‘ಬಿಗ್ ಬಾಸ್ ಕನ್ನಡ 13’ರ ಐದನೇ ವಾರದ ಪಂಚಾಯತಿಯಲ್ಲಿ ನಟ ಕಿಚ್ಚ ಸುದೀಪ್ ಅವರು ತೀವ್ರ ಆಕ್ರೋಶ ಹೊರಹಾಕಿದ್ದಲ್ಲದೆ, ವೇದಿಕೆ ಮೇಲೆಯೇ ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ನಡೆದಿದೆ. ವಾರದ ಮಧ್ಯೆ ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಹಾಗೂ ಗಾನವಿ ನಡುವೆ ನಡೆದ ಜಗಳದಲ್ಲಿ, ಗಾನವಿ ಎಲ್ಲೆ ಮೀರಿ ನಾಲಿಗೆ ಹರಿಬಿಟ್ಟು "ನಿಮ್ಮ ಅಮ್ಮನ ರೇಟ್ ಏನು?" ಎಂದು ತುಚ್ಛವಾಗಿ ನಿಂದಿಸಿದ್ದರು. ಈ ಅಕ್ಷಮ್ಯ ವರ್ತನೆಯನ್ನು ಸುದೀಪ್ ಅವರು ಪಂಚಾಯತಿಯಲ್ಲಿ ಕಟುವಾಗಿ ಪ್ರಶ್ನಿಸಿ, ತಾಯಿಯ ಸ್ಥಾನಕ್ಕೆ ಬೆಲೆ ಕೊಡದವರ ವಿರುದ್ಧ ಗುಡುಗಿದ್ದಾರೆ.
ತಂದಿಟ್ಟು ತಮಾಷೆ ನೋಡುವ ಮಂಜ
ಸಂಚಿಕೆಯಲ್ಲಿ ಮೊದಲು ಮಾತನಾಡಿದ ಗಾನವಿ, "ನನಗೆ ಯಾರ ಮೇಲೂ ವೈಯಕ್ತಿಕ ಅಜೆಂಡಾ ಇಲ್ಲ" ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. ಆದರೆ ಸುದೀಪ್ ಅವರು ಗಾನವಿ ಆಡಿದ್ದ ‘ದುರಹಂಕಾರಿ ಕುನ್ನಿ’, ‘ಮೇಲ್ ಫ್ರೆಜೈಲ್ ಈಗೋ’ ಎಂದೆಲ್ಲಾ ಗಗನ್‌ಗೆ ನಿಂದಿಸಿದ್ದ ಹಳೆಯ ವಿಡಿಯೋಗಳನ್ನು ಪ್ಲೇ ಮಾಡಿ ತರಾಟೆಗೆ ತೆಗೆದುಕೊಂಡರು.
‘ಕುನ್ನಿ’ ಎಂಬ ಪದದ ಅರ್ಥವೇ ಗೊತ್ತಿರಲಿಲ್ಲವೆಂದು ತಪ್ಪಿಸಿಕೊಳ್ಳಲು ಯತ್ನಿಸಿದ ಗಾನವಿಗೆ ಚಾಟಿ ಬೀಸಿದ ಸುದೀಪ್, "ಅರ್ಥ ಗೊತ್ತಿಲ್ಲವೆಂದರೆ ತಿಳಿದುಕೊಂಡು ಮಾತನಾಡುವ ತಿಳುವಳಿಕೆ ಇರಬೇಕು" ಎಂದು ತಿರುಗೇಟು ನೀಡಿದರು. ಇದೇ ವೇಳೆ ಜಗಳಕ್ಕೆ ಕಾರಣವಾದ ಪದಗಳನ್ನು ಬಳಸಿ ಬೆಂಕಿ ಹಚ್ಚುವ ಕೆಲಸ ಮಾಡಿದ ಮಂಜನ ಕಿವಿ ಹಿಂಡಿದ ಸುದೀಪ್, "ಬರೀ ತಂದಿಕ್ಕುವ ಬುದ್ಧಿ ಮಾಡಬೇಡಿ, ನೀವೇ ಕಳಪೆ ಆದ್ರಿ" ಎಂದು ಎಚ್ಚರಿಸಿದರು.
Bigg Boss Kannada 13: ಪ್ಯಾಂಟ್ ಹೇಳಿಕೆ ವಿವಾದ; ಗಾನವಿಗೆ ಹೊಡೆಯುವ ಹಂತಕ್ಕೆ ಹೋದ ಗಗನ್
ತಾಯಿಯನ್ನು ಯಾಕೆ ಎಳೆದು ತರ್ತೀರಾ?
ಮುಖ್ಯವಾಗಿ ಗಗನ್ ತಾಯಿಯ ಬಗ್ಗೆ ಗಾನವಿ ಆಡಿದ ಮಾತುಗಳನ್ನು ಪ್ರಸ್ತಾಪಿಸಿದ ಸುದೀಪ್ ಅತ್ಯಂತ ಕಟು ಶಬ್ದಗಳಿಂದ ತರಾಟೆಗೆ ತೆಗೆದುಕೊಂಡರು. "ಗಾನವಿ… ನಿಮ್ಮ ಅಮ್ಮನ ರೇಟ್ ಏನು ಅಂದ್ರಿ. ಮ್ಯೂಟ್ ಮಾಡಿಬಿಟ್ಟರು. ಗಗನ್‌ಗೆ ಬೈಯುವ ಹಾಗಿದ್ದರೆ ಅವರಿಗೆ ಬೈಯಿರಿ, ಅವರ ತಾಯಿಗೆ ಯಾಕೆ ಎಳೆದು ತರ್ತೀರಾ? ವುಮನ್ ಕಾರ್ಡ್ ಪ್ಲೇ ಮಾಡುವುದಕ್ಕೂ ಮುನ್ನ ಅವರ ತಾಯಿಯನ್ನು ನಿಂದಿಸಿದ್ದೀರಿ" ಎಂದು ನೇರವಾಗಿ ಪ್ರಶ್ನಿಸಿದರು.
ತಾಯಿಯನ್ನು ನೆನೆದು ಸುದೀಪ್ ಕಣ್ಣೀರು
ಈ ಸಂದರ್ಭದಲ್ಲಿ ತಮ್ಮ ತಾಯಿಯನ್ನು ನೆನೆದು ತೀವ್ರ ಭಾವೋದ್ವೇಗಕ್ಕೆ ಒಳಗಾದ ಸುದೀಪ್ ಕಣ್ಣೀರು ಹಾಕಿದರು. "ನಾನು ನನ್ನ ಅಮ್ಮನನ್ನ ಕಳೆದುಕೊಂಡಿದ್ದೇನೆ. ನಿಮ್ಮ ನಿಮ್ಮ ಜಗಳಗಳಿಗೆ ತಾಯಂದಿರನ್ನ ಯಾಕೆ ಎಳೆದು ತರುತ್ತೀರಾ? ಹೆತ್ತಿದ್ದೇ ಅವರ ತಪ್ಪಾ? ಗಗನ್ ಅವರ ತಾಯಿಯನ್ನು ವೇದಿಕೆಗೆ ಕರೆಸಿದ್ದಕ್ಕೆ ನಾನೇ ಅವರಲ್ಲಿ ಕ್ಷಮೆ ಕೇಳುತ್ತೇನೆ" ಎಂದು ಭಾವುಕರಾಗಿ ಕಣ್ಣೀರಿಟ್ಟರು. ಕಿಚ್ಚನ ಈ ಕಣ್ಣೀರು ಇಡೀ ವೇದಿಕೆಯನ್ನು ಭಾವುಕವಾಯಿತು.
ಗಾನವಿಗೆ ಖಡಕ್ ಎಚ್ಚರಿಕೆ ನೀಡಿದ ಕಿಚ್ಚ
ಸುದೀಪ್ ಅವರ ಆಕ್ರೋಶದ ಬಳಿಕ ಗಾನವಿ ಕ್ಷಮೆ ಕೇಳಿದರೂ ಸಮಾಧಾನಗೊಳ್ಳದ ಸುದೀಪ್, "ನೀವು ಮಾಡುವ ಬ್ಲಂಡರ್‌ಗಳಿಗೆ ಕ್ಷಮೆ ಕೇಳಬೇಡಿ. ನೈತಿಕ ಮೌಲ್ಯ, ಕುಟುಂಬ ಹಾಗೂ ಮಾನವೀಯತೆಗೆ ಬೆಲೆ ಕೊಡದವರು ಈ ಶೋನಲ್ಲಿ ಇರಬೇಡಿ. ತಾಯಿಯ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಖಡಕ್ ಎಚ್ಚರಿಕೆ ನೀಡಿದರು.