ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಕಿರಣ್‌ , ಮಂಜ ಮಾಡಿದ್ರು ಎಡವಟ್ಟು; ಅಪಾಯದಲ್ಲಿ ಸ್ಪರ್ಧಿಗಳು

Bigg Boss Kannada 13:ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ಶುರುವಾಗಿ ಇನ್ನೇನು ಮೊದಲ ವಾರ ಮುಗಿಯೋಕೆ ಬಂತು. ಆದ್ರೆ ಶುರುವಲ್ಲೇ ಕಿಚ್ಚನ (Sudeep) ಮನೆ ರಣರಂಗವಾಗಿದೆ! ಒಂದ್ಕಡೆ ಸೆಲೆಬ್ರಿಟಿಗಳು, ಇನ್ನೊಂದ್ಕಡೆ ಕಾಮನ್‌ ಮ್ಯಾನ್ ಸ್ಪರ್ಧಿಗಳು. ಕಾಮನರ್ ಸ್ಪರ್ಧಿಗಳಾದ ಮಂಜ ಮತ್ತು ಕಿರಣ್ ಶಾಸ್ತ್ರಿ (Kiran Shastri) ಟಾಸ್ಕ್​ನಲ್ಲಿ ಹಿಂದೆ ಬಿದ್ದಿದ್ದಾರೆ. ಆದರೆ ಬರೀ ಮಾತಿನಲ್ಲಿ ಬಡಾಯಿ ಕೊಚ್ಚಿಕೊಂಡು ಇನ್ನುಳಿದ ಸ್ಪರ್ಧಿಗಳನ್ನು ಕೂಡ ಅಪಾಯಕ್ಕೆ ತಳ್ಳಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ʻಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ಶುರುವಾಗಿ ಇನ್ನೇನು ಮೊದಲ ವಾರ ಮುಗಿಯೋಕೆ ಬಂತು. ಆದ್ರೆ ಶುರುವಲ್ಲೇ ಕಿಚ್ಚನ (Sudeep) ಮನೆ ರಣರಂಗವಾಗಿದೆ! ಒಂದ್ಕಡೆ ಸೆಲೆಬ್ರಿಟಿಗಳು, ಇನ್ನೊಂದ್ಕಡೆ ಕಾಮನ್‌ ಮ್ಯಾನ್ ಸ್ಪರ್ಧಿಗಳು. ಕಾಮನರ್ ಸ್ಪರ್ಧಿಗಳಾದ ಮಂಜ ಮತ್ತು ಕಿರಣ್ ಶಾಸ್ತ್ರಿ (Kiran Shastri) ಟಾಸ್ಕ್​ನಲ್ಲಿ ಹಿಂದೆ ಬಿದ್ದಿದ್ದಾರೆ. ಆದರೆ ಬರೀ ಮಾತಿನಲ್ಲಿ ಬಡಾಯಿ ಕೊಚ್ಚಿಕೊಂಡು ಇನ್ನುಳಿದ ಸ್ಪರ್ಧಿಗಳನ್ನು ಕೂಡ ಅಪಾಯಕ್ಕೆ ತಳ್ಳಿದ್ದಾರೆ.

ಈ ವಿಮಾನದಲ್ಲಿರೋ ಸ್ಪರ್ಧಿಗಳ ಗೋಳು ಕೇಳೋರಿಲ್ಲ. ಟಾಸ್ಕ್ ಇದ್ದಾಗ ಮಾತ್ರ ಆಕ್ಟಿವಿಟಿ ಏರಿಯಾ ಅಥವಾ ಹೊರಗಿನ ಆವರಣಕ್ಕೆ ಬರಬೇಕು. ಟಾಸ್ಕ್ ಮುಗೀತಾ, ಮತ್ತೆ ಹೋಗಿ ಅದೇ ಕಿರಿದಾದ ಫ್ಲೈಟ್ ಸೀಟ್ ಮೇಲೆ ಕೂರಬೇಕು.

ಈ ಸಂಕಷ್ಟದಿಂದ ಪಾರಾಗೋಕೆ ಒಂದು ಟಾಸ್ಕ್ ಅನೌನ್ಸ್ ಆಯ್ತು. ಟಾಸ್ಕ್‌ನಲ್ಲಿ ಗೆದ್ರೆ, ನಾಮಿನೇಷನ್ ಲಿಸ್ಟ್‌ನಲ್ಲಿದ್ದವರ ಪೈಕಿ ಇಬ್ಬರು ಸೇಫ್ ಆಗಿ ಮನೆಯೊಳಗೆ ಹೋಗೋ ಚಾನ್ಸ್‌ ಇತ್ತು.

ಇದನ್ನೂ ಓದಿ: Bigg Boss Kannada 13: ಅಧಿಕ ಪ್ರಸಂಗ ಬೇಡ, ಬಾಯಿ ಬಡ್ಕೋಬೇಡ ನನ್ನತ್ರ ನಡೆಯಲ್ಲ; ಕಾವ್ಯಾಗೆ ಗಗನ್‌ ವಾರ್ನಿಂಗ್‌

ಯಾರು ಟಾಸ್ಕ್ ಆಡಬೇಕು?

ಟಾಸ್ಕ್ ಶುರು ಆಗುವುದಕ್ಕೂ ಮುನ್ನ ಯಾರು ಟಾಸ್ಕ್ ಆಡಬೇಕು ಎಂಬುದನ್ನು ನಿರ್ಧರಿಸಲಾಗುತ್ತಿತ್ತು. ‘ನಾನೇ ಟಾಸ್ಕ್ ಆಡುತ್ತೇನೆ’ ಎಂದು ಕಿರಣ್ ಶಾಸ್ತ್ರಿ ಮುಂದೆ ಬಂದರು. ಆದರೆ ಅವರ ಬದಲಿಗೆ ಬೇರೆಯವರು ಆಡಲಿ ಎಂಬುದು ಇನ್ನುಳಿದ ಸ್ಪರ್ಧಿಗಳ ಅಭಿಪ್ರಾಯ ಆಗಿತ್ತು. ಆದರೂ ಕೂಡ ‘ನನಗೆ ಅವಕಾಶ ಬೇಕು’ ಎಂದು ಕಿರಣ್ ಶಾಸ್ತ್ರಿ ಅವರು ಜೋರು ಧ್​ವನಿಯಲ್ಲಿ ಮಾತನಾಡಿ ಅವಕಾಶ ಗಿಟ್ಟಿಸಿಕೊಂಡರು. ವಿಮಾನದ ತಂಡದವರ ಪರವಾಗಿ ಕಿರಣ್ ಶಾಸ್ತ್ರಿ ಮತ್ತು ಮಂಜ ಆಡಲಿ ಎಂಬುದು ನಿರ್ಧಾರ ಆಯಿತು. ಆದರೆ ಅಂತಿಮವಾಗಿ ಆ ಟಾಸ್ಕ್​ನಲ್ಲಿ ಅವರಿಬ್ಬರು ಸೋಲು ಅನುಭವಿಸಿದರು. ಇದರಿಂದಾಗಿ ವಿಮಾನದ ತಂಡದ ಎಲ್ಲ ಸ್ಪರ್ಧಿಗಳು ನಾಮಿನೇಟ್ ಆದರು. ಒಟ್ಟು 9 ಸ್ಪರ್ಧಿಗಳ ಮೇಲೆ ಈಗ ಎಲಿಮಿನೇಷನ್ ಕತ್ತಿ ತೂಗುತ್ತಿದೆ.



ಈ ನಡುವೆ, ಅದೃಷ್ಟವಶಾತ್ ಸೌಂದರ್ಯಾ ಶೆಟ್ಟಿ ಮಾತ್ರ ಗ್ಯಾಪ್‌ನಲ್ಲಿ ಸೇಫ್ ಆಗಿ ನಾಮಿನೇಷನ್ ಲಿಸ್ಟ್‌ನಿಂದ ಆಚೆ ಬಂದಿದ್ದಾರೆ. ಆದ್ರೆ ಬಾಕಿ ಉಳಿದಿರೋ 8 ಮಂದಿಗೆ ಈಗ ನಡುಕ ಶುರುವಾಗಿದೆ. ಮಹಾಕವಿ ಮಂಜ, ಕಿರಣ್‌ ಶಾಸ್ತ್ರೀ, ಪ್ರಥಮಾ ಪ್ರಸಾದ್‌, ವೈಷ್ಣವಿ ಕೌಂಡಿನ್ಯ, ಓಂ ಪ್ರಕಾಶ್‌ ರಾವ್‌, ಧನುಷ್‌, ಆಸಿಯಾ ಫಿರ್ದೋಸ್‌, ಅವಿನಾಶ್‌ ಶಠಮರ್ಷಣ್ ಮೇಲೆ ಈಗ ಎಲಿಮಿನೇಷನ್ ತೂಗುಗತ್ತಿ ನೇತಾಡ್ತಿದೆ.

ಇದನ್ನೂ ಓದಿ: Samantha: ಮಗು ಬೇಡ ಅಂದುಕೊಂಡಿದ್ದ ಸಮಂತಾ! ಪ್ರೆಗ್ನೆನ್ಸಿ ಬಗ್ಗೆ ನಟಿ ಹೇಳಿದ್ದೇನು?

ಬರೀ ಬಾಯಿ ಮಾತಲ್ಲಿ ಡೈಲಾಗ್ ಹೊಡೆದ್ರೆ ಬಿಗ್ ಬಾಸ್‌ನಲ್ಲಿ ಬೇಳೆ ಬೇಯಲ್ಲ, ರಣಾಂಗಣದಲ್ಲಿ ತಾಕತ್ತು ತೋರಿಸಬೇಕು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

Yashaswi Devadiga

View all posts by this author