ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಪ್ಯಾಂಟ್​​ ಹೇಳಿಕೆ ವಿವಾದ; ಗಾನವಿಗೆ ಹೊಡೆಯುವ ಹಂತಕ್ಕೆ ಹೋದ ಗಗನ್

Bigg Boss Kannada 13:‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ (Bigg Boss kannada 13) ಮಂಜ ತೀರಾ ಕೆಟ್ಟ ಭಾಷೆ ಬಳಸಿ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯ ಬಹುತೇಕರು ಸೇರಿಕೊಂಡು ಮಂಜನಿಗೆ ಕಳಪೆ (Manja Kalape) ಪಟ್ಟ ನೀಡಿದ್ದಾರೆ. ಈ ವಿವಾದ ತಣ್ಣಗಾಗುವ ಮೊದಲೇ ಗಗನ್ ಹಾಗೂ ಗಾನವಿ ಜಗಳ ತಾರಕಕ್ಕೇರಿತ್ತು.

ಪ್ಯಾಂಟ್​​ ಹೇಳಿಕೆ ವಿವಾದ; ಗಾನವಿಗೆ ಹೊಡೆಯುವ ಹಂತಕ್ಕೆ ಹೋದ ಗಗನ್

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 10, 2026 8:44 AM

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ (Bigg Boss kannada 13) ಮಂಜ ತೀರಾ ಕೆಟ್ಟ ಭಾಷೆ ಬಳಸಿ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯ ಬಹುತೇಕರು ಸೇರಿಕೊಂಡು ಮಂಜನಿಗೆ ಕಳಪೆ (Manja Kalape) ಪಟ್ಟ ನೀಡಿದ್ದಾರೆ. ಈ ವಿವಾದ ತಣ್ಣಗಾಗುವ ಮೊದಲೇ ಮತ್ತೆ ಅವಾಚ್ಯ ಶಬ್ದಗಳು ಮೊಳಗಿವೆ. ಗಗನ್ ಹಾಗೂ ಗಾನವಿ ಜಗಳ ತಾರಕಕ್ಕೇರಿತ್ತು.

ಗಂಧರ್ವರು ಹಾಗೂ ರಾಕ್ಷಸರು ಟಾಸ್ಕ್ ವೇಳೆ ಗಗನ್ ಅವರಿಗೆ ಕುನ್ನಿ ಎಂಬ ಪದ ಬಳಕೆ ಮಾಡಿದ್ದರು ಗಾನವಿ. ಕಳಪೆ ಕೊಡುವ ಸಂದರ್ಭದಲ್ಲಿ ‘ನೀನು, ನಾನು ಹಾಕುವ ಪ್ಯಾಂಟ್​​ ಬೆಲೆ ಬಾಳಲ್ಲ’ ಎಂಬರ್ಥ ಬರುವಂತೆ ಗಗನ್ ಅವರು ಗಾನವಿಗೆ ಹೇಳಿದ್ದರಂತೆ. ಗಾನವಿ ಅವರು ಗಗನ್ ವಿರುದ್ಧ ಸಿಡಿದೆದ್ದರು. ಗಗನ್ ಹಾಗೂ ಗಾನವಿ ಅವಾಚ್ಯ ಶಬ್ದಗಳಿಂದ ಬೈದುಕೊಂಡರು. ಇಬ್ಬರೂ ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋದರು.

ಇದನ್ನೂ ಓದಿ: Bigg Boss Kannada 13: 'ಕುನ್ನಿ' ಎಂದ ಗಾನವಿ; ಶೋ ಬಿಡಲು ಸಿದ್ಧವೆಂದ ಗಗನ್!

ಮಾತಿಗೆ ಒಂದು ಮಿತಿ ಇರಬೇಕು ಕೆಟ್ಟ ಮಾತು ಆಡಿದಾಗ ನಮಗೆ ಹಾಗೂ ನೋಡುವವರಿಗೆ ಬೇಸರ ಆಗುತ್ತದೆ ಎಂದು ಯಶಸ್‌ ಅವರು ಮಂಜನ ಬಗ್ಗೆ ಕಾರಣ ಕೊಟ್ಟರು. ಮಂಜನಿಂದ ಎಲ್ಲಿಯತನಕ ಹೋಗುತ್ತದೆ ಅಂತ ಗೊತ್ತಿಲ್ಲ. ಇದಕ್ಕೆ ಬಿಗ್ ಬಾಸ್ ಒಂದು ಅಂತ್ಯ ಹಾಡಲೇಬೇಕು ಎಂದು ಸೌಂದರ್ಯ ಹೇಳಿದರು.



ಇದನ್ನೂ ಓದಿ: Bigg Boss kannada 13: ನೀವು ಯಾವಾಗಲೂ ಗಗನ್ ಪಕ್ಕ ಇರೋ ತಾಂಡವ್‌! ಗಾನವಿ ಕೌಂಟರ್​​

ಮಂಜ ಮತ್ತು ಸೌಂದರ್ಯ ಶೆಟ್ಟಿ ಅವರ ಎಲ್ಲೆ ಮೀರಿದ ಗಲಾಟೆಯಿಂದ ಗಾಬರಿಯಾದ ಸಂಗೀತಾ ಭಟ್‌ ಅವರಿಗೆ ಉಸಿರಾಟದ ತೊಂದರೆ ಆಗಿದೆ. ತೊಡೆ ತಟ್ಟಿದ ಮಂಜನ ವಿರುದ್ದ ರಣಚಂಡಿಯಾದ್ರು ಸೌಂದರ್ಯ ಶೆಟ್ಟಿ. ಸೆಡ್ಡು ಹೊಡೆದು ಮನುಷ್ಯತ್ವ ಕಲಿತಿಕೋ ಎಂದು ಆಕ್ರೋಶ ಹೊರ ಹಾಕಿದ್ದಾರೆ.