Kavya Shastry: ಕಾಶಿಯಲ್ಲಿ ಭಿಕ್ಷೆ ಬೇಡಿ ಊಟ ಮಾಡಿದ ಕನ್ನಡದ ಖ್ಯಾತ ಬಿಗ್ ಬಾಸ್ ಸ್ಪರ್ಧಿ: ಏನಾಯಿತು?
ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರೋ ಕಾಶಿ ವಿಶ್ವನಾಥನ ಸನ್ನಿಧಿಗೆ ನಟಿ ಕಾವ್ಯಾ ಶಾಸ್ತ್ರಿ ಅವರು ಭೇಟಿ ಕೊಟ್ಟಿದ್ದಾರೆ. ನಿನ್ನ ಸನ್ನಿಧಾನದಲ್ಲಿ ಭಿಕ್ಷೆ ಬೇಡಿ ಊಟ ಮಾಡುತ್ತೇನೆ ಅಂತ ಹರಕೆ ಹೊತ್ತಿಕೊಂಡಿದ್ದರು. ಇದೀಗ ಆ ಹರಕೆಯನ್ನು ನಟಿ ತಿರಿಸಿದ್ದಾರೆ.

Kavya Shastry

ಇತ್ತೀಚೆಗಷ್ಟೆ ಸ್ಯಾಂಡಲ್ವುಡ್ ನಟಿ ಕಾರುಣ್ಯ ರಾಮ್ ಅವರು ದೇವಸ್ತಾನದಲ್ಲಿ ಭಕ್ತರು ಊಟ ಮಾಡಿದ ತಟ್ಟೆಯನ್ನು ಎತ್ತುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಇವರು ಕಾಶಿಯಲ್ಲಿ ಪುಣ್ಯಸ್ನಾನ ಮಾಡಿ ಈ ಸೇವೆಯಲ್ಲಿ ಭಾಗಿಯಾಗಿದ್ದರು. ಶಿವನಿಗೆ ಸಮರ್ಪಿತವಾದ ಶ್ರೀ ಕಾಶಿ ವಿಶ್ವನಾಥ ದೇವಾಲಯಕ್ಕೆ ನಟಿ ತೆರಳಿ ಕಾಶಿಯಲ್ಲಿ ಪುಣ್ಯಸ್ನಾನ ಮಾಡಿ, ಭಕ್ತರು ಊಟ ಮಾಡಿದ ತಟ್ಟೆಯನ್ನು ಎತ್ತುವ ಮೂಲಕ ಸೇವೆಯಲ್ಲಿ ಭಾಗಿಯಾಗಿದ್ದರು. ಇದೀಗ ಕನ್ನಡದ ನಟಿ, ನಿರೂಪಕಿ, ಬಿಗ್ ಬಾಸ್ ಕನ್ನಡ 4ರ ಸ್ಪರ್ಧಿ ಕಾವ್ಯಾ ಶಾಸ್ತ್ರಿ ಊಟಕ್ಕಾಗಿ ಭಿಕ್ಷೆ ಬೇಡುವ ವಿಡಿಯೋ ಒಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರೋ ಕಾಶಿ ವಿಶ್ವನಾಥನ ಸನ್ನಿಧಿಗೆ ನಟಿ ಕಾವ್ಯಾ ಶಾಸ್ತ್ರಿ ಅವರು ಭೇಟಿ ಕೊಟ್ಟಿದ್ದಾರೆ. ನಿನ್ನ ಸನ್ನಿಧಾನದಲ್ಲಿ ಭಿಕ್ಷೆ ಬೇಡಿ ಊಟ ಮಾಡುತ್ತೇನೆ ಅಂತ ಹರಕೆ ಹೊತ್ತಿಕೊಂಡಿದ್ದರು. ಇದೀಗ ಆ ಹರಕೆಯನ್ನು ನಟಿ ತಿರಿಸಿದ್ದಾರೆ. ‘ಕೊರೋನಾದಿಂದಾಗಿ ನನ್ನ ತಂದೆ ಕಳೆದೇ ಹೋಗುತ್ತಾರೆ ಎನ್ನುವ ಭಯದಲ್ಲಿ ಸಿಕ್ಕಸಿಕ್ಕ ದೇವರಿಗೆ, ಸಿಕ್ಕಸಿಕ್ಕ ಹರಕೆ ಹೊತ್ತುಕೊಂಡಿದ್ದೆ. ಅದರಲ್ಲಿ ಒಂದು ಹರಕೆ ಇದು. ಕಾಶಿ ವಿಶ್ವನಾಥನ ಸನ್ನಿಧಿ. ಕಾಶಿ ವಿಶ್ವನಾಥನಲ್ಲಿ, ನನ್ನ ತಂದೆಯ ಜೀವದ ಭಿಕ್ಷೆ ಕೊಡು. ನಿನ್ನ ಸನ್ನಿಧಾನದಲ್ಲಿ ಭಿಕ್ಷೆ ಬೇಡಿ, ಅದರಿಂದ ಬಂದ ಹಣದಲ್ಲಿ ಒಂದಿಡೀ ದಿನದ ಊಟ ಮಾಡ್ತೇನೆ ಅಂತ ಕೇಳಿಕೊಂಡಿದ್ದೆ. ಈ ಹರಕೆ ತೀರಿಸುವ ಸೌಭಾಗ್ಯ ನಾನು ಮೊನ್ನೆ ಕಾಶಿಗೆ ಹೋದಾಗ ಸಿಕ್ಕಿತು. ಇದೇನು ಅಂಧ ವಿಶ್ವಾಸ ಅಂತ ನೀವು ಕೇಳಬಹುದು. ಒಂದು ಹೇಳ್ತೀನಿ ಕೇಳಿ. ಕಷ್ಟದಲ್ಲಿದ್ದಾಗ ಅದನ್ನು ನಿವಾರಿಸಿಕೊಳ್ಳಲು ಏನನ್ನಾದರೂ ಮಾಡುವ ಪರಿಸ್ಥಿತಿಗೆ ಬಂದು ಬಿಡ್ತೀವಿ...' ಎಂದು ಹೇಳಿ ಭಿಕ್ಷೆ ಬೇಡಿ ಅದರಿಂದ ಬಂದ ಹಣದಲ್ಲಿ ಊಟ ಮಾಡಿದ್ದಾರೆ.
‘ಹಿಂದೂ ಧರ್ಮದಲ್ಲಿ ಭಿಕ್ಷಾಟನೆಗೆ ಒಂದು ಪವಿತ್ರವಾದ ಸ್ಥಾನವಿದೆ. ಅದು ನಾನು, ನನ್ನದು ಅನ್ನೋ ಅಹಂಕಾರ ಮತ್ತು ಮೋಹ ಎಲ್ಲದನ್ನೂ ಕಲಿಸಿಬಿಡುತ್ತದೆ. ಒಬ್ಬರ ಮುಂದೆ ಕೈ ಚಾಚಿ ಭಿಕ್ಷೆ ಕೊಡು ಎಂದು ಕೇಳಬೇಕಾದರೆ ದುರಹಂಕಾರ ಎಲ್ಲಾ ಕಳೆದು ಹೋಗಿಬಿಡುತ್ತೆ. ಇದೇ ಭಿಕ್ಷಾಟನೆಯ ಪಾವಿತ್ರ್ಯತೆ. ಭಿಕ್ಷೆ ಕೊಡುವವರು ತಮ್ಮ ಪಾಪ ಕಳೆದುಕೊಳ್ಳುತ್ತಾರೆ. ತೆಗೆದುಕೊಳ್ಳುವವರು, ತಮ್ಮ ಅಹಂಕಾರವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ಹೇಳೋದು, ಈ ದುಡ್ಡು, ಹೆಸರು ಎಲ್ಲಾ ಜೀವದ ಮುಂದೆ ಏನೇನೂ ಇಲ್ಲ. ಈ ಜೀವ ಅನ್ನೋದೇ ಪರಮಾತ್ಮನ ಭಿಕ್ಷೆ. ಅದನ್ನು ಯಾವತ್ತೂ ಅಹಂಕಾರದಿಂದ ಮರೆಯಬಾರದು. ಒಟ್ನಲ್ಲಿ ಇವತ್ತು ನಾನು ನನ್ನ ತಂದೆ ತಾಯಿ ಜೊತೆಗೆ ಖುಷಿಯಾಗಿದ್ದೀನಿ. ಎಲ್ಲವೂ ಆ ದೇವರ ದಯೆ’ ಎಂದು ವಿಡಿಯೋ ಮೂಲಕ ನಟಿ ಕಾವ್ಯಾ ಶಾಸ್ತ್ರಿ ಹೇಳಿದ್ದಾರೆ.
Niveditha Gowda: ಕ್ಯಾಸಿನೋದಲ್ಲಿ ನಿವೇದಿತಾ ಗೌಡಗೆ ಬೆಂಡೆತ್ತಿದ ಕನ್ನಡಿಗರು: ವಿಡಿಯೋ ವೈರಲ್