ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೊದಲ ಕಾರು ಖರೀದಿಸಿದ ಖುಷಿಗೆ ಕಣ್ಣೀರಿಟ್ಟ ʻಬಿಗ್‌ ಬಾಸ್‌ʼ ಖ್ಯಾತಿಯ ಶ್ರುತಿ ಪ್ರಕಾಶ್‌; ಈ ಕಾರಿನ ಬೆಲೆ ಎಷ್ಟು ಗೊತ್ತಾ?

ಶ್ರುತಿ ಪ್ರಕಾಶ್‌ ಅವರು ತಮ್ಮ ಹತ್ತು ವರ್ಷಗಳ ಪರಿಶ್ರಮದ ಫಲವಾಗಿ ಮೊದಲ ಕಾರನ್ನು ಖರೀದಿಸಿ ಭಾವುಕರಾಗಿದ್ದಾರೆ. ಸ್ಕೋಡಾ ಸ್ಲಾವಿಯಾ ಮಾಂಟೆ ಕಾರ್ಲೋ ಆವೃತ್ತಿಯ ಐಷಾರಾಮಿ ಕಾರಿನ ಓನರ್‌ ಆಗಿರುವ ಅವರು, ಮುಂಬೈನಲ್ಲಿ ತಾವು ನಡೆಸಿದ ಹೋರಾಟವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 5ರಲ್ಲಿ ಸ್ಪರ್ಧಿಯಾಗಿದ್ದ ಶ್ರುತಿ ಪ್ರಕಾಶ್‌, ಆ ಮೂಲಕ ಕನ್ನಡಿಗರಿಗೆ ಪರಿಚಿತಗೊಂಡರು. ಕನ್ನಡ ಮತ್ತು ಹಿಂದಿ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಮತ್ತು ಗಾಯಕಿ ಶ್ರುತಿ, ಮೂಲತಃ ಬೆಳಗಾವಿಯವರು. ಸದ್ಯ ಅವರು ಹೊಸ ಕಾರೊಂದನ್ನು ಖರೀದಿ ಮಾಡಿ, ಆ ಮೂಲಕ ಸುದ್ದಿಯಾಗಿದ್ದಾರೆ.

ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ...

ಇದು ಶ್ರುತಿ ಅವರ ಮೊದಲ ಕಾರು. ಹಾಗಾಗಿ, ಸಿಕ್ಕಾಪಟ್ಟೆ ಭಾವುಕರಾಗಿರುವ ಅವರು, ಎಮೋಷನಲ್‌ ಆಗಿ ಕಣ್ಣೀರಿಟ್ಟಿದ್ದಾರೆ. "ಮೊದಲ ಕಾರು, ಯಾಕೋ ಗೊತ್ತಿಲ್ಲ... ಇದು ಮೊದಲ ಪ್ರೀತಿಯಂತೆ ಭಾಸವಾಗುತ್ತಿದೆ. ಬಾಂಬೆಯಲ್ಲಿದ್ದ 10 ವರ್ಷಗಳು ನನಗೆ ತಾಳ್ಮೆ, ನಂಬಿಕೆ ಮತ್ತು ಛಲವನ್ನು ಕಲಿಸಿಕೊಟ್ಟಿವೆ. ಪ್ರತಿ ಆಡಿಷನ್, ಪ್ರತಿಯೊಂದು ಕಾಯುವಿಕೆ, ಕೈಯಲ್ಲಿ ಕೆಲಸವಿದ್ದಾಗಲೂ ಅಥವಾ ಇಲ್ಲದಿದ್ದಾಗಲೂ ನಾನು ಸೋಲದೆ ಮುನ್ನಡೆದ ಹಾದಿ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ" ಎಂದು ಶ್ರುತಿ ಹೇಳಿಕೊಂಡಿದ್ದಾರೆ.

Bigg Boss Kannada 12: ರಾಶಿಕಾ ಬಗ್ಗೆ ಮಾತನಾಡಿ ತಾಯಿ ಭಾವುಕ! ಅತ್ತ ಧನುಷ್‌ಗೆ ಬಿಗ್‌ ಟ್ವಿಸ್ಟ್‌ ಕೊಟ್ಟ ಬಿಗ್‌ ಬಾಸ್‌

ಈ ಪಯಣ... ಈಗಷ್ಟೇ ಶುರುವಾಗಿದೆ...

"ನಿನ್ನಿಂದ ಇದು ಸಾಧ್ಯವಿಲ್ಲ ಎಂದು ಇಡೀ ಜಗತ್ತೇ ಹೇಳಿದಾಗಲೂ, 'ನನ್ನಿಂದ ಸಾಧ್ಯ' ಎಂದು ಹೇಳುತ್ತಿದ್ದ ನನ್ನೊಳಗಿನ ಆ ಸಣ್ಣ ದನಿಯನ್ನು ನಾನು ಗಟ್ಟಿಯಾಗಿ ನಂಬಿದ್ದೆ. ದೇವರು, ನನ್ನ ಪೋಷಕರು, ಈ ಪ್ರಕೃತಿ ಮತ್ತು ಭಯಕ್ಕಿಂತ ನಂಬಿಕೆಯೇ ಮುಖ್ಯ ಎಂದು ಆರಿಸಿಕೊಂಡಿದ್ದಕ್ಕಾಗಿ ನನಗೆ ನಾನೇ ಕೃತಜ್ಞನಾಗಿದ್ದೇನೆ. ಈ ಭಾವನೆಯನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ. ಮೊದಲ ಕಾರು. ನನಸಾಗಲಿರುವ ಅನೇಕ ಕನಸುಗಳಲ್ಲಿ ಮನೆಗೆ ಬಂದ ಮೊದಲ ಕನಸು ಇದು. ಮತ್ತು ಈ ಪಯಣ... ಈಗಷ್ಟೇ ಶುರುವಾಗಿದೆ. ಹಲೋ 2026, ಐ ಲವ್ ಯು.." ಎಂದು ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಶ್ರುತಿ ಪ್ರಕಾಶ್‌ ಅವರು ಹೇಳಿಕೊಂಡಿದ್ದಾರೆ.

ಶ್ರುತಿ ಪ್ರಕಾಶ್‌ ಹಂಚಿಕೊಂಡ ವಿಡಿಯೋ



ಶ್ರುತಿ ಖರೀದಿ ಮಾಡಿರುವ ಕಾರು ಯಾವುದು?

ಶ್ರುತಿ ಪ್ರಕಾಶ್‌ ಅವರು Skoda Slavia Monte Carlo 1.5 ಕಾರನ್ನು ಖರೀದಿ ಮಾಡಿದ್ದಾರೆ. ಇದು ಅವರು ಖರೀದಿ ಮಾಡಿದ ಮೊದಲ ಕಾರು ಆಗಿದೆ. ಇದರ ಎಕ್ಸ್-ಶೋರೂಮ್ ಬೆಲೆ ಸುಮಾರು 17.99 ಲಕ್ಷ ರೂ.ಗಳಾಗಿದ್ದು, ಬೆಂಗಳೂರಿನಲ್ಲಿ ಆನ್-ರೋಡ್ ಬೆಲೆ ಸುಮಾರು 22 ಲಕ್ಷ ರೂ. ಆಸುಪಾಸಿನಲ್ಲಿರಬಹುದು ಎನ್ನಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಶಕ್ತಿಶಾಲಿ ಮತ್ತು ಸ್ಟೈಲಿಶ್ ಸೆಡಾನ್ (Sedan) ಕಾರುಗಳಲ್ಲಿ ಇದು ಕೂಡ ಒಂದಾಗಿದೆಯಂತೆ.

ಸದ್ಯ ಶ್ರುತಿ ಪ್ರಕಾಶ್‌ ಅವರು ವಿಕ್ರಮ್ ಭಟ್ ನಿರ್ದೇಶನದ 'Haunted: Ghosts of the Past' ಎಂಬ ಹಿಂದಿ ಸಿನಿಮಾದ ಮೂಲಕ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.