ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss kannada 13: ನೀವು ಯಾವಾಗಲೂ ಗಗನ್ ಪಕ್ಕ ಇರೋ ತಾಂಡವ್‌! ಗಾನವಿ ಕೌಂಟರ್​​

Bigg Boss kannada 13: ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ದೊಡ್ಮನೆಯಲ್ಲಿ ನಡೆದಿರುವ ಘಟನೆಗಳು ವೀಕ್ಷಕರನ್ನ ತೀವ್ರ ಆಕ್ರೋಶಕ್ಕೆ ಈಡುಮಾಡಿವೆ. ಸ್ಪರ್ಧಿ ಮಂಜು ಅವರ ಅತಿಯಾದ ಕೋಪ, ಯಶಸ್‌ಗೆ ಅಸಭ್ಯ ಭಾಷೆಯ ಬಳಕೆ ಇವೆಲ್ಲವೂ ವೀಕ್ಷರಿಗೆ ಬೇಸರ ತರಿಸಿದೆ. ಅದರ ನಡುವೆ ಈಗ ತಾಂಡವ್‌ ಬಗ್ಗೆಯೂ ಅಸಮಾಧನ ವ್ಯಕ್ತವಾಗುತ್ತಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg boss Kannada 13) ಈ ವಾರ ದೊಡ್ಮನೆಯಲ್ಲಿ ನಡೆದಿರುವ ಘಟನೆಗಳು ವೀಕ್ಷಕರನ್ನ ತೀವ್ರ ಆಕ್ರೋಶಕ್ಕೆ ಈಡುಮಾಡಿವೆ. ಸ್ಪರ್ಧಿ ಮಂಜು (Mahakavi Manja) ಅವರ ಅತಿಯಾದ ಕೋಪ, ಯಶಸ್‌ಗೆ ಅಸಭ್ಯ ಭಾಷೆಯ ಬಳಕೆ ಇವೆಲ್ಲವೂ ವೀಕ್ಷರಿಗೆ ಬೇಸರ ತರಿಸಿದೆ. ಅದರ ನಡುವೆ ಈಗ ತಾಂಡವ್‌ (Thandav) ಬಗ್ಗೆಯೂ ಅಸಮಾಧನ ವ್ಯಕ್ತವಾಗುತ್ತಿದೆ.

ಯಾವುದೇ ಅಭ್ಯರ್ಥಿ ಕ್ಯಾಪ್ಟನ್‌ ಆಗಲು ಯೋಗ್ಯರಲ್ಲದವರನ್ನು ಹೊರಗೆ ಹಾಕಬೇಕಿತ್ತು, ಆಗ ತಾಂಡವ್‌ ಆಯ್ಕೆ ಸ್ಪರ್ಧಿಗಳಿಗೆ ಅಚ್ಚರಿ ತಂದಿದೆ. ಕ್ಯಾಪ್ಟನ್ಸಿ ಓಟಕ್ಕೆ ಗಾನವಿ ಅರ್ಹರಲ್ಲ. ಎಂದರು ತಾಂಡವ್. ಆಗ ಗಾನವಿ, ‘ನೀವು ಯಾವಾಗಲೂ ಗಗನ್ ಪಕ್ಕ ಇರೋ ತಾಂಡವ್ ಎಂದೆ ಗುರುತಿಸಿಕೊಳ್ಳುತ್ತೀರಿ. ನೀವು ಏನೂ ಆಡುತ್ತಿಲ್ಲ ಎಂದು ಹೊರಕ್ಕೆ ಕಳುಹಿಸಿ ಮತ್ತೆ ಕರೆತರಲಾಯಿತು. ಆದರೂ, ನೀವು ಬದಲಾಗಿಲ್ಲ’ ಎಂದು ಗಾನವಿ ಅವರು ತಾಂಡವ್ ರಾಮ್​ಗೆ ಹೇಳಿದರು.

ಇದನ್ನೂ ಓದಿ: kannada serial: ಜನಮೆಚ್ಚಿದ ಜೋಡಿಯ ಈ ಸೀರಿಯಲ್ ಅಂತ್ಯ!



ಒಟ್ಟಾರೆಯಾಗಿ ಮನೆಯಲ್ಲಿ ಗ್ರೂಪ್‌ಗಳು ಶುರು ಆಗಿವೆ. ಇನ್ನೊಂದು ಕಡೆ ಗಗನ್‌ಗೂ ಗಾನವಿ ಕಂಡರೆ ಅಷ್ಟಕಷ್ಟೇ ಆಗಿದೆ. ಟಾಸ್ಕ್ ವೇಳೆ ಗಾನವಿ ಗೌಡ ಬಳಸಿದ 'ಕುನ್ನಿ' ಎಂಬ ಪದದಿಂದ ಗಗನ್ ಚಿನ್ನಪ್ಪ ತೀವ್ರವಾಗಿ ನೊಂದಿದ್ದಾರೆ. ಶೋ ಬಿಡಲು ಸಿದ್ಧವೆಂದು ತಾಂಡವ್ ರಾಮ್ ಬಳಿ ಹೇಳಿಕೊಂಡಿದ್ದು, ವೀಕ್ಷಕರಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: Bigg Boss Kannada 13: ಈ ವಾರ ಮಹಾಕವಿ ಮಂಜ ಎಲಿಮಿನೇಟ್‌? ವೀಕ್ಷಕರಿಗೆ ಭಾರೀ ಅಸಮಾಧಾನ

ಟಾಸ್ಕ್ ಮುಗಿದ ಬಳಿಕ ತೀವ್ರ ಭಾವುಕರಾದ ಗಗನ್, ತಮ್ಮ ಆಪ್ತ ಸ್ನೇಹಿತ ತಾಂಡವ್ ರಾಮ್ ಜೊತೆಗಗನ್ ಮನಸ್ಸಿಗೆ ಆ ಕುನ್ನಿ ಪದ ತುಂಬಾ ಹರ್ಟ್ ಆಗಿದೆ. ನನ್ನ ಸೆಲ್ಫ್ ರೆಸ್ಪೆಕ್ಟ್ ಹಾಳಾಗುತ್ತಿದೆ. ಈ ರೀತಿ ಅಸಹ್ಯವಾಗಿ ಆಟ ಆಡಲು ನನಗೆ ಸಾಧ್ಯವಿಲ್ಲ. ಬೇಕಿದ್ದರೆ ನಾನು ಈ ಶೋ ಬಿಟ್ಟು ಹೊರಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Yashaswi Devadiga

View all posts by this author