ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಈ ಗುಳ್ಳೆನರಿಯ ಆಟ ಶುರು! ಸ್ಪರ್ಧಿಗಳಿಗೆ ಢವ ಢವ

Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಮನೆಯಲ್ಲಿ ಕುತೂಹಲಕಾರಿ ಬೆಳವಣಿಗೆಯೊಂದು ಆರಂಭವಾಗಿದೆ. ಮನೆಯ ಸ್ಪರ್ಧಿಗಳ ನಡುವೆ ಹೊಸ ಆಟಕ್ಕೆ ಬಿಗ್ ಬಾಸ್ ನಾಂದಿ ಹಾಡಿದ್ದು, ಇದೀಗ ‘ಗುಳ್ಳೆನರಿ’ಯ (Gulle Nari) ಪ್ರವೇಶ ಎಲ್ಲರ ಗಮನ ಸೆಳೆಯುತ್ತಿದೆ. ಕಾಡಿನಲ್ಲಿ ಅಧಿಕಾರ ಪಡೆಯಲು ಕೆಲವು ಪ್ರಾಣಿಗಳು ಚಾಣಾಕ್ಷತನ, ತಂತ್ರ ಹಾಗೂ ನಂಬಿಕೆಯ ಮುಖವಾಡವನ್ನು ಬಳಸುತ್ತವೆ. ದ್ರೋಹದ ಮೂಲಕ ಅಧಿಕಾರ ಹಿಡಿಯುವ ಇಂತಹ ಪ್ರಾಣಿಯೇ ಗುಳ್ಳೆನರಿ ಎಂದು ಬಿಗ್ ಬಾಸ್ (Bigg Boss) ಘೋಷಿಸಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಮನೆಯಲ್ಲಿ ಕುತೂಹಲಕಾರಿ ಬೆಳವಣಿಗೆಯೊಂದು ಆರಂಭವಾಗಿದೆ. ಮನೆಯ ಸ್ಪರ್ಧಿಗಳ ನಡುವೆ ಹೊಸ ಆಟಕ್ಕೆ ಬಿಗ್ ಬಾಸ್ ನಾಂದಿ ಹಾಡಿದ್ದು, ಇದೀಗ ‘ಗುಳ್ಳೆನರಿ’ಯ (Gulle Nari) ಪ್ರವೇಶ ಎಲ್ಲರ ಗಮನ ಸೆಳೆಯುತ್ತಿದೆ. ಕಾಡಿನಲ್ಲಿ ಅಧಿಕಾರ ಪಡೆಯಲು ಕೆಲವು ಪ್ರಾಣಿಗಳು ಚಾಣಾಕ್ಷತನ, ತಂತ್ರ ಹಾಗೂ ನಂಬಿಕೆಯ ಮುಖವಾಡವನ್ನು ಬಳಸುತ್ತವೆ. ದ್ರೋಹದ ಮೂಲಕ ಅಧಿಕಾರ ಹಿಡಿಯುವ ಇಂತಹ ಪ್ರಾಣಿಯೇ ಗುಳ್ಳೆನರಿ ಎಂದು ಬಿಗ್ ಬಾಸ್ (Bigg Boss) ಘೋಷಿಸಿದ್ದಾರೆ. ಈ ಮೂಲಕ ಮನೆಯೊಳಗೆ ಗುಳ್ಳೆನರಿಯ ಆಟ ಆರಂಭವಾಗಿದ್ದು, ಯಾರು ಈ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ಕುತೂಹಲ ಸ್ಪರ್ಧಿಗಳು ಹಾಗೂ ವೀಕ್ಷಕರಲ್ಲಿ ಮೂಡಿದೆ.

ತನ್ನದೇ ತಂಡಕ್ಕೆ ಸೋಲುಣಿಸುವುದೇ ಮೊದಲ ಟಾಸ್ಕ್!

ಗುಳ್ಳೆನರಿಗೆ ಬಿಗ್ ಬಾಸ್ ನೀಡಿರುವ ಮೊದಲ ಜವಾಬ್ದಾರಿ ಸಾಕಷ್ಟು ಅಚ್ಚರಿ ಮೂಡಿಸಿದೆ. ತನ್ನದೇ ತಂಡವನ್ನು ಸೋಲಿಸುವುದೇ ಈ ಪಾತ್ರದ ಮೊದಲ ಟಾಸ್ಕ್ ಆಗಿದೆ. ಅಂದರೆ, ತಂಡದ ಸದಸ್ಯರೊಂದಿಗೆ ನಂಬಿಕೆಯಿಂದ ಇರುವಂತೆ ನಟಿಸುತ್ತಾ, ಒಳಗೊಳಗೆ ತಂಡದ ಸೋಲಿಗೆ ಕಾರಣವಾಗಬೇಕಿದೆ.

ಈ ಟಾಸ್ಕ್ ಮನೆಯೊಳಗಿನ ವಾತಾವರಣವನ್ನು ಮತ್ತಷ್ಟು ರಂಗೇರಿಸುವ ಸಾಧ್ಯತೆಯಿದೆ. ಯಾರು ಯಾರನ್ನು ನಂಬಬೇಕು, ಯಾರು ದ್ರೋಹ ಮಾಡುತ್ತಿದ್ದಾರೆ ಎಂಬ ಗೊಂದಲ ಸ್ಪರ್ಧಿಗಳಲ್ಲಿ ಮೂಡುವುದು ಸಹಜ.

ಇದನ್ನೂ ಓದಿ; Bigg Boss Kannada 13: ಕಿರಣ್ ಶಾಸ್ತ್ರಿಗೆ, ಗಗನ್‌ಗೆ ಕಿಚ್ಚನ ಚಪ್ಪಾಳೆ; ಬೆಲೆಬಾಳುವ ಜಾಕೆಟ್‌ ಯಾರಿಗೆ?



ಗುಳ್ಳೆನರಿ ಯಾರು ಎಂಬ ಕುತೂಹಲ!

ಬಿಗ್ ಬಾಸ್ ಮನೆಯೊಳಗೆ ಗುಳ್ಳೆನರಿಯ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ. ಈ ಆಟದಲ್ಲಿ ಚಾಣಾಕ್ಷತನ, ಸಮಯಪ್ರಜ್ಞೆ ಹಾಗೂ ನಟನಾ ಕೌಶಲ್ಯಕ್ಕೆ ಹೆಚ್ಚಿನ ಮಹತ್ವ ಸಿಗಲಿದೆ.

ಒಂದೆಡೆ ತಂಡದ ನಂಬಿಕೆಯನ್ನು ಉಳಿಸಿಕೊಳ್ಳಬೇಕು, ಮತ್ತೊಂದೆಡೆ ಬಿಗ್ ಬಾಸ್ ನೀಡಿರುವ ರಹಸ್ಯ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಬೇಕು. ಈ ಎರಡು ಸವಾಲುಗಳನ್ನು ಸ್ಪರ್ಧಿ ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Sreejith Ravi: ಪೋಕ್ಸೊ ಪ್ರಕರಣದಲ್ಲಿ ನಟ ಶ್ರೀಜಿತ್ ರವಿಗೆ ಒಂದು ವರ್ಷ ಕಠಿಣ ಜೈಲು!

ಮನೆಯೊಳಗೆ ಶುರುವಾಗಲಿದೆಯೇ ದ್ರೋಹದ ಆಟ?

ಗುಳ್ಳೆನರಿಯ ಆಟದಿಂದಾಗಿ ಸ್ಪರ್ಧಿಗಳ ನಡುವಿನ ಸ್ನೇಹ, ನಂಬಿಕೆ ಹಾಗೂ ತಂಡದ ಒಗ್ಗಟ್ಟಿಗೆ ಪರೀಕ್ಷೆ ಎದುರಾಗುವ ಸಾಧ್ಯತೆಯಿದೆ. ಗುಳ್ಳೆನರಿಯ ತಂತ್ರವನ್ನು ಇತರ ಸ್ಪರ್ಧಿಗಳು ಪತ್ತೆಹಚ್ಚುತ್ತಾರಾ? ಅಥವಾ ಗುಳ್ಳೆನರಿ ತನ್ನ ಚಾಣಾಕ್ಷ ಆಟದ ಮೂಲಕ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತದೆಯೇ? ನೋಡಬೇಕಿದೆ.

Yashaswi Devadiga

View all posts by this author