Sangeethaa Sringeri: ನೋಡಿದ ಮೊದಲ ಬಾರಿಯಲ್ಲಿ ಅವರಿಗೆ ಪ್ರೀತಿಯಾಗಿತ್ತು! ಲವ್ ಬಗ್ಗೆ ಮಾತನಾಡಿದ ಸಂಗೀತಾ ಶೃಂಗೇರಿ
Sangeethaa Sringeri: ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಮುಖ ನಟಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿವರಾದ ಈ ನಟಿ, 1996ರ ಮೇ 13ರಂದು ಜನಿಸಿದರು. 2014ರಲ್ಲಿ ಸಂಗೀತಾ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಟಾಪ್ 10 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೇ ವರ್ಲ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. 2016ರ 'ಹರ ಹರ ಮಹಾದೇವ' ಧಾರಾವಾಹಿಯ ಪಾರ್ವತಿ ಪಾತ್ರದ ಮೂಲಕ ಜನಪ್ರಿಯರಾದ ಇವರು, 777 ಚಾರ್ಲಿ (2022) ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು. ಇದೇ ಮೊದಲ ಬಾರಿಗೆ ಸಂದರ್ಶವೊಂದರಲ್ಲಿ ನಟಿ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.
ಸಂಗೀತಾ ಶೃಂಗೇರಿ -
ಸಂಗೀತಾ ಶೃಂಗೇರಿ (sangeetha sringeri) ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಮುಖ ನಟಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿವರಾದ ಈ ನಟಿ, 1996ರ ಮೇ 13ರಂದು ಜನಿಸಿದರು. 2014ರಲ್ಲಿ ಸಂಗೀತಾ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಟಾಪ್ 10 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೇ ವರ್ಲ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. 2016ರ 'ಹರ ಹರ ಮಹಾದೇವ' ಧಾರಾವಾಹಿಯ (Har Har mahadev) ಪಾರ್ವತಿ ಪಾತ್ರದ ಮೂಲಕ ಜನಪ್ರಿಯರಾದ ಇವರು, 777 ಚಾರ್ಲಿ (2022) ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು. ಇದೇ ಮೊದಲ ಬಾರಿಗೆ ಸಂದರ್ಶವೊಂದರಲ್ಲಿ ನಟಿ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Dhurandhar 2 teaser: ಧುರಂಧರ್ 2’ ಟೀಸರ್ ಔಟ್; ಅಭಿಮಾನಿಗಳಿಗೆ ತೀವ್ರ ನಿರಾಸೆ, ಕಾರಣ ಇದು
ಮೊದಲ ಬಾರಿಯಲ್ಲಿ ಅವರಿಗೆ ಪ್ರೀತಿಯಾಗಿತ್ತಂತೆ
ಸಂಗೀತಾ ಶೃಂಗೇರಿ ಮಾತನಾಡಿ, ʻನನ್ನ ಸ್ಕೂಲ್ ಸೀನಿಯರ್‌ಗೆ ನನ್ನನ್ನು ಮೊದಲ ಬಾರಿ ನೋಡಿದಾಗ ಕ್ರಶ್ ಆಗಿತ್ತಂತೆ. ನಾನು 5 th ಇದ್ದರೆ ಅವರು 9th ಇದ್ದರು. ಆ ಸಂಗತಿಗಳನ್ನು ಅವರು ಡೈರಿಯಲ್ಲಿ ಬರೆದು ಇಟ್ಟಿದ್ದರಂತೆ. ಇನ್ನು ಪಾಸ್ ಔಟ್ ಆಗುವಾಗ ಪ್ರೀತಿ ವಿಚಾರ ಹೇಳಿದ್ದರು. ಆದರೆ ನಾನು ಅದನ್ನು ಒಪ್ಪಿರಲಿಲ್ಲ. ಆಗ ಲವ್ ಅನ್ನೋದು ದೊಡ್ಡ ವಿಚಾರ ಆಗಿತ್ತು. ಆಗ ನನಗೆ ನನ್ನ ಥರ ಅಂದರೆ ರೋಲ್ ಮಾಡಲ್ ಥರ ಇರಬೇಕಿತ್ತು ಅಂತ ಆಸೆ ಇತ್ತು. ನಾನು ಯಾವುದೇ ಕ್ಷಣದಲ್ಲೂ ರಿಯಾಕ್ಟ್ ಮಾಡ್ತೀನಿ. ನಾನು ಶಾರುಖ್ ಫ್ಯಾನ್. ಆ ಥರದ ಹುಡುಗ ಇರಬೇಕಿತ್ತು ಅನ್ನೋ ಭಾವನೆ ಇತ್ತುʼ ಎಂದು ಹೇಳಿದ್ದಾರೆ.
ನನಗಾದ ಆ ಅವಮಾನವನ್ನು ನಾನು ಮರೆಯುವುದಿಲ್ಲ
ʻನಾನು ಒಂದು ಮೂವಿ ಮಾಡಬೇಕಾದರೆ, ಆದ ಘಟನೆ. ಒಳ್ಳೆ ಬಜೆಟ್ ಮೂವಿಗೆ ಒಪ್ಪಿಕೊಂಡಿದ್ದೆ. ಕಾಸ್ಟೂಮ್ ಬಂದಿತ್ತು. ಇನ್ನು ಜ್ಯುವೆಲರಿ ಎಲ್ಲಿ ಅಂತ ಕೇಳಿದ್ದೆ. ಅದನ್ನ ಪ್ರೊಡಕ್ಷನ್ ಅವರೇ ನೋಡಿಕೊಳ್ಳಬೇಕು ಅಲ್ವಾ? ಇನ್ನು ಬಂದಿಲ್ಲ ಎಂದಿದ್ದರು. ನಾನು ತುಂಬಾ ವೇಟ್ ಮಾಡ್ತಿದ್ದೆ. ನಾನು ನಂತರ ನಿರ್ಮಾಪಕರಿಗೆ ದೂರು ಕೊಟ್ಟೆ. ಅವರು ಅಲ್ಲಿ ಇರೋರಿಗೆ ಬೈದರು.
ಡ್ಯಾನ್ಸ್ ಮುಗಿತು. ಒಬ್ಬರು AD ಬಂದರು. ಅದೆಲ್ಲ ತೆಗೆದುಕೊಡಿ ಅದೆಲ್ಲ ಜ್ಯೂನಿಯರ್ ಆರ್ಟಿಸ್ಟ್‌ದು ಅಂತ ಹೇಳ್ತಾರೆ. ಅಂದೆ ಅವರು ಹೇಳಿದ್ರೆ ನಾನು ನನ್ನ ಮನೆಯಿಂದ ತರ್ತಾ ಇದ್ದೆ. ಎಲ್ಲರ ಮುಂದೆ ತೆಗೆದುಕೊಡಿ ಅಂತ ಹೇಳಿದ್ರು. ಅದು ತುಂಬಾ ಹರ್ಟ್ ಆಯ್ತು ನಂಗೆ. ಲೋ ಬಜೆಟ್ ಸಿನಿಮಾ ಮಾಡಬಾರದು ಅಂತ ಅವತ್ತೇ ನಿರ್ಧಾರ ಮಾಡಿದ್ದೇʼ ಎಂದು ಈ ವೇಳೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Dance Karnataka Dance: ಮಹಾ ಸಂಗಮದಲ್ಲಿ ಮಿಂಚಿದ ಅಮೋಘ್! ಶಿವಣ್ಣ ಕೊಟ್ಟ ಭರವಸೆ ಏನು ಗೊತ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿ ಭಾಗವಹಿಸಿ, ಎರಡನೇ ರನ್ನರ್-ಅಪ್ ಆಗಿ ಹೊರಹೊಮ್ಮಿದರು ನಟಿ. ತಮ್ಮ ಕರ್ಲಿ ಹೇರ್ ಲುಕ್ ಮತ್ತು ಫಿಟ್‌ನೆಸ್ ವರ್ಕೌಟ್ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ.