ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Niveditha Gowda: ಕ್ಯಾಸಿನೋದಲ್ಲಿ ನಿವೇದಿತಾ ಗೌಡಗೆ ಬೆಂಡೆತ್ತಿದ ಕನ್ನಡಿಗರು: ವಿಡಿಯೋ ವೈರಲ್

ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಗೆಸ್ಟ್ ಆಗಿ ಹೋಗಿದ್ದ ನಿವೇದಿತಾಗೆ ಭಾರೀ ಮುಜುಗರ ಆಗುವಂತಹ ಘಟನೆ ನಡೆದಿದೆ. ನಿವೇದಿತಾ ಗೌಡ ಅವರು ಗೋವಾದ ಕ್ಯಾಸಿನೋಕ್ಕೆ ಅತಿಥಿಯಾಗಿ ಹೋಗಿದ್ದರು. ಅಲ್ಲಿ ಅನೇಕ ಮಂದಿ ಕರ್ನಾಟಕದವರೇ ಇದ್ದರು. ಈ ಸಂದರ್ಭ ಇಂಗ್ಲೀಷ್ನಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ.

ಕ್ಯಾಸಿನೋದಲ್ಲಿ ನಿವೇದಿತಾ ಗೌಡಗೆ ಬೆಂಡೆತ್ತಿದ ಕನ್ನಡಿಗರು: ವಿಡಿಯೋ ವೈರಲ್

Niveditha Gowda

Profile Vinay Bhat Mar 4, 2025 6:48 PM

ಬಿಗ್ ಬಾಸ್‌ ಕನ್ನಡ ಸೀಸನ್ 5ರಲ್ಲಿ ಖ್ಯಾತಿಯಾಗಿ ಕನ್ನಡಿಗರ ಮನಸ್ಸಿನಲ್ಲಿ ಗೊಂಬೆಯಾಗಿ ಮಿಂಚಿದ ನಿವೇದಿತಾ ಗೌಡ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ತನ್ನ ಬ್ಯೂಟಿ ಮತ್ತು ಗ್ಲಾಮರಸ್‌ ಲುಕ್‌ಗಳಿಂದ ನಿವೇದಿತಾ ವೇಗವಾಗಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದವರು. ಅಂದು ಟಿಕ್‌ ಟಾಕ್‌ ಮೂಲಕವೇ ಖ್ಯಾತಿಯಾಗಿದ್ದ ನಿವೇದಿತಾ ಗೌಡ ಇಂದು ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್ ಮೂಲಕ ಮಿಂಚುತ್ತಿದ್ದಾರೆ.

ಚಂದನ್‌ ಶೆಟ್ಟಿ ಅವರೊಂದಿಗಿನ ಸ್ನೇಹ, ಪ್ರೇಮ, ವಿವಾಹ-ವಿಚ್ಛೇದನದ ಬಳಿಕ ನಿವೇದಿತಾ ಈಗ ಸಿಂಗಲ್‌ ಆಗಿದ್ದಾರೆ. ಹಾಗಂತ ಅವರ ಲೈಫ್‌ನಲ್ಲಿ ಎಂಜಾಯ್‌ಮೆಂಟ್‌ ಕಡಿಮೆನೂ ಆಗಿಲ್ಲ. ವಿಚ್ಛೇದನದ ಬಳಿಕ ನಿವೇದಿತಾ ಗೌಡ ಸುತ್ತಾಟ, ಅವರ ರೀಲ್ಸ್‌ ವಿಡಿಯೋಗಳು ಸಿಕ್ಕಾಪಟ್ಟೆ ಹೆಚ್ಚಾಗಿವೆ. ಇದೀಗ ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಗೆಸ್ಟ್ ಆಗಿ ಹೋಗಿದ್ದ ನಿವೇದಿತಾಗೆ ಭಾರೀ ಮುಜುಗರ ಆಗುವಂತಹ ಘಟನೆ ನಡೆದಿದೆ.

ನಿವೇದಿತಾ ಗೌಡ ಅವರು ಗೋವಾದ ಕ್ಯಾಸಿನೋಕ್ಕೆ ಅತಿಥಿಯಾಗಿ ಹೋಗಿದ್ದರು. ಅಲ್ಲಿ ಅನೇಕ ಮಂದಿ ಕರ್ನಾಟಕದವರೇ ಇದ್ದರು. ಈ ಸಂದರ್ಭ ಇಂಗ್ಲೀಷ್​ನಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ. ಕನ್ನಡಿಗರೇ ತುಂಬಿದ್ದ ಕ್ಯಾಸಿನೋ ಕೇಂದ್ರಕ್ಕೆ ಅತಿಥಿಯಾಗಿ ಹೋಗಿದ್ದ ನಿವೇದಿತಾ ಗೌಡ, ಅಲ್ಲಿ ನಿರೂಪಕಿ ಕೇಳಿದ ಪ್ರಶ್ನೆಗಳಿಗೆ ಇಂಗ್ಲೀಷ್​ನಲ್ಲಿ ಉತ್ತರಿಸುತ್ತಿದ್ದರು. ಈ ವೇಳೆ ಅಲ್ಲಿ ಹಾಜರಿದ್ದ ಕನ್ನಡಿಗರು ‘ನಿವೇದಿತಾ ಕನ್ನಡದಲ್ಲಿ ಮಾತನಾಡಮ್ಮ’ ಎಂದು ಹೇಳಿದ್ದಾರೆ. ಕೂಡಲೇ ಭಾಷೆ ಬದಲಾಯಿಸಿಕೊಂಡ ನಿವೇದಿತಾ, ಕನ್ನಡದಲ್ಲಿ ಮಾತನಾಡಲು ಪ್ರಾರಂಭಿಸಿದರು. ಇದರ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.



ರಿಯಾಲಿಟಿ ಶೋಗಳಿಂದಲೇ ಫೇಮಸ್ ಆದ ನಿವೇದಿತಾ ಗೌಡ ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಗರ್ಲ್ಸ್ ಟೀಮ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ನಿವೇದಿತಾ ಗೌಡ ಇಲ್ಲಿಯವರೆಗೆ ಹಲವು ಬಾರಿ ಟ್ರೋಲ್ ಕೂಡ ಆಗಿದ್ದಾರೆ. ತಮ್ಮ ದೇಹಸಿರಿಯನ್ನು ಪ್ರದರ್ಶಿಸುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅದರಲ್ಲೂ ಚಂದನ್ ಶೆಟ್ಟಿ ಜೊತೆಗಿನ ವಿಚ್ಚೇದನದ ಬಳಿಕ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಪ್ರತೀ ಬಾರಿ ಅವರು ವಿಡಿಯೋಗಳನ್ನು ಹಂಚಿಕೊಂಡಾಗಲೆಲ್ಲಾ ಕಾಮೆಂಟ್ ಬಾಕ್ಸ್ ಫುಲ್ ಆಗಿರುತ್ತದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಿವ್ವಿ ತಮ್ಮದೇ ಸೈಲ್​ನಲ್ಲಿ ರೀಲ್ಸ್ ಮಾಡಿಕೊಂಡು ಇದ್ದಾರೆ.

ಇತ್ತೀಚೆಗಷ್ಟೆ ನಿವೇದಿತಾ ಗೌಡ ಅವರ ಫೋಟೋ ಒಂದು ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಬಾತ್ ಟಬ್‌ನಲ್ಲಿ ಅಡ್ಡಡ್ಡ ಉದ್ದುದ್ದ ಮಲಗಿ ಫೋಸ್ ನೀಡಿದ್ದರು. ಲಾಂಗ್ ಡ್ರೆಸ್‌ನಲ್ಲಿ ಎದೆಯ ಸೀಳು ಕಾಣುವಂತೆ ನಿವೇದಿತಾ ಗೌಡ ಕ್ಯಾಮೆರಾಗೆ ಫೋಸ್ ನೀಡಿದ್ದರು. ಸದ್ಯ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಜೊತೆಗೆ ನಿವೇದಿತಾ ಕೆಲ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆ ಪೈಕಿ ಮುದ್ದು ರಾಕ್ಷಸಿ ಕೂಡ ಒಂದು. ಈ ಚಿತ್ರದಲ್ಲಿ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ ತೆರೆಹಂಚಿಕೊಂಡಿದ್ದಾರೆ. ಈ ವರ್ಷ ಈ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.

Bhagya Lakshmi Serial: ಭಾಗ್ಯಾ ಬದುಕಲ್ಲಿ ಭರವಸೆಯ ಹೊಸ ಮಿಂಚು: ಕೆಲಸ ಸಿಕ್ಕೇ ಬಿಡ್ತು