ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಮಂಜ -ಯಶಸ್‌ ನಡುವಿನ ವೈಮನಸ್ಸು; ಮತ್ತೆ ರದ್ದಾಯ್ತು ಟಾಸ್ಕ್!

Bigg Boss Kannada 13: ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ (Bigg Boss Kannada 13) ಟಾಸ್ಕ್‌ಗಳ ರದ್ದಾಗುವ ಸರಣಿ ಮುಂದುವರಿದಿದೆ. ಮಾಡರ್ನ್ ಕವಿ ಮಂಜ ಮತ್ತೆ ಬಿಗ್‌ಬಾಸ್ ಮನೆಗೆ ಮರಳಿದ ಬಳಿಕ ಆಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ, ಇದೀಗ ಮಂಜ ಮತ್ತು ಯಶಸ್(Manja Yashas)ನಡುವಿನ ಭಿನ್ನಾಭಿಪ್ರಾಯದಿಂದ ಮತ್ತೊಂದು ಟಾಸ್ಕ್ ರದ್ದಾಗಿದ್ದು, ಮನೆಯೊಳಗೆ ಸ್ಪರ್ಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ (Bigg Boss Kannada 13) ಟಾಸ್ಕ್‌ಗಳ ರದ್ದಾಗುವ ಸರಣಿ ಮುಂದುವರಿದಿದೆ. ಮಾಡರ್ನ್ ಕವಿ ಮಂಜ ಮತ್ತೆ ಬಿಗ್‌ಬಾಸ್ ಮನೆಗೆ ಮರಳಿದ ಬಳಿಕ ಆಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ, ಇದೀಗ ಮಂಜ ಮತ್ತು ಯಶಸ್(Manja Yashas)ನಡುವಿನ ಭಿನ್ನಾಭಿಪ್ರಾಯದಿಂದ ಮತ್ತೊಂದು ಟಾಸ್ಕ್ ರದ್ದಾಗಿದ್ದು, ಮನೆಯೊಳಗೆ ಸ್ಪರ್ಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬಿಗ್‌ಬಾಸ್ ಮನೆಯಲ್ಲಿ ನಡೆಯುತ್ತಿರುವ ಟಾಸ್ಕ್‌ಗಳ ಪೈಕಿ ಈಗಾಗಲೇ ಮೂರಕ್ಕೂ ಹೆಚ್ಚು ಟಾಸ್ಕ್‌ಗಳು ರದ್ದಾಗಿವೆ. ಈ ಮೂಲಕ ಬಿಗ್‌ಬಾಸ್ ಕನ್ನಡದ ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ ಸೀಸನ್ 13ರಲ್ಲಿ ಅತಿ ಹೆಚ್ಚು ಟಾಸ್ಕ್‌ಗಳು ರದ್ದಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಬಣ್ಣ ಬಳಿಯುವ ಟಾಸ್ಕ್ ಕೂಡ ಇದೇ ಹಾದಿ ಹಿಡಿದಿದೆ.

ಇದನ್ನೂ ಓದಿ: Bigg Boss Kannada 13: ಈ ವಾರ ದೊಡ್ಮನೆಯಲ್ಲಿ ತಂತ್ರ, ಪ್ರತಿತಂತ್ರ ಜೊತೆಗೆ ಸ್ವಲ್ಪ ಕುತಂತ್ರ!

ಮಂಜ–ಯಶಸ್ ನಡುವೆ ಶುರುವಾದ ಜಟಾಪಟಿ

ಬಿಗ್‌ಬಾಸ್ ಆದೇಶದಂತೆ ಮಂಜ ಮತ್ತು ಯಶಸ್‌ಗೆ ಬಣ್ಣ ಬಳಿಯುವ ಟಾಸ್ಕ್‌ನ ಉಸ್ತುವಾರಿ ವಹಿಸಲಾಗಿತ್ತು. ಟಾಸ್ಕ್ ಮುಗಿದ ಬಳಿಕ ಫಲಿತಾಂಶ ಘೋಷಿಸುವ ಜವಾಬ್ದಾರಿಯೂ ಇವರ ಮೇಲಿತ್ತು. ಆದರೆ, ಫಲಿತಾಂಶ ಪ್ರಕಟಿಸುವ ಸಮಯದಲ್ಲಿ ಇಬ್ಬರ ನಡುವೆ ಒಮ್ಮತ ಮೂಡಲೇ ಇಲ್ಲ.

ತಮ್ಮ ತಮ್ಮ ತಂಡದ ಫೋಟೋಗಳೇ ಉತ್ತಮವಾಗಿವೆ ಎಂದು ಇಬ್ಬರೂ ವಾದಿಸಿದ್ದಾರೆ. ಪ್ರೋಮೋದಲ್ಲಿ ಕಾಣಿಸುವಂತೆ ಯಶಸ್ ತಂಡ ಬಹಳ ಅಚ್ಚುಕಟ್ಟಾಗಿ ಬಣ್ಣ ಬಳಿದಿದ್ದರೆ, ಮಂಜ ತಂಡವೂ ತನ್ನದೇ ರೀತಿಯಲ್ಲಿ ಉತ್ತಮ ಪ್ರಯತ್ನ ಮಾಡಿದೆ. ಆದರೆ, ಫೋಟೋಗಳ ಗುಣಮಟ್ಟದ ವಿಚಾರದಲ್ಲಿ ಇಬ್ಬರೂ ಒಂದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಇದರ ನಡುವೆ ಹಳೆಯ ಮನಸ್ತಾಪಗಳೂ ಈ ವಾದಕ್ಕೆ ಕಾರಣವಾಗಿರುವಂತೆ ಕಂಡುಬಂದಿದೆ. ಕೊನೆಗೆ ಇಬ್ಬರೂ ಬಿಗ್‌ಬಾಸ್ ಬಳಿಯೇ ತಮ್ಮಿಂದ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.



ಟಾಸ್ಕ್ ಪರಿಗಣಿಸುವುದಿಲ್ಲ ಎಂದ ಬಿಗ್‌ಬಾಸ್!

ಉಸ್ತುವಾರಿಗಳಿಬ್ಬರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. “ಫಲಿತಾಂಶ ನೀಡಲು ಕಷ್ಟವಾಗುತ್ತಿರುವ ಈ ಟಾಸ್ಕನ್ನು ಬಿಗ್‌ಬಾಸ್ ಕೂಡ ಪರಿಗಣಿಸುವುದಿಲ್ಲ. ಇದನ್ನು ಇಲ್ಲಿಗೆ ಬಿಟ್ಟುಬಿಡಿ” ಎಂದು ಆದೇಶಿಸಿದ್ದಾರೆ.

ಬಿಗ್‌ಬಾಸ್ ನೇರವಾಗಿ ಟಾಸ್ಕ್ ರದ್ದಾಗಿದೆ ಎಂದು ಘೋಷಿಸದಿದ್ದರೂ, ಫಲಿತಾಂಶವನ್ನು ಪರಿಗಣಿಸುವುದಿಲ್ಲ ಎಂಬ ಮಾತಿನ ಮೂಲಕ ಟಾಸ್ಕ್‌ಗೆ ತೆರೆ ಎಳೆದಿದ್ದಾರೆ. ಇದರಿಂದ ಸ್ಪರ್ಧಿಗಳ ನಿರೀಕ್ಷೆ ಹುಸಿಯಾಗಿದೆ.

ಇದನ್ನೂ ಓದಿ: Bigg Boss Kannada 13: ಮಂಜು-ಯಶಸ್ ಕಿರಿಕ್; ಮಹಾಕವಿಯ ಚುಚ್ಚುವ ಮಾತು ಶುರು

ಟಾಸ್ಕ್ ರದ್ದಾದ ಬಳಿಕ ಜಗದೀಶ್, ಆಸಿಯಾ, ಸೌಂದರ್ಯ ಮತ್ತು ಗಗನ್ ಚಿನ್ನಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಜನ ವರ್ತನೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ವೇಳೆ ಮಂಜ ಕೂಡ ಸುಮ್ಮನಿರದೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. “ಯಾವಾಗಲೂ ಹೀಗೆಯೇ ಮಂಜನಾ?” ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಂಜ, “ಮಂಜ ಮಾತ್ರ ಹೀಗಲ್ಲ, ಯಶಸ್ ಮತ್ತು ಮಂಜ ಯಾವಾಗಲೂ ಹೀಗೆನಾ ಎಂದು ಕೇಳಬೇಕಿತ್ತು” ಎಂದು ಹೇಳಿದ್ದಾರೆ.

Yashaswi Devadiga

View all posts by this author