ಲಕ್ಷ್ಮಿ (Bigg Boss Kannada 13) ಅವರು ಅಗ್ನಿಪರೀಕ್ಷೆ ಕ್ಯಾಂಡಿಡೇಟ್ ಆಗಿದ್ದರು. ಅವರು ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಅವರು ಮನೆಗೆ ಹೋದ ಕೇವಲ ಎರಡೇ ವಾರದಲ್ಲಿ ಹೊರಗೆ ಬಂದಿದ್ದಾರೆ. ಭಾನುವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಮೊದಲಿಗೆ ತಾಂಡವ್ ಅವರನ್ನು ಸೇಫ್ ಮಾಡಿದರು. ಬಳಿಕ ಆಸಿಯಾ (Asia) ಅವರು ಸೇಫ್ ಆದರು, ಬಳಿಕ ಸೌಂದರ್ಯಾ ಶೆಟ್ಟಿ ಸೇಫ್ ಆದರು.ಉತ್ತಮವಾಗಿ ಆಡುತ್ತಿದ್ದ ವೈಲ್ಡ್ ಕಾರ್ಡ್ ಸ್ಪರ್ಧಿ ಲಕ್ಷ್ಮೀ ಗೌಡ (Lakshmi Gowda) ಅವರನ್ನ ಮನೆಯಿಂದ ಹೊರಕಳುಹಿಸಿರುವುದು ಪ್ರೇಕ್ಷಕರಿಗೆ ಅಸಮಾಧಾನ ತಂದಿದೆ.
ಇದೀಗ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ಕ್ಯಾಪ್ಟನ್ ಸೌಂದರ್ಯ ಸ್ಪರ್ಧಿಗಳಿಗೆ ಒಂದೊಂದು ಟ್ಯಾಗ್ ಕೊಡಬೇಕಿತ್ತು. ಕುಮಾರಿಗೆ ವೇಸ್ಟ್ ಪೀಸ್ ಕೊಟ್ಟಿದ್ದಾರೆ. ಕುಮಾರಿ ಇದಕ್ಕಾಗಿ ಗರಂ ಆದ್ರು. ಬಿನ್ ಬ್ಯಾಗ್ ಅಲ್ಲಿ ಕೂತು ಸುಮ್ಮನೆ ಚಿಲ್ ಮಾಡ್ತಾರೆ ಅಂತ ಸೌಂದರ್ಯ ಹೇಳಿದ್ರು. ಅದಕ್ಕೆ ಕುಮಾರಿ, ಕೂಗಾಡಿದ್ದಾರೆ. ಸಿಂಪತಿ ಕಾರ್ಡ್ ವರ್ಕೌಟ್ ಆಗ್ತಾ ಇಲ್ವಾ? ಅಂತ ಸೌಂದರ್ಯ ಅವರು ಕುಮಾರಿ ಅವರನ್ನು ಅಣುಕಿಸಿದ್ದಾರೆ. ಇನ್ನು ಗಗನ್ಗೆ ಮೋಸಗಾರ ಅನ್ನೋ ಟ್ಯಾಗ್ಲೈನ್ ಕೊಟ್ಟಿದ್ದಾರೆ.