ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ (Bigg Boss Kannada 13) ಗಾನವಿ ಗೌಡ ಮತ್ತು ಯಶಸ್ ಕೃಷ್ಣ (Yashas Krishna) ನಡುವಿನ ಡಬಲ್ ಮೀನಿಂಗ್ ಮಾತುಕತೆಯ ವಿಡಿಯೋ ವೈರಲ್ ಆಗುತ್ತಿದೆ. ಯಶಸ್ ಕೃಷ್ಣ ಆಟದ ಬದಲು ಫ್ಲರ್ಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಎನ್ನುವ ಆರೋಪಗಳು ಎದುರಾಗಿವೆ.ಮನೆಗೆ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ (Ganavi) ಜೊತೆಗೂ ಅಡಲ್ಟ್ ಟಾಕ್ ಮಾದರಿಯ ಸಂಭಾಷಣೆ ನಡೆಸಿರುವುದು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.
ಯಶಸ್ ಅವರ ಈ ರೀತಿಯ ನಡವಳಿಕೆ ಬಿಗ್ ಬಾಸ್ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಕಿರಿಕಿರಿ ಉಂಟುಮಾಡಿದೆ. ಇದೇ ರೀತಿ ಅವರು ತಮ್ಮ ಆಟದ ಶೈಲಿಯನ್ನು ಮುಂದುವರಿಸಿದರೆ ಮುಂಬರುವ ವಾರಗಳಲ್ಲಿ ಮನೆಯಿಂದ ಹೊರಬೀಳುವುದು ಪಕ್ಕಾ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಗಾನವಿ ಗೌಡ ಮನೆಯೊಳಗೆ ಬರುತ್ತಿದ್ದಂತೆ ಎಲ್ಲರೊಂದಿಗೆ ಸಮಯ ಕಳೆಯುವ ಮೂಲಕ ಸಹಸ್ಪರ್ಧಿಗಳಿಗೆ ಹತ್ತಿರವಾಗುತ್ತಿದ್ದಾರೆ. ಬಾತ್‌ರೂಮ್ ಏರಿಯಾದಲ್ಲಿ ಯಶಸ್ ಜೊತೆ ಮಾತನಾಡುವಾಗ ಗಾನವಿ ಗೌಡ, ತಾವು ಆಟದಲ್ಲಿ ಎಷ್ಟು ಫಿಟ್ ಎಂಬುದರ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಯಶಸ್, ಈ ಎಲ್ಲಾ ಮಾತುಗಳಿಗೆ ಮತ್ತೊಂದು ಅರ್ಥ ಕಲ್ಪಿಸಿದರು. ಈ ವಿಷಯ ತಿಳಿಯುತ್ತಲೇ ಗಾನವಿ ಗೌಡ, ಅಲ್ಲಿಂದ ನಗುತ್ತಾ ತೆರಳುತ್ತಾರೆ.
ಇದನ್ನೂ ಓದಿ: Bigg Boss Kannada 13: ʻಕಳಪೆʼ ಪಟ್ಟ ಹೊತ್ತ ಗಾನವಿ! Hijacker ವಿರುದ್ದ ಒಂದಾಯ್ತಾ ಇಡೀ ಮನೆ?
ಇನ್ನೊಂದು ಕಡೆ ನಟ ತಾಂಡವ್ ರಾಮ್ ಅವರ ರೀ-ಎಂಟ್ರಿ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಸಂಚಲನ ಮೂಡಿದೆ. ಮೂರನೇ ವಾರ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದ ತಾಂಡವ್, ಇದೀಗ ನೇರವಾಗಿ ಕ್ಯಾಪ್ಟನ್ ಆಗಿ ಕಮ್‌ಬ್ಯಾಕ್ ಮಾಡಿದ್ದಾರೆ. ತಮ್ಮಿಂದ ಇನ್ಮುಂದೆ ಒಳ್ಳೆತನ ನಿರೀಕ್ಷಿಸಬೇಡಿ ಎಂದು ಎಚ್ಚರಿಸಿರುವ ಅವರು, ತಾಯಾಣೆ ನ್ಯಾಯ ಒದಗಿಸುವುದಾಗಿ ಘರ್ಜಿಸಿದ್ದಾರೆ.
ಇದನ್ನೂ ಓದಿ: Amitabh Bachchan: ‘ಕೆಬಿಸಿ 18’ ಶೂಟಿಂಗ್ ವೇಳೆ ಅಮಿತಾಭ್ ಬಚ್ಚನ್ ಕಾಲಿಗೆ ಗಾಯ
ವಾಸ್ತವವಾಗಿ, ಈ ವಾರ ಮಂಜ ಹಾಗೂ ಲಿಖಿತ್ ಮಾಡಿದ ಎಡವಟ್ಟಿನಿಂದಾಗಿ ಕ್ಯಾಪ್ಟನ್ಸಿ ಓಟವೇ ರದ್ದಾಗಿತ್ತು. ಆದರೆ ಬಿಗ್ ಬಾಸ್, ವಾಪಸ್ ಬಂದ ತಾಂಡವ್‌ಗೆ ಪ್ರಮೋಷನ್ ನೀಡಿ ಮನೆಯ ಹೊಸ ಕ್ಯಾಪ್ಟನ್ ಆಗಿ ಘೋಷಿಸಿದ್ದಾರೆ.