ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ವಾಹಿನಿಯಿಂದ ವಿಶೇಷ ಸೂಚನೆ!

Bigg Boss Kannada 13: ಪ್ರತಿಭೆ ಇರುವ ಸಾಮಾನ್ಯ ಜನರು ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಬಹುದು. ಅಂದರೆ, ಸೋಶಿಯಲ್ ಮೀಡಿಯಾ (Social Media) ಇನ್ಸ್ಪ್ಯೂಯೆನ್ಸರ್‌ಗಳಿಗೆ ಅವಕಾಶ ನೀಡಲಾಗಿದೆ. ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವವರು ಅನುಸರಿಸಬೇಕಾದ ನಿಯಮಗಳು, ಮೂರು ನಿಮಿಷಗಳ ವಿಡಿಯೋದಲ್ಲಿ ಯಾವೆಲ್ಲಾ ಮಾಹಿತಿ ಇರಬೇಕು ಎಂಬುದನ್ನು ಕಲರ್ಸ್ ಕನ್ನಡ ವಾಹಿನಿ ಸ್ಪಷ್ಟಪಡಿಸಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ (Bigg Boss Kannada 12) ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಬೆನ್ನಲ್ಲೇ 13ನೇ ಸೀಸನ್‌ ಅನ್ನು ಅಂದುಕೊಂಡಿದ್ದಕ್ಕಿಂತ ಬೇಗನೇ ಶುರು ಮಾಡಲಾಗುತ್ತಿದೆ. ಪ್ರತಿಭೆ ಇರುವ ಸಾಮಾನ್ಯ ಜನರು ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಬಹುದು. ಅಂದರೆ, ಸೋಶಿಯಲ್ ಮೀಡಿಯಾ (Social Media) ಇನ್ಸ್ಪ್ಯೂಯೆನ್ಸರ್‌ಗಳಿಗೆ ಅವಕಾಶ ನೀಡಲಾಗಿದೆ. ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವವರು ಅನುಸರಿಸಬೇಕಾದ ನಿಯಮಗಳು, ಮೂರು ನಿಮಿಷಗಳ ವಿಡಿಯೋದಲ್ಲಿ ಯಾವೆಲ್ಲಾ ಮಾಹಿತಿ ಇರಬೇಕು ಎಂಬುದನ್ನು ಕಲರ್ಸ್ ಕನ್ನಡ ವಾಹಿನಿ (Colors Kannada) ಸ್ಪಷ್ಟಪಡಿಸಿದೆ.

ವಾಹಿನಿ ಹೇಳಿದ್ದೇನು?

ಬಿಗ್​ಬಾಸ್​ ಆಡಿಷನ್​ನಲ್ಲಿ ಭಾಗವಹಿಸಲು ನೀವು ತೋರುತ್ತಿರುವ ಉತ್ಸಾಹ ನಮ್ಮನ್ನು ಅಚ್ಚರಿಗೊಳಿಸಿದೆ. ಆದರೆ ಉತ್ಸಾಹದ ಭರದಲ್ಲಿ ಆಡಿಷನ್​ ವಿಡಿಯೋ ಕಳುಹಿಸಲು ನಾವು ಸೂಚಿಸಿರುವ ನಾಲ್ಕು ಹಂತಗಳನ್ನು ಫಾಲೋ ಮಾಡಲು ಮರೆಯಬೇಡಿ ಎಂದು ವಾಹಿನಿ ಹೇಳಿದೆ. ಎಲ್ಲಕ್ಕಿಂತ ಮುಖ್ಯವಾಗಿ, ವಿಡಿಯೋ ಮಾಡುವಾಗ ನಿಮ್ಮ ಸ್ಪೆಶ್ಯಾಲಿಟಿ ಏನು, ಬಿಗ್​ಬಾಸ್​ನಲ್ಲಿ ಭಾಗವಹಿಸಲು ನೀವು ಯಾಕೆ ಸೂಕ್ತ ವ್ಯಕ್ತಿ, ಸ್ಪರ್ಧೆಯಲ್ಲಿ ನಿಮ್ಮಿಂದ ನಾವು ಏನು ನಿರೀಕ್ಷಿಸಬಹುದು ಎಂಬುದನ್ನು ಸ್ಪಷ್ಟವಾಗಿ ಹೇಳಿ ಎಂದಿದೆ ಕಲರ್ಸ್​ ವಾಹಿನಿ. ಪ್ರತಿಭೆ, ಆತ್ಮವಿಶ್ವಾಸ ಮತ್ತು ನಿಮ್ಮ ಟ್ಯಾಲೆಂಟ್​ ಅನ್ನು ತೋರಿಸಲೊಂದು ವೇದಿಕೆ. ಇಲ್ಲಿ ಎಂಟ್ರಿ ಪಡೆಯಲು ನೀವೆಷ್ಟು ಅರ್ಹರು ಎನ್ನುವುದನ್ನು ವಿಡಿಯೋದಲ್ಲಿ ತಪ್ಪದೇ ಹೇಳಿ. ಆಲ್​ ದಿ ಬೆಸ್ಟ್​ ಎಂದು ಹೇಳಲಾಗಿದೆ.

ಇದನ್ನೂ ಓದಿ: Radhika Pandit: ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್‌; ಸ್ಪೆಷಲ್ ವಿಡಿಯೋದಲ್ಲಿದೆ ಈ ಹಾಡು!

ಇದಾಗಲೇ ಬಿಗ್​ಬಾಸ್​​ನ ಆಡಿಷನ್​ನಲ್ಲಿ ಭಾಗವಹಿಸಲು ನೀವು ಮೂರು ನಿಮಿಷಗಳ ವಿಡಿಯೋ ಮಾಡಬೇಕು. ಅದರಲ್ಲಿ ನೀವು ಬಿಗ್​ಬಾಸ್ ಮನೆಯಲ್ಲಿ ನೀವು ಏಕೆ ಇರಬೇಕು ಎನ್ನುವುದನ್ನು ತಿಳಿಸಬೇಕು. ಇದರಲ್ಲಿ ತಮ್ಮ ಹೆಸರು, ವಿಳಾಸ, ವಯಸ್ಸು ಎಲ್ಲಾ ಡಿಟೇಲ್ಸ್​ ಕೊಟ್ಟು ವಿಡಿಯೋ ಮಾಡಿ colorskannada.jiostar.com ಗೆ ಕಳುಹಿಸಬೇಕು ಎಂದು ವಾಹಿನಿ ತಿಳಿಸಿದೆ.



ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಬೇಕು ಅಂತ ಬಯಸುವವರು ಇನ್‌ಸ್ಟಾಗ್ರಾಂನಲ್ಲಿ ಟ್ಯಾಗ್ ಮಾಡಿದರೆ ಮಾತ್ರ ಸಾಲದು. ಅದಕ್ಕೆ ಸೂಕ್ತವಾದ ಅಧಿಕೃತ ಮಾರ್ಗವನ್ನು ಅನುಸರಿಸಬೇಕು. ಈ ಸುವರ್ಣಾವಕಾಶ ಕೈತಪ್ಪಬಾರದು ಎಂದರೆ ಆಡಿಷನ್ ಪ್ರಕ್ರಿಯೆಯನ್ನು ಅಧಿಕೃತ ಚಾನೆಲ್ ಮೂಲಕವೇ ಪೂರ್ಣಗೊಳಿಸಬೇಕು. ಕೇವಲ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಕಿ ಟ್ಯಾಗ್ ಮಾಡುವುದರಿಂದ ನಿಮ್ಮ ಅಪ್ಲಿಕೇಶನ್ ಅನ್ನು ಆಯ್ಕೆ ಸಮಿತಿ ಪರಿಶೀಲಿಸುವುದಿಲ್ಲ ಎಂದು ಕಲರ್ಸ್ ಕನ್ನಡ ಹೇಳಿಕೊಂಡಿದೆ.

ಇದನ್ನೂ ಓದಿ: Drishyam 3 OTT: ಮೋಹನ್‌ಲಾಲ್ ಕ್ರೈಮ್ ಥ್ರಿಲ್ಲರ್ 'ದೃಶ್ಯಂ 3' ಒಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್; ಸ್ಟ್ರೀಮಿಂಗ್‌ ಯಾವಾಗಿನಿಂದ?

ಇನ್ನು ಬಿಗ್ ಬಾಸ್ ಆಡಿಷನ್ ಪ್ರಕ್ರಿಯೆ ಸಂಪೂರ್ಣವಾಗಿ ಉಚಿತವಾಗಿದ್ದು, ಆಡಿಷನ್ ವಿಡಿಯೋ ಮಾಡಲು, ಪ್ರವೇಶ ಫಾರ್ಮ್ ನೀಡಲು ಅಥವಾ ಶೋಗೆ ನಿಮ್ಮನ್ನು ಆಯ್ಕೆ ಮಾಡಿಕೊಡುವುದಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಹಣದ ಬೇಡಿಕೆ ಇಟ್ಟರೆ, ಅವರನ್ನು ನಂಬಿ ಮೋಸ ಹೋಗಬೇಡಿ. ಬಿಗ್ ಬಾಸ್ ಹೆಸರಿನಲ್ಲಿ ನಡೆಯುವ ಇಂತಹ ವಂಚನೆಗಳಿಗೆ ಸಿಕ್ಕಿಕೊಳ್ಳಬೇಡಿ ಎಂದೂ ವಾಹಿನಿ ಹೇಳಿಕೊಂಡಿದೆ.

Yashaswi Devadiga

View all posts by this author