Bigg Boss Kannada 13: ಬಿಗ್‌ಬಾಸ್ ವೀಕೆಂಡ್ ಎಪಿಸೋಡ್ ಲೈವ್ ನೋಡಬೇಕಾ? ಹಾಗಾದ್ರೆ ಹೀಗೆ ಮಾಡಿ
Bigg Boss Kannada: ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇದೇ ಆಗಸ್ಟ್ 16ರ ರಾತ್ರಿ 9ಕ್ಕೆ ಬಿಗ್ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇನ್ನೂ ಆ.17ರಿಂದ ಪ್ರತೀ ಸೋಮವಾರದಿಂದ ಭಾನುವಾರದವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.ವಿಶೇಷವೆಂದರೆ ಈ ಬಾರಿ ಬಿಗ್‌ಬಾಸ್ ವೀಕೆಂಡ್ ಎಪಿಸೋಡ್ ಅನ್ನು ಲೈವ್ ನೋಡುವ ಅವಕಾಶವನ್ನು ಸಹ ಗೆಲ್ಲಬಹುದಾಗಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್ 13ರರಿಂದ (Bigg Boss kannada 13) ಕ್ಷಣ ಕ್ಷಣಕ್ಕೂ ಅಪ್‌ಡೇಟ್ ಬರುತ್ತಲೇ ಇದೆ. ಇದೇ ಆಗಸ್ಟ್ 16ರ ರಾತ್ರಿ 9ಕ್ಕೆ ಬಿಗ್ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ (Agni parikshe) ವೇದಿಕೆ ಸಜ್ಜಾಗಿದೆ. ವಿಶೇಷವೆಂದರೆ ಈ ಬಾರಿ ಬಿಗ್‌ಬಾಸ್ ವೀಕೆಂಡ್ ಎಪಿಸೋಡ್ ಅನ್ನು ಲೈವ್ ನೋಡುವ ಅವಕಾಶವನ್ನು ಸಹ ಗೆಲ್ಲಬಹುದಾಗಿದೆ.
ಲಾಲ್ಬಾಗ್ ಫ್ಲವರ್ ಶೋ
ಲಾಲ್ಬಾಗ್ ಫ್ಲವರ್ ಶೋನಲ್ಲಿ ಭಾಗವಹಿಸಬೇಕಿದೆ. ಲಾಲ್ಬಾಗ್ ಫ್ಲವರ್ ಶೋ ಇದೀಗ ಆರಂಭವಾಗಿದೆ. ಈ ಲಾಲ್ಬಾಗ್ ಫ್ಲವರ್ ಶೋನಲ್ಲಿ ‘ಬಿಗ್‌ಬಾಸ್ ಅಗ್ನಿಪರೀಕ್ಷೆ ಎಕ್ಸ್ಪೀರಿಯನ್ಸ್ ಜೋನ್’ ಒಂದನ್ನು ಬಿಗ್‌ಬಾಸ್ ತಂಡ ಮಾಡಿದೆ.
ಇದನ್ನೂ ಓದಿ: Rashmika Mandanna: ಮದುವೆ ಫೋಟೋ ನೋಡಲು ಸಿಕ್ಕಿತು ಸಮಯ! ರಶ್ಮಿಕಾ ಹೊಸ ಪೋಸ್ಟ್
ಬಿಗ್‌ಬಾಸ್ ಎಕ್ಸ್ಪೀರಿಯನ್ಸ್ ಜೋನ್ಗೆ ಹೋಗಿ ಅಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡು ಅದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಬೇಕು. ಹೀಗೆ ಹಂಚಿಕೊಂಡ ಫೋಟೊವನ್ನು ಕಲರ್ಸ್ ಕನ್ನಡದ ಜೊತೆಗೆ ಟ್ಯಾಗ್ ಮಾಡಬೇಕು.ಚಿತ್ರಕ್ಕೆ #BBKAGNIPARIKSHE ಹ್ಯಾಷ್ ಟ್ಯಾಗ್ ಹಾಕಬೇಕು. ಕಲರ್ಸ್ ವಾಹಿನಿ ಅಥವಾ ಬಿಗ್‌ಬಾಸ್ ಆಯೋಜಕರು ಆಯ್ದ ಕೆಲವರನ್ನು ಬಿಗ್‌ಬಾಸ್ ಕನ್ನಡ ವೀಕೆಂಡ್ ಎಪಿಸೋಡ್ ಅನ್ನು ಲೈವ್ ಆಗಿ ನೋಡಲು ಆಹ್ವಾನವನ್ನು ಕಳಿಹಿಸುತ್ತಾರೆ. ಲಾಲ್ಬಾಗ್ ಫ್ಲವರ್ ಶೋ ಆಗಸ್ಟ್ 06 ಆರಂಭವಾಗಿದ್ದು, ಆಗಸ್ಟ್ 17ರ ವರೆಗೆ ನಡೆಯಲಿದೆ.

ಆಗಸ್ಟ್ 16ರ ರಾತ್ರಿ 9ಕ್ಕೆ ಬಿಗ್ ಮನೆಗೆ ಎಂಟ್ರಿ
ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇದೇ ಆಗಸ್ಟ್ 16ರ ರಾತ್ರಿ 9ಕ್ಕೆ ಬಿಗ್ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇನ್ನೂ ಆ.17ರಿಂದ ಪ್ರತೀ ಸೋಮವಾರದಿಂದ ಭಾನುವಾರದವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ. ರಿಲೀಸ್ ಆದ ಪ್ರೋಮೋದಲ್ಲಿ `Thank You Karnataka’ ಎಂದು ಶುರುವಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋ ನಿಮ್ಮ ಕನಸುಗಳು ವಿಡಿಯೋ ಮೂಲಕ ನಮ್ಮನ್ನ ತಲುಪಿವೆ.
ಈಗ ಆ ಕನಸುಗಳಿಗೆ ವೇದಿಕೆ ಸಜ್ಜಾಗ್ತಿದೆ. ಈ ಅಂತಿಮ ಪರೀಕ್ಷೆಯನ್ನು ಎದುರಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡೋರು ಯಾರು?.. ಇದೆಲ್ಲದಕ್ಕೆ ಉತ್ತರ ಆಗಸ್ಟ್ 16ರ ರಾತ್ರಿ 9ಕ್ಕೆ ಸಿಗಲಿದೆ ಎಂದು ತಿಳಿಸಿದೆ.
ಅಸಂಖ್ಯ ಜನರು ತಮ್ಮ ವಿಡಿಯೋ ಕಳುಹಿಸಿದ್ದಾರೆ. ಇವರಲ್ಲಿ ಆಯ್ಕೆಯಾದವರು ಒಂದಿಷ್ಟು ಮಂದಿ. ಅವರು ಯಾರು, ಅಗ್ನಿ ಪರೀಕ್ಷೆಯಲ್ಲಿ ಗೆದ್ದವರು ಯಾರು ಎನ್ನೋದನ್ನು ಆಗಸ್ಟ್ 16ರ ರಾತ್ರಿ 9 ಗಂಟೆಗೆ ಹೇಳುವುದಾಗಿ ಈ ಪ್ರೊಮೋದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋಕೆ ಮುಹೂರ್ತ ಫಿಕ್ಸ್! ಇಲ್ಲಿದೆ ಹೊಸ ಪ್ರೋಮೋ
ಪ್ರತಿ ಸಲದಂತೆ ಈ ಬಾರಿಯೂ ಬಿಗ್ಬಾಸ್ಗೆ ಹೋಗುವ ಸ್ಪರ್ಧಿಗಳ ಬಗ್ಗೆ ಗೋಪ್ಯತೆ ಕಾಪಾಡಲಾಗಿದೆ. ಇದಾಗಲೇ ಬಹುತೇಕ ಸ್ಪರ್ಧಿಗಳಿಗೆ ಆಹ್ವಾನ ಹೋಗಿದ್ದು, ತಯಾರಿ ಕೂಡ ನಡೆಸುತ್ತಿದ್ದಾರೆ. ಆದರೆ ಅವರಿಗೆ ಈ ಬಗ್ಗೆ ಎಲ್ಲಿಯೂ ಹೇಳದಂತೆ ಷರತ್ತು ವಿಧಿಸಿರಲಾಗುತ್ತದೆ.