ಬಿಗ್ ಬಾಸ್ ಮನೆಗೆ (Bigg Boss Kannada 13) ಎಂಟ್ರಿ ಕೊಟ್ಟ ಸೌಂದರ್ಯಾ ಶೆಟ್ಟಿ (Soundarya Shetty) ಆರಂಭದಲ್ಲಿ ಸೈಲೆಂಟ್ ಆಗಿ ಕಾಣಿಸಿಕೊಂಡಿದ್ದರು. ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಅದರಿಂದ ಬಚಾವ್ ಆಗಲು ಎಲ್ಲ ಸ್ಪರ್ಧಿಗಳು ಕಷ್ಟಪಡುತ್ತಿದ್ದಾರೆ. ಟಾಸ್ಕ್ ನಡೆಯುವ ವೇಳೆ ಆಸಿಯಾ (Asia) ಹಾಗೂ ಸೌಂದರ್ಯಾ ಶೆಟ್ಟಿ ನಡುವೆ ಜಗಳ ಆಗಿದೆ. ಸೌಂದರ್ಯಾ ಶೆಟ್ಟಿ ಜೊತೆ ಜಗಳ ಆಡುವಾಗ ‘ಇದು ಸ್ಪ್ಲಿಟ್ಸ್‌ವಿಲ್ಲಾ ಅಲ್ಲ’ ಎಂದು ಅವರು ಖಡಕ್ ಆಗಿಯೇ ಹೇಳಿದ್ದಾರೆ.
ಟಾಸ್ಕ್ನಲ್ಲಿ ಕಾವ್ಯಾ ಅವರು ವೈಷ್ಣವಿ ಗೌಡ ಅವರನ್ನು ಹೊರಕ್ಕೆ ಇಟ್ಟರು. ಈ ರೀತಿ ಹೊರಕ್ಕೆ ಇಟ್ಟಾಗ ಸೌಂದರ್ಯಾ ಕುಹಕವಾಗಿ ನಕ್ಕರು. ಅವರು ಎಷ್ಟೇ ಗಂಭೀರವಾಗಿ ಇರೋಕೆ ಪ್ರಯತ್ನಿಸಿದರೂ ಅದು ಸಾಧ್ಯವಾಗಲೇ ಇಲ್ಲ.
ಇದನ್ನೂ ಓದಿ: Bigg Boss Kannada 12: ರಾಶಿಕಾ ಬಗ್ಗೆ ಮಾತನಾಡಿ ತಾಯಿ ಭಾವುಕ! ಅತ್ತ ಧನುಷ್‌ಗೆ ಬಿಗ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್
ಆ ಬಳಿಕ ಸೌಂದರ್ಯಾ ತೊಡೆಗೆ ಮುಖವನ್ನು ಒತ್ತಿ ಅಳೋಕೆ ಆರಂಭಿಸಿದರು. ಸೌಂದರ್ಯಾ ಪಕ್ಕದಲ್ಲಿ ಕುಳಿತವರು, ‘ನೀವು ನಿಜಕ್ಕೂ ಅಳುತ್ತಿದ್ದೀರಾ’ ಎಂದು ಕೇಳಿದರು. ಆಗ ಸೌಂದರ್ಯಾ ಏಕಾಏಕಿ ಎದ್ದು ನಿಂತು ನಗಲು ಪ್ರಾರಂಭಿಸಿದರು. ಅವರ ಈ ನಡೆ ಅನೇಕರಿಗೆ ನಗು ತರಿಸಿದೆ. ಸೌಂದರ್ಯಾ ಶೆಟ್ಟಿ ಅವರು ‘ಸ್ಪ್ಲಿಟ್ಸ್‌ವಿಲ್ಲಾ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು ಎಂಬುದು ಆಸಿಯಾಗೆ ತಿಳಿದಿದೆ. ಅದೇ ವಿಷಯವನ್ನು ಆಸಿಯಾ ಪ್ರಸ್ತಾಪಿಸಿದ್ದಾರೆ.
ಸ್ಪ್ಲಿಟ್ಸ್‌ವಿಲ್ಲಾ ಸೀಸನ್ 16’ ರಿಯಾಲಿಟಿ ಶೋನಲ್ಲಿ ಸೌಂದರ್ಯಾ ಶೆಟ್ಟಿ ಅವರು ಸ್ಪರ್ಧಿಸಿದ್ದರು. 3ನೇ ರನ್ನರ್ ಆಪ್ ಆಗಿ ಹೊರಹೊಮ್ಮಿದ್ದರು.ಪದೇ ಪದೇ ಜಗಳ ನಡೆಯುವಾಗ ಆಸಿಯಾ ಅವರು ‘ಇದು ಸ್ಪ್ಲಿಟ್ಸ್‌ವಿಲ್ಲಾ ಅಲ್ಲ, ಬಿಗ್ ಬಾಸ್’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಶೋಗೆ ಬಿಗ್ ಸಂಕಷ್ಟ, ಪ್ರತಿಭಟನೆ, ಪೊಲೀಸ್ ಅನುಮತಿಯೂ ಇಲ್ಲ
ಮಿಡ್ ವೀಕ್ ಎಲಿಮಿನೇಷನ್ನಿಂದ ಪಾರಾಗಬೇಕು ಎಂಬುದು ಎಲ್ಲರ ಗುರಿ ಆಗಿದೆ. ಆ ಟೆನ್ಷನ್ ಹೆಚ್ಚಿದ್ದರಿಂದಲೇ ಸ್ಪರ್ಧಿಗಳು ಜಗಳ ಆಡಿಕೊಳ್ಳುವ ಪರಿಸ್ಥಿತಿ ಬಂದಿದೆ.