ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಬಿಗ್ ಬಾಸ್​ನಲ್ಲಿ ಈ ವಾರ ಎಲಿಮಿನೇಟ್‌ ಆಗೋದು ಇವರೇ! ಇರಲಿದೆ ಈ ಟ್ವಿಸ್ಟ್

Bigg Boss Kannada 13: ವೀಕೆಂಡ್‌ ಬಂದರೆ ಸಾಕು ಕಿಚ್ಚನ ಪಂಚಾಯ್ತಿಗೆ ವೀಕ್ಷಕರು ಕಾಯುತ್ತಿರುತ್ತಾರೆ. ಅದರಲ್ಲೂ ಕೆಲವೊಂದಿಷ್ಟು ಸಲಹೆಗಳನ್ನು ವೀಕ್ಷಕರು ನೀಡುತ್ತಾರೆ. ಇಂದಿನ ವಾರ ನೋ ಎಲಿಮಿನೇಷನ್ ವೀಕ್ ಘೋಷಿಸಲಾಗಿದೆ ಎನ್ನಲಾಗುತ್ತಿದೆ. ನಾಮಿನೇಷನ್ ನಡೆದಿದ್ದರೂ ವೋಟಿಂಗ್ ಲೈನ್ಸ್ ಓಪನ್ ಆಗಿಲ್ಲ.ಈ ಮಧ್ಯೆ ಅಗ್ನಿಪರೀಕ್ಷೆಯ ಕಾಮನ್ ಮ್ಯಾನ್ ಸ್ಪರ್ಧಿಗಳ ಮೇಲೆ ಪ್ರ್ಯಾಂಕ್ಎ ಲಿಮಿನೇಷನ್ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬಿಗ್ ಬಾಸ್​ನಲ್ಲಿ ಈ ವಾರ ಎಲಿಮಿನೇಟ್‌ ಆಗೋದು ಇವರೇ! ಇರಲಿದೆ ಈ ಟ್ವಿಸ್ಟ್

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 19, 2026 10:48 AM

ವೀಕೆಂಡ್‌ ಬಂದರೆ ಸಾಕು ಕಿಚ್ಚನ ಪಂಚಾಯ್ತಿಗೆ ವೀಕ್ಷಕರು ಕಾಯುತ್ತಿರುತ್ತಾರೆ. ಅದರಲ್ಲೂ ಕೆಲವೊಂದಿಷ್ಟು ಸಲಹೆಗಳನ್ನು ವೀಕ್ಷಕರು ನೀಡುತ್ತಾರೆ. ಇಂದಿನ ವಾರ ನೋ ಎಲಿಮಿನೇಷನ್ (No Elimination) ವೀಕ್ ಘೋಷಿಸಲಾಗಿದೆ ಎನ್ನಲಾಗುತ್ತಿದೆ. ನಾಮಿನೇಷನ್ ನಡೆದಿದ್ದರೂ ವೋಟಿಂಗ್ ಲೈನ್ಸ್ ಓಪನ್ (Voting lines) ಆಗಿಲ್ಲ.ಈ ಮಧ್ಯೆ ಅಗ್ನಿಪರೀಕ್ಷೆಯ ಕಾಮನ್ ಮ್ಯಾನ್ ಸ್ಪರ್ಧಿಗಳ ಮೇಲೆ ಪ್ರ್ಯಾಂಕ್ (Prank elimination) ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹೌದು ಈಗಾಗಲೇ ಆರೋಗ್ಯ ಸಮಸ್ಯೆಯಿಂದಾಗಿ ಓಂ ಪ್ರಕಾಶ್‌ ಮನೆಯಿಂದ ಆಚೆ ಬಂದಿದ್ದಾರೆ. ಯಾವುದೇ ಎಲಿಮಿನೇಷನ್ ಇಲ್ಲದಿರುವ ಕಾರಣ ಎಲಿಮಿನೇಷನ್ ಹೆಸರಿನಲ್ಲಿ ಸ್ಪರ್ಧಿಗಳಿಗೆ ದೊಡ್ಡ ಪ್ರ್ಯಾಂಕ್ ಮಾಡುವ ಸಾಧ್ಯತೆ ಎನ್ನಲಾಗುತ್ತಿದೆ. ಅದರಲ್ಲೂ ಕಿಚ್ಚನ ಕ್ಲಾಸ್‌ ಕೂಡ ಈ ವೀಕ್‌ ಇದೆ. ಹೀಗಾಗಿ ಮಂಜನಿಗೆ ಪ್ರ್ಯಾಂಕ್‌ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Bigg Boss Kannada 13: ಮೊಟ್ಟ ಮೊದಲ ಕ್ಯಾಪ್ಟನ್‌ ಸಂಗೀತಾ! ಗೆಲುವನ್ನು ಸಂಭ್ರಮಿಸಿದ ಆಸಿಯಾ

ಫೇಕ್ ಎಲಿಮಿನೇಷನ್ ಮಾಡುವ ಮೂಲಕ ಕಾಮನ್ ಮ್ಯಾನ್ ಸ್ಪರ್ಧಿಗಳಿಗೆ ಮತ್ತಷ್ಟು ತಕ್ಕ ಪಾಠ ಕಲಿಸೋದು ಗ್ಯಾರಂಟಿ ಎನ್ನಲಾಗುತ್ತಿದೆ.

ಬಿಗ್‌ ಬಾಸ್‌ ಮನೆಯ ಮೊಟ್ಟ ಮೊದಲ ಕ್ಯಾಪ್ಟನ್ಸಿ ಆಟ ಆಡಲು ಹಲವು ಹಂತಗಳಲ್ಲಿ ಟಾಸ್ಕ್‌ ನೀಡಲಾಗಿತ್ತು. ಇದರಲ್ಲಿ ಮೊದಲ ಹಂತ ಇದ್ದಿದ್ದು ಪೈಲೆಟ್‌ ಆಯ್ಕೆ. ಈ ಹಂತದಲ್ಲಿ ‘ಕಣ್ಗಾವಲು’ ಎಂಬ ಟಾಸ್ಕ್‌ ನೀಡಿದ್ದರು. ಈ ವೇಳೆ ಆಟದ ಭರದಲ್ಲಿ ಸೌಂದರ್ಯ ಶೆಟ್ಟಿ ಅವರು ಮಾಡ್ರನ್‌ ಮಹಾಕವಿ ಮಂಜನ ಕಪಾಳಕ್ಕೆ ಹೊಡೆದರು. ಇದರಿಂದಕೆರಳಿ ಕೆಂಡವಾದ ಮಂಜ, ಕೆಂಡಕಾರಿದ್ದರು. ಕೊನೆಗೆ ಬಿಗ್‌ ಬಾಸ್‌ ಮಧ್ಯ ಪ್ರವೇಶ ಮಾಡಿ, ಮಂಜನನ್ನ ಸಮಧಾನ ಮಾಡಿದ್ದರು. ಸೌಂದರ್ಯ ಶೆಟ್ಟಿ ಕೂಡ ಆಟದ ಭರದಲ್ಲಿ ನಡೆದ ಅವಘಡಕ್ಕೆ ಕ್ಷಮೆ ಕೇಳಿದ್ದರು.

ಸಂಗೀತಾ ಭಟ್ ಅವರು ಈ ಸೀಸನ್ನಿನ ಮೊದಲ ಕ್ಯಾಪ್ಟನ್ ಆಗಿದ್ದಾರೆ. ಆಸಿಯಾ ಫಿರ್ದೋಸ್‌ ಹಾಗೂಸಂಗೀತಾ ಭಟ್‌ಎದುರಾಳಿಗಳಾಗಿ ಫೈಟ್‌ ಕೊಟ್ಟಿದ್ದು, ಇವರಿಗೆ ತಂಡಗಳ ಸಪೋರ್ಟ್‌ಬೇಕಿತ್ತು. ಎಲ್ಲಹಂತದಲ್ಲೂ ಸಂಗೀತಾ ಭಟ್‌ಗೆ ಸಾಥ್‌ ಸಿಕ್ಕಿದ್ದು, ‘ಬಿಗ್‌ ಬಾಸ್‌ ಸೀಸನ್‌-13’ರ ಮೊಟ್ಟ ಮೊದಲ ಕ್ಯಾಪ್ಟನ್‌ (Captain) ಆದರು.

ಇದನ್ನೂ ಓದಿ: Bigg Boss Kannada 13: ಇಬ್ಬರಲ್ಲಿ ಒಬ್ಬರನ್ನು ಮನೆಗೆ ಕಳುಹಿಸಿಯೇ ನಾನು ಹೋಗೋದು; ಧನುಷ್ ಓಪನ್ ಚಾಲೆಂಜ್

ಕಣ್ಗಾವಲು’ ಟಾಸ್ಕ್‌ ಗೆದ್ದಿದ್ದ ಸಂಗೀತಾ ಭಟ್‌ ಅವರು ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್‌ ಆಡಲು ಫೈಲೆಟ್‌ ಆಗಿ ಆಯ್ಕೆ ಆದರು. ಆಸಿಯಾ ಫಿದೋಸ್‌ ಅವರನ್ನ ಕೋ-ಫೈಲೆಟ್‌ ಆಯ್ಕೆ ಮಾಡಿಕೊಂಡರು. ಆಸಿಯಾ ತಮ್ಮ ವಿರುದ್ದ ಆಡಲು ಅವಿನಾಶ್‌, ಯಶಸ್‌, ಧನುಷ್‌ ಅವರನ್ನ ಆಯ್ಕೆ ಮಾಡಿಕೊಂಡಿದ್ದರು.