ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಶೋನಿಂದ ಆಚೆ ಬಿದ್ರೂ 5 ಲಕ್ಷ ನಗದು ಬಹುಮಾನ, ಉದ್ಯೋಗ ಗಿಟ್ಟಿಸಿಕೊಂಡ ಕುಮಾರಿ!

Bigg Boss Kannada 13: ಆರೋಗ್ಯ ಸಮಸ್ಯೆಯಿಂದಾಗಿ ವೈದ್ಯರು ಕುಮಾರಿ ಅವರು ಆಟ ಆಡಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಹಾಗಾಗಿ ಕುಮಾರಿ 'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಿಂದ ಕುಮಾರಿ ಹೊರಬಿದ್ದಿದ್ದಾರೆ. ‘ನನ್ನನ್ನು ಕಳುಹಿಸಲು ಕುಮಾರಿ ಅವರನ್ನು ಕರೆತರಲಾಗುತ್ತಿಲ್ಲ’ ಎಂದು ಪೂರ್ಣಿಮಾ ಆರೋಪಿಸಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ. ಕುಮಾರಿ ಅನಾರೋಗ್ಯದ ಕಾರಣದಿಂದಲೇ ಶೋನಲ್ಲಿ ಉಳಿಯುತ್ತಿಲ್ಲ.

ಬಿಗ್‌ ಬಾಸ್‌ ಕನ್ನಡ

ಬಿಗ್ ಬಾಸ್ ಅಗ್ನಿಪರೀಕ್ಷೆ’ (Bigg Boss) ರಿಯಾಲಿಟಿ ಶೋನಲ್ಲಿ ‘ನಾನು ಹಳ್ಳಿ ಹುಡುಗಿ ಕುಮಾರಿ’ ಅಂತ ಹೇಳಿಕೊಂಡು ಅಗ್ನಿಪರೀಕ್ಷೆಗೆ ಒಳಗಾದವರು ಲಾವಣ್ಯ ಕುಮಾರಿ (Lavanya Kumari). ಏಕಾಏಕಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮದಲ್ಲಿ ಕುಮಾರಿ ಕಾಣ್ತಿಲ್ಲ ಅಂತ ವೀಕ್ಷಕರು ಕಮೆಂಟ್‌ ಕೂಡ ಮಾಡಿದ್ದರು. ಇದೀಗ ಅನಾರೋಗ್ಯದ ಕಾರಣದಿಂದಾಗಿ ಶೋನಿಂದ ಅರ್ಧಕ್ಕೆ ನಿರ್ಗಮಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಂಚಿಕೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ನಂಜನಗೂಡು ಮೂಲದ ಕುಮಾರಿ (Kumari) ಅಡಿಷನ್‌ನಲ್ಲಿ ತನ್ನ ಮಾತಿನ ಕೌಶಲ್ಯ, ಮುಗ್ಧತೆಯಿಂದ ನಾಲ್ವರು ಜ್ಯೂರಿಗಳ ಮನಗೆದ್ದಿದ್ದರು. ಕುಮಾರಿ ಪೂರ್ಣಿಮಾ (Poornima) ಅವರಿಂದ ಸೋತು ತಂಡಕ್ಕೆ ಸೇರಿಕೊಂಡಿದ್ದರು.

5 ಲಕ್ಷ ನಗದನ್ನು ಸಹಾಯ

ಆರೋಗ್ಯ ಸಮಸ್ಯೆಯಿಂದಾಗಿ ವೈದ್ಯರು ಕುಮಾರಿ ಅವರು ಆಟ ಆಡಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಹಾಗಾಗಿ ಕುಮಾರಿ 'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಿಂದ ಕುಮಾರಿ ಹೊರಬಿದ್ದಿದ್ದಾರೆ. . ‘ನನ್ನನ್ನು ಕಳುಹಿಸಲು ಕುಮಾರಿ ಅವರನ್ನು ಕರೆತರಲಾಗುತ್ತಿಲ್ಲ’ ಎಂದು ಪೂರ್ಣಿಮಾ ಆರೋಪಿಸಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ. ಕುಮಾರಿ ಅನಾರೋಗ್ಯದ ಕಾರಣದಿಂದಲೇ ಶೋನಲ್ಲಿ ಉಳಿಯುತ್ತಿಲ್ಲ.

ಇದನ್ನೂ ಓದಿ: Rashmika Mandanna: ಶೂಟಿಂಗ್‌ಗೆ ಮರಳುವ ಸಂತಸ ಹಂಚಿಕೊಂಡ ರಶ್ಮಿಕಾ

ಉದ್ಯೋಗಾವಕಾಶ

ಕಾರ್ಯಕ್ರಮದ ಪ್ರಾಯೋಜಕರಾದ ‘ಇಕೋ ಪ್ಲ್ಯಾನೆಟ್ ಎಲಿವೇಟರ್’ ಸಂಸ್ಥೆಯು ಕುಮಾರಿಗೆ ಬರೋಬ್ಬರಿ 5 ಲಕ್ಷ ನಗದನ್ನು ಸಹಾಯವಾಗಿ ನೀಡಲಾಗಿದೆ. ಇದಷ್ಟೇ ಅಲ್ಲದೆ, ಕುಮಾರಿಯ ಶಿಕ್ಷಣ ಮುಗಿದ ನಂತರ ಕರ್ನಾಟಕದಲ್ಲಿ ಸಂಸ್ಥೆಯ ಯಾವುದೇ ಶಾಖೆಯಲ್ಲಿ ಅಥವಾ ದುಬೈನಲ್ಲಿರುವ ಅವರ ಶಾಖೆಯಲ್ಲಿ ಕೆಲಸ ಮಾಡಲು ಉದ್ಯೋಗಾವಕಾಶ ನೀಡಲಾಗಿದೆ.



ಹಳ್ಳಿಯಿಂದ ಬಂದ ತಮಗೆ ಬೆಂಗಳೂರು ನೋಡುವ ಹಾಗೂ ಇಷ್ಟು ದೊಡ್ಡ ವೇದಿಕೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದಕ್ಕೆ ಕುಮಾರಿ ಸಂತಸ ವ್ಯಕ್ತಪಡಿಸಿದರು.

‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮಕ್ಕೆ ಬಂದ್ಮೇಲೆ ಕುಮಾರಿ ಇನ್ಸ್ಟಾಗ್ರಾಮ್ ಅಕೌಂಟ್‌ಗೆ 247K ಕ್ಕೂ ಹೆಚ್ಚಿನ ಫಾಲೋವರ್ಸ್ ಬಂದಿದ್ದಾರೆ. ಆದ್ರೀಗ ವೈಲ್ಡ್‌ ಕಾರ್ಡ್‌ ಎಂಟ್ರಿ ಆದ್ರೂ ಕೊಡಿ ಅಂತ ಕಮೆಂಟ್‌ ಮಾಡ್ತಿದ್ದಾರೆ ನೆಟ್ಟಿಗರು. ನಾನು ಹುಟ್ಟಿದಾಗಿನಿಂದ ಒಂದು ದಿನನೂ ಬೆಂಗಳೂರು ನೋಡೇ ಇರಲಿಲ್ಲ. ಹಾಗಾಗಿ ನಾನು ಊರಿಂದ ಬರುವಾಗ ಎಲ್ಲನೂ ಎಂಜಾಯ್ ಮಾಡಿಕೊಂಡು ಬಂದೆ. ನಾನು ವಾಪಸ್ ಹೋದ್ರೆ ಯಾವಾಗ ಬರುತ್ತೇನೆ ಗೊತ್ತಿಲ್ಲ. ಇದು ಲಾಸ್ಟ್ ಆಗುತ್ತದೆ ಅನ್ನೋದು ನನಗೆ ಬೇಜಾರ್ ಆಗುತ್ತಿದೆ ಎಂದು ಕುಮಾರಿ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: Bigg Boss Kannada 13: ಇದೇ ಭಾನುವಾರ ಬಿಗ್ ಬಾಸ್ 13 Grand Take Off!

ಸದ್ಯಕ್ಕೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ‘ಅಗ್ನಿಪರೀಕ್ಷೆ’ಗೆ ಒಳಗಾಗಿರುವ ಸ್ಪರ್ಧಿಗಳಿಗೆ ವೋಟ್ ಮಾಡುವ ಅವಕಾಶ ವೀಕ್ಷಕರಿಗೆ ಇದೆ. ತಮ್ಮಿಷ್ಟದ ಸ್ಪರ್ಧಿಗಳಿಗೆ ವೋಟ್ ಮಾಡಿ, ಅವರನ್ನ ‘ಬಿಗ್ ಬಾಸ್’ ಮನೆಯೊಳಗೆ ಕಳುಹಿಸುವ ಜವಾಬ್ದಾರಿ ವೀಕ್ಷಕರ ಮೇಲಿದೆ.

Yashaswi Devadiga

View all posts by this author