ʻಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ಶೀಘ್ರದಲ್ಲೇ ಪ್ರಸಾರವಾಗಲು ಸಜ್ಜಾಗುತ್ತಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಬಾರಿಯ ಸೀಸನ್‌ನ ಪ್ರಮುಖ ಆಕರ್ಷಣೆ ಅಂತಂದರೆ ಸಾಮಾನ್ಯ ಜನರಿಗೆ ಎಂಟ್ರಿ ನೀಡ್ತಿರೋದು. ʻಬಿಗ್ ಬಾಸ್ ಅಗ್ನಿಪರೀಕ್ಷೆʼ (Bigg Boss agnipariskshe) ಎಂಬ ವಿಶೇಷ ಸೆಲೆಕ್ಷನ್ ಪ್ರಕ್ರಿಯೆ ಇದೆ. ಜಡ್ಜ್‌ಗಳಾಗಿ ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಚಂದನ್ ಶೆಟ್ಟಿ ಶೃತಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಪ್ರೋಮೋ ಔಟ್ ಆಗಿದೆ.
ಪ್ರೋಮೋದಲ್ಲಿ ಒಬ್ಬಬ್ಬರಾಗಿ ವಿವರಿಸಿದ್ದಾರೆ. ವಿನಯ್ ಅವರು ಮನುಷ್ಯನಿಗೆ ಬೇಕಾಗಿರೋದು ಶಕ್ತಿ ಮಾತ್ರ ಅಲ್ಲ ಅರ್ಹತೆ ಎಂದು ಹೇಳಿದ್ದಾರೆ. ಎಲ್ಲರಿಗೂ ಬಿಗ್ ಬಾಸ್‌ಗೆ ಬರೋ ಕನಸು ಇರುತ್ತೆ. ಆದರೆ ಇಲ್ಲಿ ಬರೋ ಚಾಲೆಂಜ್‌ಗೆ ಹೆದರದೇ ಎದುರಿಸಿ ಗೆಲ್ಲೋರು ಮಾತ್ರ. ಇದೀಗ ಈ ಮಹಾಯುದ್ದ ಗೆದ್ದು ಮನೆಯೊಳಗೆ ಎಂಟ್ರಿ ಆಗೋದು ಯಾರು? ಅಂತ ಇದೆ. ಅದೇ ವೀಕ್ಷಕರಲ್ಲಿ ಇರೋ ಕುತೂಹಲ. ಆದರೆ ಪ್ರೋಮೋ ಔಟ್ ಆಗುತ್ತಿದ್ದಂತೆ ಗಿಲ್ಲಿ ಇರಬೇಕಿತ್ತು ಅಂತ ಕಮೆಂಟ್ ಮಾಡಿ ಬೇಸರ ಹೊರ ಹಾಕಿದ್ದಾರೆ ವೀಕ್ಷಕರು.
ಇದನ್ನೂ ಓದಿ: Mithun Chakraborty: ಆಸ್ಪತ್ರೆಗೆ ದಾಖಲಾದ ಹಿರಿಯ ನಟ ಮಿಥುನ್ ಚಕ್ರವರ್ತಿ
ಆಗಸ್ಟ್ 6ರಿಂದ ಅಗಸ್ಟ್ 17ರವರೆಗೆ
ʻಬಿಗ್ ಬಾಸ್ʼ ಪ್ರೇಕ್ಷಕರಿಗೆ ʻಕಲರ್ಸ್ ಕನ್ನಡʼ ವಾಹಿನಿಯು ಮತ್ತೊಂದು ರೋಚಕ ಅವಕಾಶವನ್ನ ಒದಗಿಸಿದೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಗಸ್ಟ್ 6ರಿಂದ ಅಗಸ್ಟ್ 17ರವರೆಗೆ ನಡೆಯುತ್ತಿರುವ ಸ್ವಾತಂತ್ರ್ಯ ದಿನಾಚರಣೆಯ ಫ್ಲವರ್ ಶೋನಲ್ಲಿ ವಿಶೇಷವಾದ ʻಬಿಗ್ ಬಾಸ್ʼ ಅಗ್ನಿಪರೀಕ್ಷೆ ಎಕ್ಸ್‌ಪೀರಿಯನ್ಸ್ ಝೋನ್ ಸಿದ್ದಪಡಿಸಲಾಗಿದೆ. ಈ ಎಕ್ಸ್‌ಪೀರಿಯನ್ಸ್ ಝೋನ್‌ನಲ್ಲಿ ಪ್ರೇಕ್ಷಕರಿಗೆ ʻಬಿಗ್ ಬಾಸ್ʼನ ಐಕಾನಿಕ್ ಚೇರ್ ಜೊತೆಗೆ ವಿಶೇಷ ಸೆಲ್ಫಿ ಝೋನ್ ಸೌಲಭ್ಯ ಕಲ್ಪಿಸಲಾಗಿದೆ. ಪ್ರೇಕ್ಷಕರು ʻಬಿಗ್ ಬಾಸ್ʼ ವೀಕೆಂಡ್ ಎಪಿಸೋಡ್ ಅನ್ನು ಲೈವ್ ಆಗಿ ವೀಕ್ಷಿಸುವ ಸುವರ್ಣ ಅವಕಾಶವನ್ನ ಪಡೆಯಬಹುದು.
ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.ಇದೇ ಆಗಸ್ಟ್ 16ರ ರಾತ್ರಿ 9ಕ್ಕೆ ಬಿಗ್ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ. ಈಗ ಆ ಕನಸುಗಳಿಗೆ ವೇದಿಕೆ ಸಜ್ಜಾಗ್ತಿದೆ. ಈ ಅಂತಿಮ ಪರೀಕ್ಷೆಯನ್ನು ಎದುರಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡೋರು ಯಾರು?.. ಇದೆಲ್ಲದಕ್ಕೆ ಉತ್ತರ ಆಗಸ್ಟ್ 16ರ ರಾತ್ರಿ 9ಕ್ಕೆ ಸಿಗಲಿದೆ ಎಂದು ತಿಳಿಸಿದೆ.
ಅಸಂಖ್ಯ ಜನರು ತಮ್ಮ ವಿಡಿಯೋ ಕಳುಹಿಸಿದ್ದಾರೆ. ಇವರಲ್ಲಿ ಆಯ್ಕೆಯಾದವರು ಒಂದಿಷ್ಟು ಮಂದಿ. ಅವರು ಯಾರು, ಅಗ್ನಿ ಪರೀಕ್ಷೆಯಲ್ಲಿ ಗೆದ್ದವರು ಯಾರು ಎನ್ನೋದನ್ನು ಆಗಸ್ಟ್ 16ರ ರಾತ್ರಿ 9 ಗಂಟೆಗೆ ಹೇಳುವುದಾಗಿ ಈ ಪ್ರೊಮೋದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Bigg Boss Kannada 13: ಬಿಗ್‌ಬಾಸ್ ವೀಕೆಂಡ್ ಎಪಿಸೋಡ್ ಲೈವ್ ನೋಡಬೇಕಾ? ಹಾಗಾದ್ರೆ ಹೀಗೆ ಮಾಡಿ
ಪ್ರತಿ ಸಲದಂತೆ ಈ ಬಾರಿಯೂ ಬಿಗ್ಬಾಸ್ಗೆ ಹೋಗುವ ಸ್ಪರ್ಧಿಗಳ ಬಗ್ಗೆ ಗೋಪ್ಯತೆ ಕಾಪಾಡಲಾಗಿದೆ. ಇದಾಗಲೇ ಬಹುತೇಕ ಸ್ಪರ್ಧಿಗಳಿಗೆ ಆಹ್ವಾನ ಹೋಗಿದ್ದು, ತಯಾರಿ ಕೂಡ ನಡೆಸುತ್ತಿದ್ದಾರೆ. ಆದರೆ ಅವರಿಗೆ ಈ ಬಗ್ಗೆ ಎಲ್ಲಿಯೂ ಹೇಳದಂತೆ ಷರತ್ತು ವಿಧಿಸಿರಲಾಗುತ್ತದೆ.