ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss kannada 13: ಬಿಗ್‌ಬಾಸ್ ಮನೆಯಲ್ಲಿ ದರ್ಶನ್ ಹಾಡು ಯಾಕೆ ಹಾಕಲ್ಲ? ಸುದೀಪ್‌ ಖಡಕ್‌ ರಿಪ್ಲೈ

Bigg Boss kannada 13:ಬಿಗ್​​ಬಾಸ್ ಕನ್ನಡ ಸೀಸನ್ 13 (Bigg Boss Kannada) ಶುರುವಾಲು ವಾರವಷ್ಟೆ ಬಾಕಿ ಇದೆ. ಕಿಚ್ಚ ಸುದೀಪ್ ಮತ್ತು ಆಯೋಜಕರು ಸುದ್ದಿಗೋಷ್ಠಿ ನಡೆಸಿದ್ದು, ಈ ಸೀಸನ್​​ನ ವಿಶೇಷತೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ದರ್ಶನ್‌ ಕುರಿತಾಗಿ ಒಂದು ಪ್ರಶ್ನೆ ಬಂದಿದೆ. ಸುದೀಪ್‌ ಕೂಡ ಖಡಕ್‌ ಉತ್ತರ ನೀಡಿದ್ದಾರೆ.

ಸುದೀಪ್‌ ದರ್ಶನ್‌

ಬಿಗ್​​ಬಾಸ್ ಕನ್ನಡ ಸೀಸನ್ 13 (Bigg Boss Kannada) ಶುರುವಾಲು ವಾರವಷ್ಟೆ ಬಾಕಿ ಇದೆ. ಕಿಚ್ಚ ಸುದೀಪ್ ಮತ್ತು ಆಯೋಜಕರು ಸುದ್ದಿಗೋಷ್ಠಿ ನಡೆಸಿದ್ದು, ಈ ಸೀಸನ್​​ನ ವಿಶೇಷತೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ದರ್ಶನ್‌ (Darshan) ಕುರಿತಾಗಿ ಒಂದು ಪ್ರಶ್ನೆ ಬಂದಿದೆ. ಸುದೀಪ್‌ ಕೂಡ ಖಡಕ್‌ ಉತ್ತರ ನೀಡಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಆಗಾಗ್ಗೆ ಕನ್ನಡ ಸಿನಿಮಾಗಳು ಹಾಡುಗಳು ಪ್ಲೇ ಆಗುತ್ತದೆ. ಗ್ರ್ಯಾಂಡ್ ಪ್ರೀಮಿಯರ್‌ ವೇಳೆ ಸ್ಪರ್ಧಿಗಳು ವೇದಿಕೆ ಏರಿದಾಗ ವಿವಿಧ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ.ಬೆಳಗ್ಗೆ ಸ್ಪರ್ಧಿಗಳು ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳು ಹಾಡುಗಳನ್ನು ಹಾಕಲಾಗುತ್ತದೆ.

ಇದನ್ನೂ ಓದಿ: Toxic box office collection: ‘ಟಾಕ್ಸಿಕ್’ ಸಿನಿಮಾದ ಕಲೆಕ್ಷನ್ ಏನು?

ಬೆಳಗ್ಗೆ ಸಾಂಗ್‌ಗೆ ಸ್ಪರ್ಧಿಗಳೆಲ್ಲಾ ಡ್ಯಾನ್ಸ್ ಮಾಡುವುದರೊಂದಿದೆ ದಿನ ಶುರುವಾಗುತ್ತದೆ. ಸುದೀಪ್ ಸೇರಿದಂತೆ ಎಲ್ಲಾ ನಟರ ಸಿನಿಮಾ ಹಾಡುಗಳು ಬಿಗ್‌ಬಾಸ್ ಮನೆಯಲ್ಲಿ ಪ್ಲೇ ಆಗುತ್ತದೆ. ಆದರೆ ಕೆಲ ವರ್ಷಗಳಿಂದ ನಟ ದರ್ಶನ್ ಅಭಿನಯದ ಸಿನಿಮಾ ಹಾಡುಗಳನ್ನು ಹಾಕುತ್ತಿಲ್ಲ.

ದರ್ಶನ್- ಸುದೀಪ್ ಆತ್ಮೀಯ ಸ್ನೇಹಿತರಾಗಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರ ಸ್ನೇಹ ಮುರಿದುಬಿತ್ತು. ಆ ಬಳಿಕ ಬಿಗ್‌ಬಾಸ್ ಮನೆಯೊಳಗೆ ದರ್ಶನ್ ಹಾಡುಗಳಿಗೆ ನಿರ್ಬಂಧ ಹೇರಿದಂತೆ ಆಗಿತ್ತು. ಈ ಬಗ್ಗೆ ಸುದೀಪ್‌ಗೆ ಪ್ರಶ್ನೆ ಎದುರಾಗಿದೆ. ಪತ್ರಕರ್ತರೊಬ್ಬರು ದರ್ಶನ್‌ ಸಾಂಗ್‌ ಏಕೆ ಪ್ಲೇ ಮಾಡಲ್ಲ? ಕಾಪಿ ರೈಟ್‌ ಸಮಸ್ಯೆ ಆಗತ್ತೆ ಅಂತ ಕೆಲವು ಅಲ್ಲಿ ಇದ್ದ ಸ್ಪರ್ಧಿಗಳು ಹೇಳಿಕೊಂಡಿದ್ದರು. ಈ ಬಗ್ಗೆ ಏನು ಹೇಳ್ತೀರಾ ಅಂತ ಕೇಳಿದ್ದಾರೆ.

ಹಾಕಬಾರದು ಅಂತಿದ್ರೆ ಬೇರೆ ಕಾರಣ ಇರಬಹುದು

ಅದಕ್ಕೆ ಸುದೀಪ್‌ ಪ್ರಕ್ರಿಯಿಸಿ ʻʻಪ್ರತಿಯೊಬ್ಬರ ಮೇಲೆ ಪ್ರೀತಿ ಇದೆ. ದ್ವೇಷ ಇಲ್ಲ. ಹಾಕಬಾರದು ಅಂತಿದ್ರೆ ಬೇರೆ ಕಾರಣ ಇರಬಹುದು. ಈ ಪ್ರಶ್ನೆ ಕೇಳೋದು ಬಿಡಿ. ಯಾರೂ ತುಳಿಯೋಕು ಯಾರ ನನ್ನ ಮಗನ ಕೈಯಲ್ಲಿ ಆಗಲ್ಲ. ಎಷ್ಟೋ ಕಲಾವಿದರ ಸಾಂಗ್‌ ಹಾಕ್ತಾರೆ. ಮಾತಾಡೋಕೆ ಹೋದ್ರೆ ಅದು ಏಲ್ಲೋ ಹೋಗತ್ತೆ. ಪ್ರತಿಯೊಬ್ಬರ ಮೇಲೂ ಗೌರವ ಇದೆʼʼ ಎಂದಿದ್ದಾರೆ.

ಹಾಗೆಯೇ ಯಾವುದಾದರೂ ಹಾಡು ಪ್ಲೇ ಮಾಡಿದರೆ ಅದರ ಬಗ್ಗೆ ಪ್ರಶ್ನೆ ಮಾಡುವವರು ಅಥವಾ ವಿರೋಧ ವ್ಯಕ್ತಪಡಿಸುವವರು ಇರಬಹುದು ಎಂದು ಹೇಳಿದ್ದಾರೆ. 'ಬೆದರಿಕೆನೂ ಇರಬಹುದು ಅಲ್ವಾ.. ಈ ಸಾಂಗ್ ಯಾಕೆ ಪ್ಲೇ ಮಾಡ್ತೀರಾ ಅನ್ನೋರು ಇದ್ದಾರೆ ಎಂದು ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: kiccha sudeep: ತಾಯಿಯ ಸ್ಮರಣಾರ್ಥ ಸಂಕಷ್ಟದಲ್ಲಿದ್ದ 4 ಕುಟುಂಬಗಳಿಗೆ ಬೆಳಕಾದ ಕಿಚ್ಚ ಸುದೀಪ್

ಈ ಬಾರಿಯ ಸೀಸನ್ ಭಿನ್ನವಾಗಿರಲಿದೆ ಎಂದು ಈಗಾಗಲೇ ಬಿಡುಗಡೆ ಆಗಿರುವ ಕೆಲ ಪ್ರೋಮೊಗಳಲ್ಲಿ ಹೇಳಲಾಗಿದೆ ಇನ್ನೂ ಹಲವಾರು ಪ್ರಶ್ನೆಗಳಿಗೆ ಸುದೀಪ್ ಮತ್ತು ಬಿಗ್​​ಬಾಸ್ ಆಯೋಜಕರು ಉತ್ತರ ನೀಡಲಿದ್ದಾರೆ.

Yashaswi Devadiga

View all posts by this author