Rashmika Mandanna: ಸರ್ಜರಿ ನಂತರ ಮೊದಲ ಬಾರಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ! ನಟಿಯ ಗ್ರ್ಯಾಂಡ್ ಎಂಟ್ರಿ ಹೀಗಿತ್ತು
Rashmika: 'ಮೈಸಾ' ಚಿತ್ರೀಕರಣದ ವೇಳೆ ಸೊಂಟದ ಗಾಯದಿಂದ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡಿದ್ದರು. ಆಗಸ್ಟ್‌ನಲ್ಲಿ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದರು. ಇದೀಗ ನಟಿ ಸಿರ್ಗಪೂರ್ ನಿರಂಜನ್ ರೆಡ್ಡಿ ಅವರ ಮಗನ ನಿಶ್ಚಿತಾರ್ಥದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅವರ ಪತಿ, ನಟ ವಿಜಯ್ ದೇವರಕೊಂಡ ಅವರು ಅವರ ಪಕ್ಕದಲ್ಲಿದ್ದರು.
ರಶ್ಮಿಕಾ ಮಂದಣ್ಣ -
'ಮೈಸಾ' ಚಿತ್ರೀಕರಣದ ವೇಳೆ ಸೊಂಟದ ಗಾಯದಿಂದ ನಟಿ ರಶ್ಮಿಕಾ ಮಂದಣ್ಣ (Rashmika Mandanna ) ಇತ್ತೀಚೆಗೆ ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡಿದ್ದರು. ಆಗಸ್ಟ್‌ನಲ್ಲಿ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದರು. ಇದೀಗ ನಟಿ ಸಿರ್ಗಪೂರ್ ನಿರಂಜನ್ ರೆಡ್ಡಿ ಅವರ ಮಗನ ನಿಶ್ಚಿತಾರ್ಥದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅವರ ಪತಿ, ನಟ ವಿಜಯ್ ದೇವರಕೊಂಡ ಅವರು ಅವರ ಪಕ್ಕದಲ್ಲಿದ್ದರು.
ಮುಂಬರುವ ‘ಮೈಸಾ’ ಸಿನಿಮಾದ ಶೂಟಿಂಗ್ ವೇಳೆ ರಶ್ಮಿಕಾ ಹಿಪ್‌ಗೆ ಗಾಯ ಮಾಡಿಕೊಂಡಿದ್ದರು. ಆ ಬಳಿಕ ಚಿಕಿತ್ಸೆ ಹಾಗೂ ವಿಶ್ರಾಂತಿಗಾಗಿ ಕೆಲಸದಿಂದ ಬ್ರೇಕ್ ಪಡೆದಿದ್ದ ಅವರು, ಇದೀಗ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ; Mahakali Glimpse: ಶುಕ್ರಾಚಾರ್ಯರ ಪಾತ್ರದಲ್ಲಿ ಅಕ್ಷಯ್ ಖನ್ನಾ; ‘ಮಹಾಕಾಳಿ’ ಗ್ಲಿಂಪ್ಸ್ ಔಟ್
ಎಂಗೇಜ್‌ಮೆಂಟ್ ಸಮಾರಂಭಕ್ಕೆ ರಶ್ಮಿಕಾ
ಹೈದರಾಬಾದ್‌ನಲ್ಲಿ ನಡೆದ ಸಾಹಿಲ್ ರೆಡ್ಡಿ ಅವರ ಎಂಗೇಜ್‌ಮೆಂಟ್ ಸಮಾರಂಭಕ್ಕೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಆಗಮಿಸಿದರು. ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶಿಸುವ ವೇಳೆ ಇಬ್ಬರೂ ಕೈಹಿಡಿದುಕೊಂಡು ಬಂದಿದ್ದು, ಅಲ್ಲಿದ್ದವರ ಗಮನ ಸೆಳೆಯಿತು. ರಶ್ಮಿಕಾ ಕಪ್ಪು ಮತ್ತು ಗೋಲ್ಡ್ ಕಾಂಬಿನೇಷನ್‌ನ ಲೆಹೆಂಗಾ ಧರಿಸಿ ಸಾಂಪ್ರದಾಯಿಕ ಹಾಗೂ ಎಲಿಗಂಟ್ ಲುಕ್‌ನಲ್ಲಿ ಮಿಂಚಿದ್ದಾರೆ. ಇನ್ನು ವಿಜಯ್ ದೇವರಕೊಂಡ ಸಂಪೂರ್ಣ ಕಪ್ಪು ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗಾಯದ ಬಳಿಕ ರಶ್ಮಿಕಾ ಅವರ ಮೊದಲ ಸಾರ್ವಜನಿಕ appearance ಆಗಿರುವುದರಿಂದ, ಕಾರ್ಯಕ್ರಮದ ಫೋಟೋಗಳು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಇದಕ್ಕೂ ಮುಂಚೆ ಪೋಸ್ಟ್‌ನಲ್ಲಿ ನಟಿ, "ಹಾಯ್ ಗಾಯ್ಸ್! ಗಾಯಗಳಾಗಿವೆ. ಮತ್ತು ಯಾರಿಗೂ ತಿಳಿಯುವುದಿಲ್ಲ ಎಂದು ನಾನು ನಿಜವಾಗಿಯೂ ಆಶಿಸಿದ್ದೆ. ಆದ್ರೆ.. ಕ್ಷಮಿಸಿ. ಸ್ವಲ್ಪ ಸಮಯದ ಹಿಂದೆ ಸಂಭವಿಸಿತ್ತು. ಹೌದು, ಇದು ನನ್ನ ಸತತ ಮೂರನೇ ಗಾಯ. ಖಂಡಿತವಾಗಿಯೂ ನನ್ನ ದೇಹವನ್ನು ಯಂತ್ರದಂತೆ ಅಲ್ಲ, ಮಾನವ ದೇಹದಂತೆ ನೋಡಿಕೊಳ್ಳಲು ಕಲಿಯಬೇಕು'' ಎಂದು ತಿಳಿಸಿದ್ದರು.
''ಗಾಯಗಳ ಬಗ್ಗೆ ಹೇಳೋದಾದ್ರೆ, ಸೊಂಟದ ಪ್ರತಿ ಬದಿಯಲ್ಲಿ 4 ಸ್ನಾಯುರಜ್ಜುಗಳಿವೆ. ಅದು ನಿಮ್ಮ ಸೊಂಟವನ್ನು ನಿಮ್ಮ ಕಾಲಿಗೆ ಸಂಪರ್ಕಿಸುತ್ತದೆ. ನನ್ನ ಬಲ ಸೊಂಟದ ಮೇಲಿನ ಆ ಸ್ನಾಯುರಜ್ಜುಗಳಲ್ಲಿ ಒಂದು ಬೇರ್ಪಟ್ಟಿದೆ ಮತ್ತು ಅದನ್ನು ಜೋಡಿಸಬೇಕಾಗಿದೆ. ಮೈಸಾ ನೃತ್ಯ ಚಿತ್ರೀಕರಣದ ಸಮಯದಲ್ಲಿ ಈ ಗಾಯವಾಗಿತ್ತು. ಮೈಸಾ ನಾನು ಮಾಡಿದ ಅತ್ಯಂತ ಅಗ್ರೆಸಿವ್ ಫಿಲ್ಮ್" ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: Alpha OTT release: ಆಲಿಯಾ ಭಟ್ 'ಆಲ್ಫಾ' ಮೂವಿ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್!
ಶ್ಮಿಕಾ ಮಂದಣ್ಣ ಮೈಸಾ, ರಣಬಾಲಿ, ಪುಷ್ಪ 3, ಅನಿಮಲ್ ಪಾರ್ಕ್ ಸೇರಿದಂತೆ ಹಲವು ಪ್ರಾಜೆಕ್ಟ್ಗಳನ್ನು ಹೊಂದಿದ್ದಾರೆ.