ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss kannada 13: ಚಂದನ್ ತಂಡಕ್ಕೆ ಕಠಿಣ ಸವಾಲು; ಗೆಲುವಿಗಾಗಿ ಸ್ಪರ್ಧಿಗಳ ಕಾದಾಟ

Bigg Boss kannada 13: ಬಿಗ್ ಬಾಸ್ ಅಗ್ನಿಪರೀಕ್ಷೆ ಕೊನೆಯ ಹಂತದಲ್ಲಿದೆ. 60 ಸ್ಪರ್ಧಿಗಳಿಂದ ಆರಂಭಗೊಂಡ ಸ್ಪರ್ಧೆಯಲ್ಲಿ ಈಗ 19 ಮಂದಿ ಉಳಿದುಕೊಂಡಿದ್ದಾರೆ. ಆದರೆ ಈ 19 ಜನರಲ್ಲಿ ಮೂವರಿಗೆ ಮಾತ್ರ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶವಿದೆ. ಜ್ಯೂರಿ ಸದಸ್ಯರಾದ ಚಂದನ್ ಶೆಟ್ಟಿ, ಸಂಗೀತ ಶೃಂಗೇರಿ, ಶ್ರುತಿ ಹಾಗೂ ವಿನಯ್ ಗೌಡ ತಂಡಗಳ ನಡುವೆ ನಡೆದಿರುವ ಬಲೂನ್ ಟಾಸ್ಕ್ ಸ್ಪರ್ಧಿಗಳ ನಡುವೆ ಭಾರಿ ಕುತೂಹಲ ಮತ್ತು ಪೈಪೋಟಿಗೆ ಕಾರಣವಾಗಿದೆ.

ಬಿಗ್‌ ಬಾಸ್‌ ಕನ್ನಡ

ಇದೀಗ ಬಿಗ್ ಬಾಸ್ ಅಗ್ನಿಪರೀಕ್ಷೆ (Bigg Boss Agniparikshe) ಕೊನೆಯ ಹಂತದಲ್ಲಿದೆ. 60 ಸ್ಪರ್ಧಿಗಳಿಂದ ಆರಂಭಗೊಂಡ ಸ್ಪರ್ಧೆಯಲ್ಲಿ ಈಗ 19 ಮಂದಿ ಉಳಿದುಕೊಂಡಿದ್ದಾರೆ. ಆದರೆ ಈ 19 ಜನರಲ್ಲಿ ಮೂವರಿಗೆ ಮಾತ್ರ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶವಿದೆ. ಜ್ಯೂರಿ ಸದಸ್ಯರಾದ ಚಂದನ್ ಶೆಟ್ಟಿ, ಸಂಗೀತ ಶೃಂಗೇರಿ, ಶ್ರುತಿ ಹಾಗೂ ವಿನಯ್ ಗೌಡ (Vinay Gowda) ತಂಡಗಳ ನಡುವೆ ನಡೆದಿರುವ ಬಲೂನ್ ಟಾಸ್ಕ್ ಸ್ಪರ್ಧಿಗಳ ನಡುವೆ ಭಾರಿ ಕುತೂಹಲ ಮತ್ತು ಪೈಪೋಟಿಗೆ ಕಾರಣವಾಗಿದೆ.

ಸದ್ಯ ಅಗ್ನಿ ಪರೀಕ್ಷೆಯ ಟ್ವಿಸ್ಟ್ ಏನೆಂದರೆ ಜನಸಾಮಾನ್ಯರನ್ನು ಆಯ್ಕೆ ಮಾಡುವ ಸಂಪೂರ್ಣ ಜವಬ್ದಾರಿಯನ್ನು ವೀಕ್ಷಕರಿಗೆ ನೀಡಲಾಗಿದೆ.

ಇದನ್ನೂ ಓದಿ: Rashmika Mandanna: ಸರ್ಜರಿ ನಂತರ ಮೊದಲ ಬಾರಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ! ನಟಿಯ ಗ್ರ್ಯಾಂಡ್‌ ಎಂಟ್ರಿ ಹೀಗಿತ್ತು

ಹಲವಾರು ರೀತಿಯಲ್ಲಿ ಟಾಸ್ಕ್‌

ಈ ಅಗ್ನಿಪರೀಕ್ಷೆಯಲ್ಲಿ ಭಾಗಿಯಾಗಿದ್ದ 60 ಜನರಿಗೆ ಹಲವಾರು ರೀತಿಯಲ್ಲಿ ಟಾಸ್ಕ್‌ ನೀಡಲಾಗಿದೆ ಇದನ್ನೆಲ್ಲಾ ವೀಕ್ಷಕರು ಕೂಡ ಗಮನಿಸುತ್ತಿದ್ದಾರೆ. ಇದೀಗ ಯಾರನ್ನು ಬಿಗ್ ಬಾಸ್ ಮನೆಗೆ ಕಳುಹಿಸಬೇಕು, ಯಾರಿಗೆ ಗೇಟ್ ಪಾಸ್ ನೀಡಬೇಕು ಎಂಬುವುದನ್ನು ವೀಕ್ಷಕರು ನಿರ್ಧರಿಸಲಿದ್ದಾರೆ.

ಹೊಸ ಪ್ರೋಮೋ ಔಟ್‌!

ಲೀಡರ್‌ಬೋರ್ಡ್‌ನಲ್ಲಿ ಸಂಗೀತ ಮತ್ತು ಶ್ರುತಿ ತಂಡಗಳು ತಲಾ 200 ಅಂಕಗಳೊಂದಿಗೆ ಮುನ್ನಡೆಯಲ್ಲಿದ್ದರೆ, ವಿನಯ್ ಪಡೆ 100 ಅಂಕ ಗಳಿಸಿದೆ. ಆದರೆ, ಚಂದನ್ ಶೆಟ್ಟಿ ಅವರ ತಂಡ 0 ಅಂಕಗಳೊಂದಿಗೆ ಹಿನ್ನಡೆ ಅನುಭವಿಸಿತ್ತು.



ಸ್ಪರ್ಧಿಗಳು ಕಾಲುಗಳ ನಡುವೆ ಬಲೂನ್ ಇಟ್ಟುಕೊಂಡು, ಬ್ಯಾಲೆನ್ಸ್ ತಪ್ಪದಂತೆ ನಿಗದಿತ ಬಾಸ್ಕೆಟ್‌ಗೆ ಹಾಕಬೇಕಿತ್ತು ಇದರಲ್ಲಿ ಗೆಲ್ಲೋದು ಯಾರು ಎಂಬ ಕುತೂಹಲ ಮೂಡಿದೆ.

ಈಗಾಗಲೇ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೋಟಿಂಗ್ ಆರಂಭವಾಗಿದೆ. ಇಲ್ಲಿ ಒಬ್ಬರಿಗೆ ಒಂದು ಮತ ಹಾಕುವ ಅವಕಾಶ ನೀಡಲಾಗಿದೆ. ವೀಕ್ಷಕರಿಂದ ಅತಿ ಹೆಚ್ಚು ಮತಗಳನ್ನು ಗಳಿಸುವ 3 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಇದೇ ಸೆಪ್ಟೆಂಬರ್ 6 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 13 ಅಧಿಕೃತವಾಗಿ ಆರಂಭವಾಗಲಿದೆ ಎಂದು ಖುದ್ದು ಕಿಚ್ಚ ಸುದೀಪ್ ಅವರು ತಿಳಿಸಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಇದನ್ನೂ ಓದಿ: Bigg Boss Kannada 13: ಬಿಗ್‌ ಬಾಸ್‌ ವೋಟಿಂಗ್ ಪ್ರಕ್ರಿಯೆ ಆರಂಭ! ಮತ್ತೆ ಸ್ಪರ್ಧಿ ಮೇಲೆ ವಿನಯ್‌ ಗರಂ

ಇದರೊಂದಿಗೆ, ದೊಡ್ಮನೆಯ ಹೊಸ ಆಟವನ್ನು ಕಣ್ಣುಂಬಿಕೊಳ್ಳಲು ಇಡೀ ಕರ್ನಾಟಕವೇ ಕಾಯುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 13 ಸೆಪ್ಟೆಂಬರ್ 6 ರಂದು ಅದ್ಧೂರಿಯಾಗಿ ಚಾಲನೆ ಪಡೆಯಲಿದೆ ಎಂದು ಸುದೀಪ್ ತಿಳಿಸಿದ್ದಾರೆ.

Yashaswi Devadiga

View all posts by this author