್ಸ್‌ ಮಾಡದೇ ನೇರವಾಗಿ ಬಂದದ್ದು ಬಿಗ್‌ ಬಾಸ್‌ ಮನೆಗೆ. ಆದರೀಗ ಔಟ್‌ ಆಗಿದ್ದಾರೆ.

ಬಿಗ್‌ ಬಾಸ್‌ ಕನ್ನಡ

'ಬಿಗ್‌ ಬಾಸ್‌ ಕನ್ನಡ ಸೀಸನ್‌-13'ರ ಈ ವೀಕ್‌ ಕಾವ್ಯ ಗೌಡ (Kavya Gowda) ಅವರು ಎಲಿಮಿನೇಟ್‌ (Eliminate). 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಶ್ರೇಷ್ಠಾ ಎಂಬ ಪಾತ್ರ ಮಾಡಿದ್ದರು ನಟಿ. ‘ಕ್ವಾಟ್ಲೆ ಕಿಚನ್‌’ಶೋನಲ್ಲಿ ಕೂಡ ಭಾಗಿಯಾಗಿದ್ದರು. ಧಾರಾವಾಹಿ ಮುಕ್ತಾಯದ ನಂತರ ಇವರು ಯಾವುದೇ ಹೊಸ ಪ್ರಾಜೆಕ್ಟ್‌ ಬಗ್ಗೆ ಅನೌನ್ಸ್‌ ಮಾಡದೇ ನೇರವಾಗಿ ಬಂದದ್ದು ಬಿಗ್‌ ಬಾಸ್‌ (Bigg Boss Kannada 13) ಮನೆಗೆ. ಆದರೀಗ ಔಟ್‌ ಆಗಿದ್ದಾರೆ.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಆಸಿಯಾ, ಸೋನಿಕಾ ಗೌಡ, ಗಾನವಿ, ಗಗನ್, ಜಗದೀಶ್, ಕಾವ್ಯಾ, ತಾಂಡವ್ ರಾಮ್ ನಾಮಿನೇಟ್ ಆಗಿದ್ದರು. ಈ ಪೈಕಿ ಕಾವ್ಯಾ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ. ಅವರಿಗೆ ಕಡಿಮೆ ಮತಗಳು ಸಿಕ್ಕಿವೆ.

ಭಾಗ್ಯಲಕ್ಷ್ಮೀ’ ಧಾರಾವಾಹಿಗೆ ಬರುವ ಮುನ್ನ ತೆಲುಗು ಭಾಷೆಯಲ್ಲಿ ಧಾರಾವಾಹಿ ಮಾಡಿದ್ದಾರೆ. ಓದುತ್ತಿರುವಾಗಲೇ ಇವರಿಗೆ ನಟನೆ ಆಫರ್‌ ಬಂತು. ಕನ್ನಡದಲ್ಲಿ ‘ಮಿಸ್ಟರ್‌ ಅಂಡ ಮಿಸಸ್‌ ರಂಗೇಗೌಡ’ ಧಾರಾವಾಹಿ ಸೇರಿದಂತೆ ‘ರಿಂಗಾ ರಿಂಗ ರೋಸಸ್‌’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ನಟಿ ಸಂಗೀತಾ ಭಟ್ ಅವರು ಬಿಗ್‌ ಬಾಸ್‌ ಮನೆ ಪ್ರವೇಶ ಮಾಡಿದ ನಂತರ ಬಂದಿದ್ದು ಕಾವ್ಯ ಮುನಿರಾಜು ಗೌಡ. 7ನೇ ಸ್ಪಧಿಯಾಗಿ ಎಂಟ್ರಿ ಕೊಟ್ಟರು.

ಇದನ್ನೂ ಓದಿ: Bigg Boss Kannada 13: ಕಿರೀಟ ತೊಟ್ಟು ಕಿಚ್ಚ ಸುದೀಪ್‌ ಎದುರು ʻದೊಡ್ಡವರೆಲ್ಲ ಜಾಣರಲ್ಲʼ ಎಂದ ಕುಮಾರಿ

ಉಸ್ತುವಾರಿ ಫೇಲ್‌

ಕಾವ್ಯ ಅವರು ಟಾಸ್ಕ್‌ಗಳಾಗಲಿ, ಯಾವುದೇ ವಿಚಾರವಾಗಲಿ ಅಷ್ಟು ಆಕ್ಟಿವ್‌ ಇರಲಿಲ್ಲ. ಈ ವಾರದ ಟಾಸ್ಕ್‌ನಲ್ಲಿ ಉಸ್ತುವಾರಿಯನ್ನು ಸರಿಯಾಗಿ ನಿಭಾಯಿಸಿರಲಿಲ್ಲ. ಕಳಪೆ ಪ್ರಕ್ರಿಯೆಯ ವೇಳೆ ಕಾವ್ಯ ಅವರನ್ನೇ ನೇರ ಟಾರ್ಗೆಟ್ ಮಾಡಿದ ಕುಮಾರಿ, “ನೀವು ಮೊದಲ ವಾರದಿಂದಲೂ ಈ ಮನೆಯಲ್ಲಿದ್ದೀರ. ಆದರೆ, ಆಟದ ನಿಯಮಗಳನ್ನ ಮೀರಿ, ಮನಬಂದಂತೆ ರೂಲ್ಸ್ ಚೇಂಜ್ ಮಾಡದೇ ಆಡಬೇಕು ಎನ್ನುವ ಕನಿಷ್ಠ ಕಾಮನ್‌ ಸೆನ್ಸ್ ನಿಮಗಿಲ್ಲ. ನಿಮ್ಮಲ್ಲಿ ಬರೀ ಮಾತಷ್ಟೇ ಇದೆ, ಪರ್ಫಾರ್ಮೆನ್ಸ್‌ನಲ್ಲಿ ಯಾವುದೇ ರೀತಿಯ ಶ್ರಮ ಅಥವಾ ಪ್ರದರ್ಶನ ಕಾಣಿಸ್ತಿಲ್ಲ” ಎಂದು ವಾಗ್ದಾಳಿ ನಡೆಸಿದ್ದರು.



ಇದನ್ನೂ ಓದಿ: Bigg Boss Kannada 13: ಗೇಮ್‌ ಅರ್ಥ ಆಗಿಲ್ಲದವರು ಮನೆ ಬಿಟ್ಟು ಹೊರಡಿ ಎಂದ ಕಿಚ್ಚ! ಜಗ್ಗ ಮಮ್ಮಿ ಶಾಕ್‌

ಈ ಗಲಾಟೆಗೆ ಹಿನ್ನೆಲೆಯಾಗಿ ʻಪಜಲ್ ಪೈಪೋಟಿʼ ಟಾಸ್ಕ್‌ನ ವೈಫಲ್ಯವೂ ಕೂಡ ಕಾರಣವಾಗಿತ್ತು. ಈ ಟಾಸ್ಕ್‌ನಲ್ಲಿ ಕಾವ್ಯ ಮತ್ತು ಗಾನವಿ ಉಸ್ತುವಾರಿ ವಹಿಸಿಕೊಂಡಿದ್ದರು.

ಆದರೆ, ಆಟ ಆರಂಭವಾದಾಗಿನಿಂದ ಸ್ಪರ್ಧಿಗಳು ಮತ್ತು ಉಸ್ತುವಾರಿಗಳು ನಿಯಮಗಳನ್ನ ತಮಗೆ ಬೇಕಾದಂತೆ ಬದಲಾಯಿಸಿಕೊಂಡು ಉಡಾಫೆಯ ಆಟ ಪ್ರದರ್ಶಿಸಿದ್ರು. ಇದರಿಂದ, ತೀವ್ರ ಅಸಮಾಧಾನಗೊಂಡ ʻಬಿಗ್ ಬಾಸ್ʼ, ಇಡೀ ಟಾಸ್ಕ್ ಅನ್ನೇ ರದ್ದುಗೊಳಿಸಿದ್ದರು.

Yashaswi Devadiga

View all posts by this author