ʻಬಿಗ್ ಬಾಸ್ ಕನ್ನಡ ಸೀಸನ್-13’ರಲ್ಲಿ (Bigg Boss Kannada13) ಟಾಸ್ಕ್ನ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಇಡೀ ಟಾಸ್ಕ್ ಅನ್ನು ಹಾಳು ಮಾಡುತ್ತಿರುವ ಬಗ್ಗೆ, ಟಾಸ್ಕ್ಗಳನ್ನು ರದ್ದಾಗುವಂತೆ ಮಾಡುತ್ತಿರುವ ಬಗ್ಗೆ ಸುದೀಪ್ ಶನಿವಾರದ ಎಪಿಸೋಡಿನಲ್ಲಿ ಮಾತನಾಡಿದರು. ರದ್ದಾದ ಟಾಸ್ಕ್ನಲ್ಲಿ ಯಾರದ್ದು ತಪ್ಪಿತ್ತು, ಟಾಸ್ಕ್ ಹಾಳಾಗಿದ್ದು ಏಕೆ ಎಂದು ನೇರವಾಗಿ ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡಿದರು. ಜಗ್ಗ ಮಮ್ಮಿಗೆ (Jagga Mummy) ಈ ಬಗ್ಗೆ ಪ್ರಶ್ನೆ ಕೇಳಿದಾಗ, ಪ್ರಶ್ನೆ ಅರ್ಥವಾಗದೆ ತನಗೆ ತೋಚಿದಂತೆ ಜಗ್ಗ ಮಮ್ಮಿ ಉತ್ತರ ನೀಡಿದರು. ಅದರ ಜೊತೆಗೆ ‘ನನಗೆ ಇನ್ನೂ ಗೇಮು ಅರ್ಥವಾಗಿಲ್ಲ’ ಎಂದರು. ಇದು ಸುದೀಪ್ ಅವರಿಗೆ ಸಿಟ್ಟು ತರಿಸಿತು. , ಈ ಕೂಡಲೇ ನೀವು ಅಲ್ಲಿಂದ ಹೊರಗೆ ಬನ್ನಿ, ಸೂಟ್ ಕೇಸ್ ರೆಡಿಕೊಳ್ಳಿ ಎಂದು ಜಗ್ಗ ಮಮ್ಮಿಗೆ ಕಿಚ್ಚ ಸುದೀಪ್ ಹೇಳಿದರು.
ಕಿಚ್ಚ ಸುದೀಪ್ ಅವರು ಜಗದೀಶ್ ಅವರಿಗೆ ಪಜಲ್ ಗೇಮ್ ರದ್ದಾಗಿದ್ದು ಯಾರಿಂದ ಎಂದು ನೇರವಾಗಿ ಜಗದೀಶ್ ಅವರಿಗೆ ಕೇಳಿದರು. ನಾವು ಹೊಡೆಯುವವರೇ ಜೋರಾಗಿ ಹೊಡಿಯಬಾರದಿತ್ತು, ಬರೀ ಡಿಸ್ಟರ್ಬ್ ಮಾಡಿದ್ರು ಆಗ್ತಿತ್ತು ಎಂದಿದ್ದಾರೆ. ಉಸ್ತುವಾರಿ ತಪ್ಪುಗಳಿಂದ ಟಾಸ್ಕ್ ಕ್ಯಾನ್ಸಲ್ ಆಯ್ತು ಅಂತ ಎಷ್ಟು ಜನ ಒಪ್ಪುತ್ತೀರ? ಎಂದು ಕಿಚ್ಚ ಪ್ರಶ್ನೆ ಮಾಡ್ತಾರೆ. ಇದಕ್ಕೆ ಜಗದೀಶ್ “ಸರ್ ಎಲ್ಲರಿಂದನೂ ಎನ್ನುತ್ತಾರೆ. ಇದು ಸುದೀಪ್ ಅವರಿಗೆ ಕೋಪ ಬರಿಸಿದೆ.
ಇದನ್ನೂ ಓದಿ: Bigg Boss kannada 13: 'Tall Dark Handsome' ಹುಡುಗ ಸೋನಿಕಾಗೆ ಬೇಕಂತೆ! ಸುದೀಪ್ ಕೊಟ್ಟ ಸಲಹೆ ಏನು?
ನೀವು ಪಕ್ಕಾ ತಾಯಿ ಕರಳು. ಗೇಮ್ಯೇ ಅರ್ಥ ಆಗ್ಲಿಲ್ಲ ಅಂದ್ರೇ ಏನು? 5 ನಿಮಿಷ ಟೈಮ್ ಕೊಡ್ತೀನಿ, ಲಗೇಜ್ ಪ್ಯಾಕ್ ಮಾಡ್ಕೊಂಡು ಬನ್ನಿಬಿಗ್ ಬಾಸ್ ಶೋನೇ ಅರ್ಥ ಆಗ್ಲಿಲ್ಲ ಅಂದ್ರೆ ಯಾಕ್ರೀ ಇದ್ದೀರ? ಇನ್ನು ಯಾರಿಗೆಲ್ಲ ಹೋಗಬೇಕು ಅನ್ಸುತ್ತೋ ಈಗಲೇ ಹೋಗಿ” ಎಂದು ನೇರವಾಗಿ ಹೇಳಿದರು.
ಇದನ್ನೂ ಓದಿ: Bigg Boss Kannada 13: ಬರೀ ಮಾತೇ ಆಯ್ತು ಫರ್ಫಾರ್ಮೆನ್ಸ್ ಏನಿಲ್ಲ! ಕಾವ್ಯಾಗೆ ಕುಮಾರಿ ಬಾಣದಂಥಾ ಮಾತು
‘ಹೊರಗೆ ಕಳಿಸುವ ಅಧಿಕಾರ ನನಗೂ ಇದೆ’ ಎಂದಿದ್ದಾರೆ ಕಿಚ್ಚ.ನನಗೆ ಯಾವುದೇ ಬೇಸರ ಇಲ್ಲ. ಅಸಲಿಗೆ ಈ ಬಾರಿ ನನಗೇ ಇಬ್ಬರು ಮೂವರನ್ನು ಹೊರಗೆ ಕಳಿಸುವ ಆಸೆ ಇದೆ. ಹೊರಗೆ ಕಳಿಸುವ ಅಧಿಕಾರ ನನಗೂ ಇದೆ. ಸುದೀಪ್ ಹೇಳಿದಂತೆ ಜಗ್ಗ ಮಮ್ಮಿ ಸೂಟ್ಕೇಸ್ ರೆಡಿ ಮಾಡಿಕೊಂಡು ಬಂದರಾದರೂ ಸುದೀಪ್ ಅವರು, ಜಗ್ಗ ಮಮ್ಮಿಯನ್ನು ಹೊರಗೆ ಕಳಿಸಲಿಲ್ಲ.