ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: 50 ಪೈಸೆ ಬೆಲೆ ಇಲ್ಲ ಎಂದ ಮಂಜನ ಮಾತಿಗೆ ಕಿಚ್ಚ ಗರಂ; ಇದು ತಪ್ಪು ಮಾಡಿದವರಿಗೆ ದಂಡನೆ!

Bigg Boss Kannada 13:ವೀಕೆಂಡ್‌ ಬಂತು ಅಂದರೆ ಸ್ಪರ್ಧಿಗಳ ಆಟ, ತಪ್ಪು-ಸರಿಗಳ ಚರ್ಚೆ, ಕಿಚ್ಚನ ಕ್ಲಾಸ್‌ (Sudeep Class)-ಎಲ್ಲವನ್ನೂ ನೋಡಲು ವೀಕ್ಷಕರು ಕಾತರರಾಗಿರುತ್ತಾರೆ. ಈ ವಾರದ ವೀಕೆಂಡ್‌ ಎಪಿಸೋಡ್‌ ಕೂಡ ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ. ರೌಡಿ ವರ್ತನೆ, ಗುಂಪುಗಾರಿಕೆಗಳಿಂದ ಮನೆ ಮಂದಿಗೆ ಮಾತ್ರವಲ್ಲ ಇಡೀ ಬಿಗ್​​ಬಾಸ್ ಪ್ರೇಕ್ಷಕರಿಗೆ ಅಸಹನೆ ಮೂಡಿಸಿದ್ದ ಅಗ್ನಿ ಪರೀಕ್ಷೆ (Agni Parikshe) ಸ್ಪರ್ಧಿಗಳಿಗೆ ಚಳಿ ಬಿಡಿಸಿದ್ದಾರೆ ಕಿಚ್ಚ. ‘ಅಣ್ಣ’ ಎಂದ ಮಂಜನಿಗೆ ‘ನನ್ನ ತಮ್ಮಂದಿರಾಗಲು ಕೆಲ ಯೋಗ್ಯತೆಗಳು ಇರಬೇಕಾಗುತ್ತದೆ ಎಂದಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ವೀಕೆಂಡ್‌ ಬಂತು ಅಂದರೆ ಸ್ಪರ್ಧಿಗಳ ಆಟ, ತಪ್ಪು-ಸರಿಗಳ ಚರ್ಚೆ, ಕಿಚ್ಚನ ಕ್ಲಾಸ್‌ (Sudeep Class)-ಎಲ್ಲವನ್ನೂ ನೋಡಲು ವೀಕ್ಷಕರು ಕಾತರರಾಗಿರುತ್ತಾರೆ. ಈ ವಾರದ ವೀಕೆಂಡ್‌ ಎಪಿಸೋಡ್‌ ಕೂಡ ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆ. ರೌಡಿ ವರ್ತನೆ, ಗುಂಪುಗಾರಿಕೆಗಳಿಂದ ಮನೆ ಮಂದಿಗೆ ಮಾತ್ರವಲ್ಲ ಇಡೀ ಬಿಗ್​​ಬಾಸ್ ಪ್ರೇಕ್ಷಕರಿಗೆ ಅಸಹನೆ ಮೂಡಿಸಿದ್ದ ಅಗ್ನಿ ಪರೀಕ್ಷೆ (Agni Parikshe) ಸ್ಪರ್ಧಿಗಳಿಗೆ ಚಳಿ ಬಿಡಿಸಿದ್ದಾರೆ ಕಿಚ್ಚ. ‘ಅಣ್ಣ’ ಎಂದ ಮಂಜನಿಗೆ ‘ನನ್ನ ತಮ್ಮಂದಿರಾಗಲು ಕೆಲ ಯೋಗ್ಯತೆಗಳು ಇರಬೇಕಾಗುತ್ತದೆ ಎಂದಿದ್ದಾರೆ.

50 ಪೈಸೆಗೆ ಬೆಲೆ ಇಲ್ಲ ಅವರಿಗೆ

ಈ ಮನೆಯಲ್ಲಿ ಕೆಲವರು ಅವಕಾಶ ಕೊಟ್ಟಂತಹ ವೇದಿಕೆಗೆ ಗೌರವ ಕೊಡ್ತಾ ಇಲ್ಲ. ಮಾತುಗಳು ಅವಶ್ಯಕತೆಯ ಮೀತಿ ಮೀರುತಾ ಇದ್ಯಾ? ಮಾಡಿದ್ದೇ ಸರಿ ಅನ್ನುವಂತ ಒಂದು ಮುಡ್ಡಾಳಿತನ ಕಲ್ಪನೆ ತಲೆಗೆ ಏರ್ತಾ ಇದ್ಯಾ?” ಎಂಬ ಪ್ರಶ್ನೆಗ ಜೊತೆಗೆ ಕಿಚ್ಚ ಸುದೀಪ್‌ ವೇದಿಕೆ ಪ್ರವೇಶ ಮಾಡಿದ್ದಾರೆ. ತಮ್ಮಂದಿರಿಗೆ ಕೆಲವೊಂದು ಬೆಲೆ ಇರಬೇಕು. ಮನೆ ಸದಸ್ಯರಾ? ಅವರು ಯಾವ ಸದಸ್ಯರಿ? ಕಿತ್ತು ಹೋಗಿರೋ 50 ಪೈಸೆಗೆ ಬೆಲೆ ಇಲ್ಲ ಅವರಿಗೆ ಎಂದು ಮಂಜನ ಡೈಲಾಗ್‌ ರಿಪೀಟ್‌ ಮಾಡಿದ್ದಾರೆ ಕಿಚ್ಚ.

ಇದನ್ನೂ ಓದಿ: Rashmika Mandanna: ನನ್ನ ಪ್ರೇಕ್ಷಕರನ್ನು ಭಾಷೆಯ ಮೂಲಕ ಗೌರವಿಸುವೆ; ರಶ್ಮಿಕಾ ಮಂದಣ್ಣ

ಇಷ್ಟು ಜನ ಈ ಶೋ ನೋಡ್ತಾ ಇದ್ದಾರೆ ಅಂತ ತಾನೇ ನೀವೆಲ್ಲ ಶೋಗೆ ಬರ್ತಾ ಇರೋದು? ಆ ಜನ, 12 ಸೀಸನ್‌ನಿಂದ ಸಂಪಾದಿಸಿರೋ ಆಸ್ತಿ. ಯಾವುದೋ ನಾಲ್ಕು ಜನಗಳಿಗೋಸ್ಕರ ಅಷ್ಟು ಕೋಟಿ ಕೋಟಿ ಜನಗಳನ್ನು ಕಳೆದುಕೊಳ್ಳೋಕೆ ನಾವು ಯಾರೂ ರೆಡಿ ಇಲ್ಲ” ಎಂದು ಕಿಚ್ಚ ಸುದೀಪ್‌ ಆಕ್ರೋಶ ಹೊರಹಾಕಿದ್ದಾರೆ.



ಸಆರೋಗ್ಯ ಸಮಸ್ಯೆಯ ಕಾರಣ ಓಂ ಪ್ರಕಾಶ್‌ ಈಗಾಗಲೇ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ಇದೇ ಸಂದರ್ಭದಲ್ಲಿ ಈ ವಾರ ಎಲಿಮಿನೇಷನ್‌ ಇರುವುದಿಲ್ಲ ಎನ್ನಲಾಗುತ್ತಿರುವುದರಿಂದ, ಸ್ಪರ್ಧಿಗಳಿಗೆ ಫೇಕ್‌ ಅಥವಾ ಪ್ರ್ಯಾಂಕ್‌ ಎಲಿಮಿನೇಷನ್‌ ಮೂಲಕ ಶಾಕ್‌ ನೀಡುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ.

ದನ್ನೂ ಓದಿ: Bigg Boss Kannada 13: ಬಿಗ್ ಬಾಸ್​ನಲ್ಲಿ ಈ ವಾರ ಎಲಿಮಿನೇಟ್‌ ಆಗೋದು ಇವರೇ! ಇರಲಿದೆ ಈ ಟ್ವಿಸ್ಟ್

ವಿಶೇಷವಾಗಿ ‘ಅಗ್ನಿಪರೀಕ್ಷೆ’ಯ ಕಾಮನ್‌ ಮ್ಯಾನ್‌ ಸ್ಪರ್ಧಿಗಳಿಗೆ ಈ ಮೂಲಕ ಬಿಗ್‌ ಬಾಸ್‌ ದೊಡ್ಡ ಸರ್ಪ್ರೈಸ್‌ ನೀಡಬಹುದು ಎನ್ನಲಾಗುತ್ತಿದೆ. ಅದರ ಜೊತೆಗೆ ಈ ವಾರ ಕಿಚ್ಚನ ಕ್ಲಾಸ್‌ ಕೂಡ ಇರಲಿದ್ದು, ಮಂಜ ಅವರ ಆಟದ ಬಗ್ಗೆಯೂ ಸುದೀಪ್‌ ಪ್ರಶ್ನಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.

Yashaswi Devadiga

View all posts by this author