ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BBK 13: ಆಟ ಶುರುವಾಗುತ್ತಿದ್ದಂತೆಯೇ 'ಗಿಲ್ಲಿ' ನಟನ ಹೆಸರನ್ನು ಜಪಿಸಿದ ಸ್ಪರ್ಧಿಗಳು; ಮಾತಿನ ಮಲ್ಲನ ಸ್ಟೈಲ್‌ ಕಾಪಿ ಮಾಡುತ್ತಿರೋದು ಯಾರು?

Bigg Boss Kannada 13: ಬಿಗ್‌ ಬಾಸ್ ಮನೆಯಲ್ಲಿ ಆಟ ಶುರುವಾದ ಮೂರೇ ದಿನಕ್ಕೆ ಕಳೆದ ಬಾರಿಯ ವಿನ್ನರ್ ಗಿಲ್ಲಿ ನಟನ ಹೆಸರು ಸದ್ದುಮಾಡಿದೆ. ಸ್ಪರ್ಧಿ ಮಂಜ ಅವರು ಗಿಲ್ಲಿ ಶೈಲಿಯನ್ನು ನಕಲು ಮಾಡುತ್ತಿದ್ದಾರೆ ಎಂದು ಸಹ-ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಮತ್ತು ತಾಂಡವ್ ಲೇವಡಿ ಮಾಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭವಾಗಿದೆ. ಒಟ್ಟು 16 ಮಂದಿ ಸ್ಪರ್ಧಿಗಳಲ್ಲಿ 8 ಮಂದಿ ಮನೆಯೊಳಗೆ ಇದ್ದರೆ, ಉಳಿದ 8 ಮಂದಿ ಇನ್ನೂ ವಿಮಾನದಲ್ಲೇ ಇದ್ದಾರೆ. ಇವರಲ್ಲಿ ಮನೆಯೊಳಗೆ ಕಾಲಿಡುವ ಅವಕಾಶ ಯಾರಿಗೆ ಸಿಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಏಕೆಂದರೆ, ಇವರೆಲ್ಲರೂ ನಾಮಿನೇಟ್ ಆಗಿದ್ದಾರೆ. ಹೀಗಾಗಿ, ಈ 16 ಮಂದಿಯ ಬಗ್ಗೆ ವೀಕ್ಷಕರಿಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಆದರೆ ಆಟ ಶುರುವಾಗಿ ಕೇವಲ 3 ದಿನ ಕಳೆಯುವುದರೊಳಗೆ ಮನೆಯೊಳಗೆ ಕಳೆದ ಬಾರಿಯ ವಿನ್ನರ್ ಗಿಲ್ಲಿ ನಟ ಅವರ ಹೆಸರು ಪ್ರಸ್ತಾಪವಾಗಿದೆ.

ಗಿಲ್ಲಿ ನಟನ ಹಾಗೆ ಈ ಬಾರಿ ಯಾರಿದ್ದಾರೆ?

ಗಗನ್ ಚಿನ್ನಪ್ಪ ಮತ್ತು ತಾಂಡವ್ ಅವರು ಬಿಗ್ ಬಾಸ್ ಮನೆಯ ಒಂದು ಮೂಲೆಯಲ್ಲಿ ಕುಳಿತು ನಾಮಿನೇಷನ್ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ 'ಗಿಲ್ಲಿ' ನಟನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಮಾಡರ್ನ್ ಮಹಾಕವಿ ಮಂಜ ಅವರು ಗಿಲ್ಲಿ ನಟ ಅವರನ್ನು ಕಾಪಿ ಮಾಡುತ್ತಿದ್ದಾರೆ ಎಂಬುದು ಇವರ ಅಭಿಪ್ರಾಯ. "ಗಿಲ್ಲಿ ಏನೋ ಒಂದು ವಿಷಯ ಇಟ್ಟುಕೊಂಡು ಮಾತನಾಡುತ್ತಿದ್ದ... ಆದರೆ ಮಂಜ ಒಂಥರಾ ಖಾಲಿ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದ ಹಾಗೆ" ಎಂದು ತಾಂಡವ್ ವ್ಯಂಗ್ಯವಾಡಿದ್ದಾರೆ. ಜೊತೆಗೆ "ಗಿಲ್ಲಿ ತರಹ ಇವನಿಗೆ ಆಡಲು ಬರಲ್ಲ" ಎಂದು ಲೇವಡಿ ಮಾಡಿದ್ದಾರೆ.

ʻದಿ ಡೆವಿಲ್‌ʼ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಖುಷಿಯಾಗಿರುವ ಗಿಲ್ಲಿ ನಟ; ʻಬಿಗ್‌ ಬಾಸ್‌ʼ ಮನೆಯ ಸ್ಪರ್ಧಿಗಳ ಜೊತೆ ಸಂತಸ ಹಂಚಿಕೊಂಡಿದ್ದ ʻಮಾತಿನ ಮಲ್ಲʼ

ಅಲ್ಲಿಗೆ, ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರ ಹಾಗೆ ಆಟವಾಡಲು ಮಹಾಕವಿ ಮಂಜ ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಗಗನ್ ಚಿನ್ನಪ್ಪ ಮತ್ತು ತಾಂಡವ್ ಗಮನಿಸಿರುವುದು ಸ್ಪಷ್ಟವಾಗುತ್ತದೆ. ಅಷ್ಟಕ್ಕೂ ಗಿಲ್ಲಿ ಆಟ ಹೇಗಿತ್ತು? 'ಗಿಲ್ಲಿ' ನಟ ಅಲಿಯಾಸ್ ಮಳವಳ್ಳಿ ನಟರಾಜ್ ಆಟ ಕೇವಲ ಮನರಂಜನೆಯಿಂದ ಕೂಡಿರಲಿಲ್ಲ. ಸಾಮಾನ್ಯ ಹಿನ್ನೆಲೆಯಿಂದ ಬಂದ ವ್ಯಕ್ತಿಯೊಬ್ಬರು ತಮ್ಮ ನೈಜ ಸ್ವಭಾವ, ಹಾಸ್ಯ, ಭಾವನೆ ಮತ್ತು ಎಲ್ಲರೊಂದಿಗೆ ಬೆರೆಯುವ ಗುಣದಿಂದ ಹೇಗೆ ಪ್ರೇಕ್ಷಕರ ಮನ ಗೆಲ್ಲಬಹುದು ಎಂಬುದಕ್ಕೆ ಅವರು ಉತ್ತಮ ಉದಾಹರಣೆಯಾಗಿದ್ದರು.

ಗಿಲ್ಲಿ 'ಕಾಮಿಡಿ ಕಂಟೆಸ್ಟೆಂಟ್' ಆಗಿರಲಿಲ್ಲ

ಗಿಲ್ಲಿಯ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅವರ ಸಹಜತೆ. ಬಿಗ್ ಬಾಸ್ ಮನೆಯಲ್ಲಿ ಕ್ಯಾಮೆರಾ ಇದೆ ಎನ್ನುವುದನ್ನೇ ಮರೆತು ಅವರು ಜೀವಿಸುತ್ತಿದ್ದರು. ಕೃತಕವಾಗಿ ಗಂಭೀರವಾಗಿ ಕಾಣಿಸಿಕೊಳ್ಳುವ ಪ್ರಯತ್ನ ಮಾಡದೆ, ತಮ್ಮದೇ ಮಾತಿನ ಶೈಲಿ, ಹಾಸ್ಯ ಮತ್ತು ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡಿದ್ದರು. ಅವರನ್ನು ಕೇವಲ 'ಕಾಮಿಡಿ ಕಂಟೆಸ್ಟೆಂಟ್' ಎಂದು ಮಾತ್ರ ನೋಡಲು ಸಾಧ್ಯವಿಲ್ಲ.

ಟಾಸ್ಕ್‌ಗಳಲ್ಲಿ ತೀವ್ರ ಸ್ಪರ್ಧಾತ್ಮಕತೆ ತೋರಿದ್ದಲ್ಲದೆ, ನಾಮಿನೇಷನ್‌ಗಳ ಸಂದರ್ಭದಲ್ಲೂ ತಮ್ಮ ಅಭಿಪ್ರಾಯವನ್ನು ದಿಟ್ಟವಾಗಿ ವ್ಯಕ್ತಪಡಿಸುತ್ತಿದ್ದರು; ಅಗತ್ಯವಿದ್ದಾಗ ಸಂಘರ್ಷದಿಂದ ಎಂದೂ ಹಿಂದೆ ಸರಿಯುತ್ತಿರಲಿಲ್ಲ. ಆದರೆ, ಅಂತಹ ಛಾತಿ ಸದ್ಯಕ್ಕೆ ಬಿಗ್ ಬಾಸ್ 13ರ ಮನೆಯಲ್ಲಿ ಯಾರಲ್ಲೂ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಮಂಜ ನಿಜವಾಗಿಯೂ ಗಿಲ್ಲಿಯನ್ನು ನಕಲು ಮಾಡುತ್ತಿದ್ದಾರಾ ಎಂಬ ಸ್ಪಷ್ಟ ಚಿತ್ರಣ ಪ್ರೇಕ್ಷಕರಿಗೆ ಸಿಗುವುದು ಖಚಿತ.