Bigg Boss Kannada 12: ʻಅಶ್ವಿನಿ ಗೌಡ 2.O ವರ್ಷನ್ ನಾಟಕʼ! ಏಕವಚನಕ್ಕೆ ತಿರುಗಿದ ಕಾವ್ಯ-ಅಶ್ವಿನಿ ಗೌಡ ಜಗಳ
Kavya Shaiva: ಬಿಗ್ ಬಾಸ್ ಸೀಸನ್ 12ರ ಕೊನೆಯ ನಾಮಿನೇಶನ್ ಪ್ರಕ್ರಿಯೆ ನಿನ್ನೆ ನಡೆದಿದೆ. ಧನುಷ್ ಬಿಟ್ಟು ಉಳಿದ ಎಲ್ಲ ಸದಸ್ಯರು ನಾಮಿನೇಟ್ ಆಗಿದ್ದಾರೆ. ಸ್ಪರ್ಧಿಗಳ ಮಧ್ಯೆ ಕಾರಣ ಕೊಡುವಾಗ, ಜಗಳಗಳು ತಾರಕಕ್ಕೇರಿತ್ತು. ಅದರಲ್ಲೂ ಕಾವ್ಯ ಹಾಗೂ ಅಶ್ವಿನಿ ಅವರು ಒಬ್ಬರಿಗೊಬ್ಬರು ಏಕವಚನ ಬಳಕೆ ಮಾಡಿದ್ದಾರೆ. ಕಾವ್ಯ ಅವರು ನೇರವಾಗಿ ಅಶ್ವಿನಿ ಅವರಿಗೆ ಅಶ್ವಿನಿ ಗೌಡ 2.O ವರ್ಷನ್ ನಾಟಕ ಎಂದು ಆರೋಪಿಸಿದರು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ಕೊನೆಯ ನಾಮಿನೇಶನ್ (Nomination) ಪ್ರಕ್ರಿಯೆ ನಿನ್ನೆ ನಡೆದಿದೆ. ಧನುಷ್ ಬಿಟ್ಟು ಉಳಿದ ಎಲ್ಲ ಸದಸ್ಯರು ನಾಮಿನೇಟ್ ಆಗಿದ್ದಾರೆ. ಸ್ಪರ್ಧಿಗಳ ಮಧ್ಯೆ ಕಾರಣ ಕೊಡುವಾಗ, ಜಗಳಗಳು ತಾರಕಕ್ಕೇರಿತ್ತು. ಅದರಲ್ಲೂ ಕಾವ್ಯ (Kavya And Ashwini) ಹಾಗೂ ಅಶ್ವಿನಿ ಅವರು ಒಬ್ಬರಿಗೊಬ್ಬರು ಏಕವಚನ ಬಳಕೆ ಮಾಡಿದ್ದಾರೆ. ಕಾವ್ಯ ಅವರು ನೇರವಾಗಿ ಅಶ್ವಿನಿ ಅವರಿಗೆ ಅಶ್ವಿನಿ ಗೌಡ (Ashwini Gowda) 2.O ವರ್ಷನ್ ನಾಟಕ ಎಂದು ಆರೋಪಿಸಿದರು.
ಡ್ರಾಮ ಮಾಡ್ತಾ ಇದ್ದಾರೆ
ಮನೆಯವರೆಲ್ಲರೂ ಹೆಚ್ಚಾಗಿ ಅಶ್ವಿನಿ ಅವರನ್ನು ನಾಮಿನೇಟ್ ಮಾಡುವಾಗ, ರಾಶಿಕಾ ಕುರಿತಾದ ಕಾರಣವನ್ನೇ ಹೇಳಿದರು. ಕಾವ್ಯ ಮಾತನಾಡಿ, `ಬಿಗ್ ಬಾಸ್ ಅನ್ನೋದು ಒಂದು ವ್ಯಕ್ತಿತ್ವದ ಆಟ. ಹೆಣ್ಣಿನ ಪರ ಹೊರಗಡೆ ಹೋರಾಟ ಮಾಡಿರಬಹುದು. ಆದರೆ ಈ ಮನೆಯಲ್ಲಿ ಹೆಣ್ಣಿನ ಬಗ್ಗೆ ಚಿಕ್ಕದಾಗಿ ಕೆಟ್ಟಾದಿಗಿ ಮಾತಾಡಿದ್ದಾರೆ ಅನ್ನೋದು ನೋಡಿಕೊಂಡು ಬರ್ತಾನೆ ಇದ್ದೇವೆ. ಅವರ ಇರೋದಕ್ಕೂ, ಮನೆಯಲ್ಲಿ ನಡೆದುಕೊಳ್ಳೋದಕ್ಕೂ ಸಂಬಂಧ ಇಲ್ಲ. ಅವರು ನಾಟಕ ಮಾಡ್ತಾ ಇದ್ದಾರೆ. ಅಶ್ವಿನಿ ಅವರು 2.0 ಅಂತ ಏನು ಹೇಳ್ತಾ ಇದ್ದಾರೆ ಅದೆಲ್ಲ ನಾಟಕ. ಡ್ರಾಮ ಮಾಡ್ತಾ ಇದ್ದಾರೆ. ಅವರಿಗೆ ತಪ್ಪು ಅರ್ಥ ಆಗಿದೆ ಅನ್ಸಿಲ್ಲ, ಅವರಿಗೆ ಅನ್ಸೋದು ಇಲ್ಲ' ಎಂದಿದ್ದಾರೆ.
Anna neene avalna Roast maadthidiya
— Toxic (@RamannavarShivu) January 5, 2026
Personality Queen antha heli heli
In naan en helali 😭😭#bbk12 #BBK12live https://t.co/zh22kGRylw
ಫಿನಾಲೆ ತನಕ ಹೇಗೆ ಬಂದೆ ಅಂತ ಗೊತ್ತು
ಇನ್ನು ಕಾವ್ಯ ಬಗ್ಗೆ ಮಾತನಾಡಿದ ಅಶ್ವಿನಿ, ಫಿನಾಲೆ ತನಕ ಹೇಗೆ ಬಂದೆ ಅಂತ ಗೊತ್ತು. ಕಾವ್ಯಾ ಇಲ್ಲಿಯವರೆಗೆ ಹೇಗೆ ಬಂದಿದ್ದಾರೆ ಎಂಬುದನ್ನು ಇಡೀ ಕರ್ನಾಟಕ ನೋಡಿದೆ ಎಂದು ಗಿಲ್ಲಿಯಿಂದ ಎಂಬಂತೆ ಪರೋಕ್ಷವಾಗಿ ಹೇಳಿದರು.
ನಾನು ಬದಲಾಗಿಲ್ಲ ಅನ್ನೋಕೆ ನೀವು ಏನು ಬದಲಾಗಿದ್ದೀರಿ? ನಾನು ಬದಲಾಗೋ ಕೆಟಗರಿ ಅಲ್ಲ. ನನ್ನ ವ್ಯಕ್ತಿತ್ವ ಬಗ್ಗೆ ಮಾತಾಡೋ ಅರ್ಹತೆ ಇಲ್ಲ. ನನ್ನ ಅನುಭವ ನಿನ್ನ ವಯಸ್ಸಿನಷ್ಟು ಅಲ್ಲ. ಸೇಫ್ ಗೇಮ್ ಆಡ್ತಾ ಬಂದಿದ್ದೀಯಾ. ಯಾರೋ ಒಬ್ಬರು ಕಾವು ಅಂತ ಕರೆದಾಗ ನೀನು ಯಾರು ಅಂತ ಗೊತ್ತಾಗತ್ತೆ. ‘ನೀನು ಫ್ರೀ ಪ್ರಾಡಕ್ಟ್ ಎಂದು ಅಶ್ವಿನಿ ಅವರು ಕಾವ್ಯಾಗೆ ಹೇಳಿದರು. ನಿನ್ನ ಬಗ್ಗೆ ಕ್ಲಾರಿಟಿ ಕೊಡು. ಹೋಗಲೆ ಎಂದೇ ಕಾವ್ಯ ಅವರು ಅಶ್ವಿನಿಗೆ ಹೇಳಿದ್ದಾರೆ.
ಬಿಗ್ ಬಾಸ್ ಸೀಸನ್ 12ರ ಫಿನಾಲೆ ಇನ್ನೇನು ಸಮೀಪಿಸಲು ಕೆಲವೇ ದಿನಗಳು ಬಾಕಿ ಇವೆ. ಕೊನೆಯ ನಾಮಿನೇಶನ್ ಪ್ರಕ್ರಿಯೆ ಕೂಡ ಮುಕ್ತಾಯಗೊಂಡಿದೆ. ಸ್ಪರ್ಧಿಗಳ ಮಧ್ಯೆ ಈಗ ಪೈಪೋಟಿ ಜೋರಾಗಿದೆ.
ಇದನ್ನೂ ಓದಿ: Bigg Boss Kannada 12: ಮೊದಲ ಫಿನಾಲೆ ಟಿಕೆಟ್ ಪಡೆಯಲು ಸೋತು ಹೋದ್ರಾ ಗಿಲ್ಲಿ? `ಮಾತಿನ ಮಲ್ಲ'ನಿಗೆ ಧ್ರುವಂತ್ ಚಾಲೆಂಜ್!
ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ ಶೈವ, ಧನುಷ್, ರಕ್ಷಿತಾ ಶೆಟ್ಟಿ, ಮ್ಯಾಟೆಂಟ್ ರಘು ಅವರು ನಾಮಿನೇಟ್ ಆಗಿದ್ದಾರೆ. ಇದೀಗ ಫಿನಾಲೆ ಟಿಕೆಟ್ ಯಾರಿಗೆ ಸಿಗುತ್ತೆ ಎಂಬುದೇ ಕುತೂಹಲ.ಮೊದಲ ಟಿಕೆಟ್ ಪಡೆಯುವ ಮುಂದಿನ ಟಾಸ್ಕ್‌ಗಳಿಂದ ಗಿಲ್ಲಿ ಔಟ್ ಆಗ್ತಾರಾ? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.