‘ಬಿಗ್ ಬಾಸ್ ಸೀಸನ್-13’ರ (Bigg Boss Kannada 13) ವಿಶೇಷತೆ ‘ಅಗ್ನಿಪರೀಕ್ಷೆ’ (Agniparikshe) . ಜನಸಾಮನ್ಯರಿಗೆ ಈ ಬಾರಿ ಅವಕಾಶ ಕಲ್ಪಿಸಿದೆ ‘ಬಿಗ್ ಬಾಸ್’ ತಂಡ. ಸಂಗೀತಾ ಶೃಂಗೇರಿ ಮತ್ತು ವಿನಯ್ ಗೌಡ ಈ ಬಾರಿ ಅವರೇ ತೀರ್ಪುಗಾರರ ಸ್ಥಾನದಲ್ಲಿದ್ದಾರೆ. ‘ಬಿಗ್ ಬಾಸ್’ ಮನೆ ಪ್ರವೇಶಕ್ಕೆ ಟಿಕೆಟ್ ಕೊಡ್ತಿದ್ದಾರೆ. ಈ ಹಂತದಲ್ಲಿ ಇಬ್ಬರೂ ಸೆಲೆಕ್ಟ್ ಆಗಿರುವ ಪ್ರೋಮೋ (Promo) ಹೊರಬಂದಿದೆ.
ಬಂಗಾರಪೇಟೆ ಆನೆ
ಬಿಗ್ ಬಾಸ್ ಮನೆಯ ಸ್ಟಾರ್ ಕಂಟೆಸ್ಟಂಟ್ ಆಗಿ ಕೋಲಾರ ಜಿಲ್ಲೆಯಲ್ಲಿಯ ಬಂಗಾರಪೇಟೆ ಊರಿನ 72ವರ್ಷದ ರತ್ನ ಮತ್ತು 20ವರ್ಷದ ಯುವತಿ ಕುಮಾರಿ ಎಂಬುವವರು ಆಯ್ಕೆ ಆಗಿದ್ದಾರೆ. ‘ಬಂಗಾರಪೇಟೆ ಆನೆ’ ಎಂದು ವಿನಯ್ ಗೌಡ ಅವರು ಬಿರುದು ಕೊಟ್ಟಿದ್ದಾರೆ.ಅದೇರೀತಿ ಜೆನ್ ಝೀ(Gen Z) ಕ್ಯಾಟಗರಿಯಲ್ಲಿ ಕುಮಾರಿ ಆವರು ಆಯ್ಕೆ ಆಗಿದ್ದಾರೆ. ಇವರಿಗೆ 20ವರ್ಷ ವಯಸ್ಸು ‘ಜೆನ್ ಝೀ’ ಅಂದ್ರೆ ಏನು ಅಂತ ಗೊತ್ತಿಲ್ಲದ ಮುಗ್ಧೆ. ಅದೇರೀತಿ ‘ಸ್ಟಾರ್ ಕಂಟೆಸ್ಟಂಟ್’ ಅಂತ ಬಿರುದು ಕೊಟ್ಟಿದ್ದಾರೆ. ಬ್ಯಾಡ್ಜ್ ಕೂಡ ಕೊಟ್ಟಿದ್ದಾರೆ.
ಇದನ್ನೂ ಓದಿ: Shakeela: ಅತಿಯಾದ ಮೊಬೈಲ್ ಬಳಕೆ; ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟಿ ಶಕೀಲಾ
ಪ್ರೋಮೋದಲ್ಲಿ ‘ಅಗ್ನಿಪರೀಕ್ಷೆ’ಗೆ ಬಂದ ವ್ಯಕ್ತಿಗಳಿಗೆ ನಾನಾ ಟಾಸ್ಕ್ ನೀಡಲಾಗುತ್ತಿದೆ. ಅದರಲ್ಲೂ ತೀರ್ಪುಗಾರರ ಸ್ಥಾನದಲ್ಲಿ ಕೂತಿರುವ ಮಾಜಿ ಸ್ಪರ್ಧಿಗಳು ಮತ್ತು ಕಲಾವಿದರಾಗಿರುವವರಿಗೆ ಶ್ರುತಿ ಕೃಷ್ಣ, ಸಂಗೀತಾ ಶೃಂಗೇರಿ, ಚಂದನ್ ಶೆಟ್ಟಿ ಹಾಗೂ ವಿನಯ್ ಗೌಡ ಒಡ್ಡುತ್ತಿರುವ ಪರೀಕ್ಷೆಯ ಸವಾಲುಗಳು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿವೆ.ಇನ್ನು ಅದೇ ರೀತಿ ಯುವಕನೋರ್ವ ಚಾಲೆಂಜ್ ಸ್ವೀಕರಿಸಿಸುಲು ಏನೇನೋ ಮಾತ್ನಾಡಿದ್ದಾರೆ.
“ನಾನು ಟಿಕೆಟ್ ಕೊಟ್ಟು ಪಿಕ್ಚರ್ ನೋಡುತ್ತೇನೆ, ಸೆಲಿಬ್ರಿಟಿಗಳು ಸ್ವಂತ ಫಿಲಂನ್ನೇ ನೋಡುವುದಕ್ಕೆ ಟಿಕೆಟ್ ತಗೋಳ್ಳೋದಿಲ್ಲ” ಎಂಬ ಸ್ಟೇಮೆಂಟ್ ಪಾಸ್ ಮಾಡಿದ್ದಾರೆ ಆ ಯುವಕ. ಇದರಿಂದ ಕೋಪಗೊಂಡ ಶ್ರುತಿ ಅವರು, “ಯಾವ ಸೆಲೆಬ್ರಿಟಿ, ಅವರ ಹೆಸರು ಹೇಳಿ” ಎಂದು ಗರಂ ಆಗಿದ್ದರು.
ಈ ಟಾಸ್ಕ್‌ಗಳನ್ನ ಪೂರ್ಣಗೊಳಿಸಲು ಸ್ಪರ್ಧಿಗಳು ಹರಸಾಹಸ ಪಡ್ತಿರೋದು ಪ್ರೋಮೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಒಟ್ಟಾರೆಯಾಗಿ, ಈ 60 ಮಂದಿ ಸ್ಪರ್ಧಿಗಳಲ್ಲಿ ಅಂತಿಮವಾಗಿ ʻಬಿಗ್ ಬಾಸ್ʼ ಮುಖ್ಯ ಮನೆಗೆ ಅರ್ಹತೆ ಪಡೆಯುವವರು ಯಾರು? ಅನ್ನೋದೇ ಕುತೂಹಲ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.
ಇದನ್ನೂ ಓದಿ: Bigg Boss Kannada 13: ವಿನಯ್ ಗೌಡ ಫೋಟೋಗೆ ಬೆಂಕಿ ಹಚ್ಚಿದ ಸ್ಪರ್ಧಿ! ವೇದಿಕೆಯಲ್ಲೇ ಹೈಡ್ರಾಮಾ
ಇದೇ ಆಗಸ್ಟ್ 16ರ ರಾತ್ರಿ 9ಕ್ಕೆ ಬಿಗ್ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ. ಈಗ ಆ ಕನಸುಗಳಿಗೆ ವೇದಿಕೆ ಸಜ್ಜಾಗ್ತಿದೆ. ಈ ಅಂತಿಮ ಪರೀಕ್ಷೆಯನ್ನು ಎದುರಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡೋರು ಯಾರು?.. ಇದೆಲ್ಲದಕ್ಕೆ ಉತ್ತರ ಆಗಸ್ಟ್ 16ರ ರಾತ್ರಿ 9ಕ್ಕೆ ಸಿಗಲಿದೆ ಎಂದು ತಿಳಿಸಿದೆ.