ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ (Bigg Boss kannada 13) ಸೌಂದರ್ಯಾ ಶೆಟ್ಟಿ, ತಾಂಡವ್ ರಾಮ್ ಹಾಗೂ ಪ್ರಶಾಂತ್ ತಮ್ಮ ಅತ್ಯುತ್ತಮ ಮನರಂಜನೆಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಕಳೆದ ವಾರ ಸೌಂದರ್ಯಾ ಹಾಗೂ ತಾಂಡವ್ ಅವರು ಗಮನ ಸೆಳೆದಿದ್ದರು. ಈ ವಾರ ಪ್ರಶಾಂತ್ ಕೂಡ ಭರಪೂರ ಮನರಂಜನೆ ಕೊಟ್ಟಿದ್ದಾರೆ. ಈ ವಾರ ಶೆಟ್ಟಿ ಡಾನ್ (Shety Don) ಮದುವೆ ಶಾಸ್ತ್ರ ನಡೆದಿದೆ. ಈ ವಾರ ಶೆಟ್ಟಿ ಡಾನ್ ತಂದೆ ಪಾತ್ರದಲ್ಲಿ ತಾಂಡವ್ ಅವರು ಮೆಚ್ಚುಗೆ ಪಡೆದಿದ್ದಾರೆ. ಇದೀಗ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ, ತಾಂಡವ್ ಹಾಗೂ ಜಗ್ಗ ನಡುವೆ ಹಣಾಹಣಿ ನಡೆದಿದೆ.
ತಾವಿರುವ ಮನೆಯ ಡೈಸ್ ಉರುಳಿಸುತ್ತಾ, ತಮಗೆ ಮೀಸಲಿರುವ ರಿಂಗ್‌ವನ್ನು ಬಲೆಗೆ ಕಟ್ಟಿಕೊಂಡು ಸಂಗ್ರಹಿಸಬೇಕು. ರಿಂಗ್‌ಗಳನ್ನು ಕೊಕ್ಕೆಯಲ್ಲಿ ಸಿಕ್ಕಿಕೊಳ್ಳುವಂತೆ ಎಸೆಯಬೇಕು. ಅತಿ ಹೆಚ್ಚು ರಿಂಗ್ ಕೊಕ್ಕೆಯಲ್ಲಿ ಯಾರು ಸಿಕ್ಕಿಸುತ್ತಾರೋ ಅವರೇ ವಿನ್. ಇಂದಿನ ಸಂಚಿಕೆಯಲ್ಲಿ ಯಾರು ವಿನ್ ಆಗಲಿದ್ದಾರೆ ಎಂದು ತಿಳಿಯಲಿದೆ.