Samantha: ಮಗು ಬೇಡ ಅಂದುಕೊಂಡಿದ್ದ ಸಮಂತಾ! ಪ್ರೆಗ್ನೆನ್ಸಿ ಬಗ್ಗೆ ನಟಿ ಹೇಳಿದ್ದೇನು?
Samantha: ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ವಿಷಯವನ್ನು ಅಧಿಕೃತಗೊಳಿಸಿದ ದಂಪತಿ ಈ ವರ್ಷದ ಜೂನ್‌ನಲ್ಲಿ ತಾವು ಪೋಷಕರಾಗಲಿದ್ದೇವೆ ಎಂದು ಘೋಷಿಸಿದರು. ಮಗು ಇಲ್ಲದಿದ್ದರೂ ಪರವಾಗಿಲ್ಲ ಎಂದುಕೊಂಡಿದ್ದ ತಮಗೆ ಈ ಗರ್ಭಧಾರಣೆ (Pregnancy) ದೊಡ್ಡ ಸರ್ಪ್ರೈಸ್ ನೀಡಿದೆ ಎಂದು ಹೇಳಿಕೊಂಡಿದ್ದಾರೆ.
ಸಮಂತಾ -
ನಟಿ ಸಮಂತಾ ರುತ್ ಪ್ರಭು (samantha) ಮತ್ತು ಚಲನಚಿತ್ರ ನಿರ್ಮಾಪಕ ರಾಜ್ ನಿಧಿಮೋರು ಶೀಘ್ರದಲ್ಲೇ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ವಿಷಯವನ್ನು ಅಧಿಕೃತಗೊಳಿಸಿದ ದಂಪತಿ ಈ ವರ್ಷದ ಜೂನ್‌ನಲ್ಲಿ ತಾವು ಪೋಷಕರಾಗಲಿದ್ದೇವೆ ಎಂದು ಘೋಷಿಸಿದರು. ಮಗು ಇಲ್ಲದಿದ್ದರೂ ಪರವಾಗಿಲ್ಲ ಎಂದುಕೊಂಡಿದ್ದ ತಮಗೆ ಈ ಗರ್ಭಧಾರಣೆ (Pregnancy) ದೊಡ್ಡ ಸರ್ಪ್ರೈಸ್ ನೀಡಿದೆ ಎಂದು ಹೇಳಿಕೊಂಡಿದ್ದಾರೆ.
ಬಹುಶಃ ನಮಗೆ ಮಕ್ಕಳಾಗದಿರಬಹುದು. ಮಗು ಬೇಕು ಅಥವಾ ಬೇಡ ಎಂಬ ವಿಚಾರದಲ್ಲಿ ಇಬ್ಬರೂ ಸ್ಪಷ್ಟತೆಯಿಂದಿದ್ದರು. ಮಗು ಇಲ್ಲದಿದ್ದರೂ ಜೀವನ ನಡೆಸಲು ಸಿದ್ಧರಾಗಿದ್ದರು. ಹೀಗಾಗಿ ಸಮಂತಾ ಈ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ.
ಇದನ್ನೂ ಓದಿ: DC producer gifts BMW: ʻDC' ಸಿನಿಮಾದ ಭರ್ಜರಿ ಯಶಸ್ಸು; ಬಿಎಂಡಬ್ಲ್ಯು ಕಾರು ಉಡುಗೊರೆ ಕೊಟ್ಟ ಕಲಾನಿಧಿ ಮಾರನ್
ಬದುಕು ಸಂಪೂರ್ಣ ಬದಲು
"ಥಸ್ಸಾಡಿಯಾ ಹಾಡಿನ ಚಿತ್ರೀಕರಣದ ಮೊದಲ ದಿನವೇ ನನಗೆ ಈ ವಿಷಯ ತಿಳಿಯಿತು. ಆ ಸಮಯದಲ್ಲಿ ನನಗೆ ಸ್ವಲ್ಪ ಅನಾರೋಗ್ಯ ಕಾಡುತ್ತಿತ್ತು. ತಪಾಸಣೆ ನಡೆಸಿದಾಗ ತಾವು ಗರ್ಭಿಣಿ ಎಂಬ ವಿಷಯ ತಿಳಿಯಿತು. ಈ ಸುದ್ದಿ ಅವರಿಗೆ ಅಪಾರ ಸಂತೋಷ ತಂದಿದೆ. ಮಗುವಿನ ಆಗಮನದಿಂದ ಜೀವನದಲ್ಲಿ ಬದಲಾವಣೆ ಬರಲಿದೆ ಎಂದು ಸಮಂತಾ ಕಾಯುತ್ತಿದ್ದಾರೆ. ಮಗು ಬಂದ ಮೇಲೆ ಬದುಕು ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಹಲವರು ಹೇಳಿದ್ದಾರೆ.
ಸಮಂತಾ ಅವರ 'ಮಾ ಇಂಟಿ ಬಂಗಾರಂ' ಚಿತ್ರ ಜೂನ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು, ಒಂದು ದಿನದ ನಂತರ ಅವರು ತಮ್ಮ ಗರ್ಭಧಾರಣೆಯನ್ನು ಜಗತ್ತಿಗೆ ಬಹಿರಂಗಪಡಿಸಿದರು.
ಸಮಂತಾ ಮತ್ತು ರಾಜ್ ಡಿಸೆಂಬರ್ 1, 2025 ರಂದು ಆತ್ಮೀಯ ಕಾರ್ಯಕ್ರಮದಲ್ಲಿ ವಿವಾಹವಾದರು. ದಂಪತಿ ಸಮಾರಂಭದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಸಮಂತಾ ಸಿನಿಮಾ ಪಯಣ ಮತ್ತೊಮ್ಮೆ ಹೊಸ ಹಂತಕ್ಕೆ ಕಾಲಿಟ್ಟಿದೆ.
ಇದನ್ನೂ ಓದಿ: DC producer gifts BMW: ʻDC' ಸಿನಿಮಾದ ಭರ್ಜರಿ ಯಶಸ್ಸು; ಬಿಎಂಡಬ್ಲ್ಯು ಕಾರು ಉಡುಗೊರೆ ಕೊಟ್ಟ ಕಲಾನಿಧಿ ಮಾರನ್
ಚಿತ್ರರಂಗದಿಂದ ದೂರವಾಗಬೇಕು ಎಂದುಕೊಂಡಿದ್ದ ನಟಿ, ಇದೀಗ ಪ್ರೇಕ್ಷಕರ ಪ್ರೀತಿಯಿಂದ ಮತ್ತೆ ಬಣ್ಣದ ಲೋಕದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.