ವೀಕೆಂಡ್ ಬಂತು ಅಂದರೆ ಕಿಚ್ಚ ಸುದೀಪ್ (Sudeep) ಅವರು ಸ್ಪರ್ಧಿಗಳಿಗೆ ಕೆಲವೊಂದಿಷ್ಟು ಟಾಸ್ಕ್ ಕೊಡುತ್ತಾರೆ. ಸ್ಪರ್ಧಿಗಳು ಸಹ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸುದೀಪ್ ಅವರ ಎದುರು ಹಂಚಿಕೊಂಡಿದ್ದಾರೆ. ಈ ವೇಳೆ ವೈಲ್ಡ್ ಕಾರ್ಡ್ ಎಂಟ್ರಿ ಕುಮಾರಿ, ತಾಂಡವ್ (Thandav) ಸೇರಿದಂತೆ ಇನ್ನೂ ಕೆಲವು ಮನೆ ಮಂದಿಯ ಬಗ್ಗೆ ಸುದೀಪ್ ಎದುರು ದೂರುಗಳ ಪಟ್ಟಿಯನ್ನೇ ಹೇಳಿದ್ದಾರೆ.
ಕುಮಾರಿಗೆ ಕಿರೀಟ ಕೊಟ್ಟ ಗಾನವಿ, ಬಂದ ಕೆಲವೇ ದಿನಗಳಲ್ಲಿ ಆಟ ಅರ್ಥ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ದಡ್ಡರಂತ ಬಂದಾಗ ಫೊಟೋಗೆ ಇಂಕ್ ಹಾಕಬೇಕಿತ್ತು. ತಾಂಡವ್ಗೆ ಇಂಕ್ ಹಾಕಿದರು ಸೌಂದರ್ಯ. ತನ್ನನ್ನು ಸೇವ್ ಮಾಡಿಕೊಳ್ಳಲು ಯಾರನ್ನು ಬೇಕಾದರೂ ಕೆಳಗೆ ಹಾಕುತ್ತಾರೆ ಎಂದಿದ್ದಾರೆ.
ಇನ್ನು ತಾಂಡವ್ ಸರದಿ ಬಂದಾಗ, ಕುಮಾರಿಗೆ ತಾನು ಅವಕಾಶ ಕೊಟ್ಟೆ ಎಂದಿದ್ದಾರೆ ಅದಕ್ಕೆ ಕುಮಾರಿ ಇದ್ದರು, ಬರೀ ಮಾತಿಗೆ ಅಷ್ಟೇ ಹೇಳುತ್ತಾರೆ. ಸೌಂದರ್ಯಗೆ ಯಶಸ್ ಜೊತೆ ಆಡಬೇಕು, ಕೆಲವರಿಗೆ ಶಾಸ್ತ್ರಿ ಬೇಕು. ಯಾರೂ ಅವಕಾಶ ಕೊಟ್ಟಿಲ್ಲ. ಅದೇನೋ ಹೇಳ್ತಾರಲ್ಲ ದೊಡ್ಡವರೆಲ್ಲ ಜಾಣರಲ್ಲ ಎಂದಿದ್ದಾರೆ.
ಇದನ್ನೂ ಓದಿ: Bigg Boss kannada 13: 'Tall Dark Handsome' ಹುಡುಗ ಸೋನಿಕಾಗೆ ಬೇಕಂತೆ! ಸುದೀಪ್ ಕೊಟ್ಟ ಸಲಹೆ ಏನು?
View this post on Instagram A post shared by Colors Kannada Official (@colorskannadaofficial)
ಈ ವಾರ ಸೋನಿಕಾ, ಗಾನವಿ, ಕಾವ್ಯ, ಜಗದೀಶ, ಆಸಿಯಾ ಹಾಗೂ ತಾಂಡವ್ ರಾಮ್ ನಾಮಿನೇಟ್ ಆಗಿದ್ದರೆ, ಇವರುಗಳ ಪೈಕಿ ಯಾರು ಸೇಫ್ ಆಗಲಿದ್ದಾರೆ ಎನ್ನುವುದನ್ನು ಕಿಚ್ಚ ಸುದೀಪ್ ಶನಿವಾರದ ಸಂಚಿಕೆಯಲ್ಲಿ ಹೇಳಿಲ್ಲ.
ಕಳೆದ ವಾರ ಮಂಜ ಹಾಗೂ ಸಂಗೀತಾ ಇಬ್ಬರು ಮನೆಯಿಂದ ಆಚೆ ಹೋಗಿದ್ದರು. ಈ ವಾರ ಹಬ್ಬದ ಕಾರಣದಿಂದ ಎಲಿಮಿನೇಷನ್ ಪ್ರಕ್ರಿಯೆ ಇರುವುದು ಅನುಮಾನವೆನ್ನಲಾಗುತ್ತಿತ್ತು. ಆದರೆ ಈ ವಾರ ಎಲಿಮಿನೇಷನ್ ನಡೆಯಲಿದೆ ಎನ್ನುವುದನ್ನು ಕಿಚ್ಚ ಹೇಳಿದ್ದಾರೆ.
ಇದನ್ನೂ ಓದಿ: Sudeep Marriage Anniversary: ಕಿಚ್ಚ ಸುದೀಪ್ ಮದುವೆ ವಾರ್ಷಿಕೋತ್ಸವ; ವಿಶೇಷ ಚಿತ್ರಗಳು ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಈ ವಾರ ಯಾರು ಹೋಗುತ್ತಾರೆ ಎನ್ನುವ ಬಗ್ಗೆ ಬಾರೀ ಚರ್ಚೆ ನಡೆಯುತ್ತಿದೆ. ಕಾವ್ಯ ಹೆಸರು ಸಖತ್ ಚರ್ಚೆಯಲ್ಲಿದೆ.