ಯಾರು ಈ ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಇರೋಕೆ ಅರ್ಹರಲ್ಲವೋ ಅವರಿಗೆ ಕಪ್ಪು ಮಸಿ ಬಳಿಯಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ಆಗ ಚಂದ್ರಪ್ರಭ (Chandraprabha) ಅವರು ಗಿಲ್ಲಿ ನಟ, ಕಾವ್ಯ ಶೈವ ಅವರ ಸ್ನೇಹವನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಗಿಲ್ಲಿ ಹಾಗೂ ಕಾವ್ಯ (Gilli Kavya) ಅವರ ಜೋಡಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಅವರಿಬ್ಬರ ಕ್ಯೂಟ್ ಜೋಡಿಯನ್ನ ಮೆಚ್ಚಿಕೊಂಡಿದ್ದಾರೆ. ಇನ್ನು ಅವರಿಬ್ಬರ ಮಧ್ಯೆ ಫ್ರೆಂಡ್‌ಶಿಫ್ (Friendship) ಬಾಂಡಿಂಗ್ ಇರೋದು ಗೊತ್ತೇ ಇರೋ ವಿಚಾರ. ಆದರೆ ಚಂದ್ರಪ್ರಭ ಹೇಳಿದ ರೀತಿ ಸ್ವತಃ ಕಾವ್ಯಗೆ ನೋವಾಗಿದೆ.
ಚಂದ್ರಪ್ರಭ ಹೇಳಿದ್ದೇನು?
ಕಾವ್ಯ ನನ್ನ ತಂಗಿ. ಎಲ್ಲ ವಿಚಾರದಲ್ಲೂ ಸರಿಯಾಗಿ ಹೋಗ್ತಿದ್ದಾಳೆ ಅಂದುಕೊಂಡಿದ್ದೆ. ಆದರೆ ಈಗ ದಾರಿ ತಪ್ತಾ ಇದ್ದಾಳೆ ಅನ್ನಿಸುತ್ತಿದೆ.ಇಲ್ಲಿ ಇರುವವರಿಗೆ ಲವ್ ಎನ್ನೋದು ಓಕೆ, ತಮಾಷೆ ಅಂತ ಅಂದುಕೊಳ್ತೀವಿ. ಆದರೆ ಸಮಾಜದಲ್ಲಿ ಇರುವ ಜನರು ಇದನ್ನು ಎಲ್ಲರೂ ಅಲ್ಲ, ಕೆಲವರು ರಿಯಲ್ ಅಂತ ಅಂದುಕೊಂಡಾಗ ನನ್ನ ತಂಗಿಗೆ ಕಳಂಕ ತರುತ್ತದೆ. ನಾಳೆ ಮದುವೆ ವಿಷಯ ಬಂದಾಗ ಸಮಸ್ಯೆ ಆಗುವುದು ನೀನು ಬದಲಾಗಬೇಕು ಎಂದು ಚಂದ್ರಪ್ರಭ ಹೇಳಿದ್ದಾರೆ.
ಇದನ್ನೂ ಓದಿ: BBK 12: ಬಿಗ್ ಬಾಸ್ ಕೊಟ್ಟ ಟಾಸ್ಕ್‌ಗೆ ಕಣ್ಣೀರಿಟ್ಟ ಧನುಷ್! ಅಸಲಿಗೆ ಆಗಿದ್ದೇನು?
ಲವ್ ಅನ್ನೋ ಟ್ಯಾಗ್ ಕೊಟ್ಟ ಚಂದ್ರಪ್ರಭ ಬಗ್ಗೆ ಕಾವ್ಯ ಕೂಡ ಬೇಸರ ಹೊರಹಾಕಿದರು. `ಅಣ್ಣ ಅಣ್ಣ ಅಂತ ಕಾವ್ಯ ಎನ್ನೋ ಹೆಸರಿಗೆ ನೀವು ಮಸಿ ಬಳಿದಿದ್ದೀರಿ. ನೀವು ನಮ್ಮ ಜೊತೆ ಇರ್ತೀರಿ, ಗಿಲ್ಲಿ ಜೊತೆ ಇರ್ತೀರಿ. ನಮ್ಮಿಬ್ಬರ ಜೊತೆ ಯಾರು ಏನು ಅಂದುಕೊಳ್ತಾರೋ ಏನೋ. ನೀವು ಮಾತ್ರ ಲವ್ ಎನ್ನೋ ಟೈಟಲ್ ಕೊಟ್ರಿ. ಈ ರೀತಿ ಇಲ್ಲ ಎನ್ನೋದು ನಿಮಗೆ ಗೊತ್ತಿದೆ, ಆದರೆ ನೀವು ಹೀಗೆ ಹೇಳಿದ್ದು ಬೇಸರ ತಂದಿದೆ. ನಾನು ರಾಖಿ ಕಟ್ಟಿ, ಅಣ್ಣಾ ಅಂತ ಕರೆದಿದ್ದೀನಿ, ನಾನು, ಗಿಲ್ಲಿ ಹೇಗಿದೀವಿ ಅಂತ ಇಬ್ಬರಿಗೂ ಗೊತ್ತಿದೆ' ಎಂದು ಕಾವ್ಯ ಶೈವ ಹೇಳಿದ್ದಾರೆ.
ಬಿಗ್‌ಬಾಸ್ ಮನೆಯಿಂದ ಹೊರಬಂದ ಅಶ್ವಿನಿ ಗೌಡ
ಬಿಗ್ ಬಾಸ್ ಸೀಸನ್ 12ರ ನಿನ್ನೆಯ ಸಂಚಿಕೆಯಲ್ಲಿ ಮಸಿ ಬಳಿದು ಸ್ಪರ್ಧಿಗಳು ಕಾರಣಗಳನ್ನು ನೀಡಬೇಕಿತ್ತು. ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಅವರು ಎಲ್ಲ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿ, ಟಾಸ್ಕ್ ಈ ವಾರ ಇರುವುದಿಲ್ಲ.
ಇದನ್ನೂ ಓದಿ: BBK 12: ಸೂರಜ್ ಕೌಂಟರ್‌ಗೆ ಸೈಲೆಂಟ್ ಆದ ರಿಷಾ! ಒಂದೊಂದು ಡೈಲಾಗ್‌ಗೂ ಕುಣಿದು ಕುಪ್ಪಳಿಸಿದ ಗಿಲ್ಲಿ
ಸೂಟ್‌ಕೇಸ್ ಜೊತೆ ಗಾರ್ಡನ್ ಏರಿಯಾಗೆ ಬರುವಂತೆ ಬಿಗ್‌ಬಾಸ್ ಸೂಚಿಸುತ್ತಾರೆ. ಎಲ್ಲಾ ಸ್ಪರ್ಧಿಗಳು ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಗಾರ್ಡನ್ ಏರಿಯಾಗೆ ಬರುತ್ತಾರೆ.ಅಶ್ವಿನಿ ಅವರ ಹೆಸರನ್ನು ಬಿಗ್ ಬಾಸ್ ಸೂಚಿಸುತ್ತಿದ್ದಾರೆ. ಅಶ್ವಿನಿ ಅವರ ಹೆಸರು ಹೇಳುತ್ತಿದ್ದಂತೆ ಬಿಗ್ ಬಾಸ್ ಮುಖ್ಯದ್ವಾರ ತೆರೆದುಕೊಳ್ಳುತ್ತದೆ. ಇನ್ನು ಅಶ್ವಿನಿ ಗೌಡ ಮಿಡ್ ವೀಕ್ ಎಲಿಮಿನೇಟ್ ಆಗಿದ್ದಾರಾ? ಅಥವಾ ಸೀಕ್ರೆಟ್ ರೂಮ್‌ನಲ್ಲಿ ಇದ್ದಾರಾ ಎಂಬುದೇ ವೀಕ್ಷಕರಲ್ಲಿ ಇರೋ ಕುತೂಹಲ. ಇನ್ನು ರಕ್ಷಿತಾ ಅವರನ್ನು ಮೊದಲ ವಾರ ಒಂದು ರೂಮ್‌ನಲ್ಲಿ ಇರಿಸಲಾಗಿತ್ತು. ಅದೇ ರೀತಿ ಅಶ್ವಿನಿ ಗೌಡ ಅವರನ್ನೂ ಮಾಡಿರಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ.