ಬಿಗ್ ಬಾಸ್ (Bigg Boss Kannada 12) ಅಂದರೆ ಹಾಗೇ ಕೆಲವು ಟ್ವಿಸ್ಟ್ ಕೊಡ್ತಾನೆ ಇರ್ತಾರೆ. ಈ ವಾರ ಧ್ರುವಂತ್ ಹಾಗೂ ರಕ್ಷಿತಾ ಸೀಕ್ರೆಟ್ ರೂಂನಲ್ಲಿ ಇದ್ದಾರೆ. ಇದು ಸ್ಪರ್ಧಿಗಳಿಗೆ ಕೆಲವರಿಗೆ ಸುಳಿವು ಸಿಕ್ಕಿದೆ. ಅಷ್ಟೇ ಅಲ್ಲ ಧ್ರುವಂತ್ ಹಾಗೂ ರಕ್ಷಿತಾ (Dhruvanth And Rakshitha) ಜಗಳ ಮಿತಿ ಮೀರುತ್ತಿದೆ. ನಿನ್ನೆಯ ಕೆಲವು ಟಾಸ್ಕ್‌ನಲ್ಲಿಯೂ ಕೆಲವು ನಿರ್ಧಾರಗಳನ್ನು ತೆಗದುಕೊಳ್ಳುವ ಹಕ್ಕನ್ನು ಇವರಿಬ್ಬರಿಗೆ ನೀಡಿದ್ದರು ಬಿಗ್ ಬಾಸ್. ಇವರ ಅವತಾರ ಕಂಡು ಧ್ರುವಂತ್ ನಾಗವಲ್ಲಿ (Nagavalli) ಆಗಿ ಬದಲಾಗಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ನಂಗೆ ಒಂದು ಪ್ರಶ್ನೆ ಇದೆ. ಇಷ್ಟು ಸ್ಟೈಲ್ ಯಾಕೆ ಮಾಡ್ತೀರಾ ಅತ ಕೇಳಿದ್ದಾರೆ ರಕ್ಷಿತಾ. ಅದಕ್ಕೆ ಧ್ರುವಂತ್ ಅವರು ನಾನು ನನ್ನನ್ನು ಪ್ರೀತಿಸುತ್ತೇನೆ ಎಂದಿದ್ದಾರೆ. ಬಿಗ್ ಬಾಸ್ ಕೂಡ ಯೋಚನೆ ಮಾಡ್ತಾ ಇದ್ದಾರೆ. ನಿಮ್ಮನ್ನು ಸೀಕ್ರೆಟ್ ರೂಂಗೆ ಹಾಕಿ ತಪ್ಪಾಯ್ತು ಅಂತ ರಕ್ಷಿತಾ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ರಕ್ಷಿತಾ ಹೊರ ಹೋಗುತ್ತಿದ್ದಂತೆ ಸ್ಪಂದನಾ -ಕಾವ್ಯ ಫುಲ್ ಖುಷ್! ಮಾಳು ಕಣ್ಣೀರು
ನಿನ್ನ ಅಟಿಟ್ಯುಡ್, ನೀನು ಆಡುವ ರೀತಿ, ನೀನು ಒಳ್ಳೆಯದಕ್ಕೆ ಹೇಳಿದರೂ ಅದೇನೋ ಸನ್ನೆ ಮಾಡಿ ತೋರಿಸುತ್ತೀಯಾ ಅಂತ ವ್ಯಂಗ್ಯ ಮಾಡಿದ್ದಾರೆ. ಅದಕ್ಕೆ ರಕ್ಷಿತಾ, ಫೋಟೇಜ್ ಬೇಕಾ? ಅಂತ ಪ್ರಶ್ನೆ ಇಟ್ಟು ಧ್ರುವಂತ್ ಅವರನ್ನೇ ಇಮಿಟೇಟ್ ಮಾಡಿದ್ದಾರೆ. ಕಾಪಿ ಕ್ಯಾಟ್, ರಕ್ಷಿತಾ ಆಗಲಿಕ್ಕೆ ಹೋಗ್ತಾ ಇದ್ದೀರಾ? ಅಂತ ಕೂಗಾಡಿದ್ದಾರೆ. ಇನ್ನು ಧ್ರುವಂತ್ ಕೂಡ ಕಾಲು ತೋರಿಸಿ, ಅತ್ಯಂತ ಅತಿರೇಕ ವರ್ತನೆ ತೋರಿದ್ದಾರೆ.
ಪ್ರೋಮೋ
ನಿನ್ನೆಯೂ ಇಬ್ಬರ ಮಧ್ಯೆ ವಾದ
ಧ್ರುವಂತ್ ಕೊಡುವ ಕಾಟಕ್ಕೆ ಹೈರಾಣ್ ಆಗಿದ್ದಾರೆ ರಕ್ಷಿತಾ. ಧ್ರುವಂತ್ ಕೇಳಿದ ಒಂದು ಸಿಂಪಲ್ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ಓವರ್ ಆಗಿ ಪ್ರತಿಕ್ರಿಯೆ ನೀಡಿದ್ದರು. ಆಕಸ್ಮಾತ್ ನೀವು ಸೀಕ್ರೆಟ್ ರೂಂನಲ್ಲಿ ಇದ್ದು ನಾನು ಅಲ್ಲಿ ಇದಿದ್ದರೆ ಏನು ಅನ್ನಿಸ್ತಾ ಇತ್ತು? ಅಂತ ರಕ್ಷಿತಾಗೆ ಧ್ರುವಂತ್ ಕೇಳಿದ್ದಾರೆ. ಅದಕ್ಕೆ ರಕ್ಷಿತಾ ಏನೋ ಅರ್ಥ ಮಾಡಿಕೊಂಡು, ಅಲ್ಲಿ ಇಲ್ಲ ಅಂತ ನೀವು ಯಾಕೆ ಕನ್ಸಿಡರ್ ಮಾಡಲ್ಲ ಅಂತ ಕೇಳಿದ್ದಾರೆ.
ನಾನು ಕನಸಲ್ಲಿ ಕೂಡ ಯೋಚನೆ ಮಾಡಲಿಕ್ಕೆ ಇಲ್ಲ ಎಂದಿದ್ದಾರೆ. ಅದಕ್ಕೆ ಧ್ರುವಂತ್ ಅವರು, ಈ ಪ್ರಾಸೆಸ್‌ನಲ್ಲಿ ನೀನು ಈವಾಗ ಎಲ್ಲಿ ಇದ್ದೀಯಾ ಅಂತ ಕೇಳಿದ್ದಾರೆ.ಧ್ರುವಂತ್ ಅವರು “ಈಗ ಎಲ್ಲಿದ್ದೀಯಾ? ನಮ್ಮನ್ನು ಬಿಟ್ಟು ಪ್ರೊಸೆಸ್ ನಡೆಯುತ್ತಿದೆ. ತಲೆಯಲ್ಲಿ ಕಾಲೇಜಿನಲ್ಲಿ ಓದಿರೋದು ಯಾವುದು ಇಲ್ಲವಾ? ಎಂದು ಕೇಳಿದ್ದೀರಾ. ಹಾಗಾದ್ರೆ ನೀವು ಏಕೆ ಕೇಳ್ತಾ ಇದ್ದೀರಾ? ಯಾರು ಬೆಸ್ಟ್ ಅಂತ? ಕೇಳಿದ್ದಾರೆ. ಅದಕ್ಕೆ ಧ್ರುವಂತ್‌ಗೆ ಪಿತ್ತ ನೆತ್ತಿಗೇರಿದೆ. ನಿಂಗೆ ಜನರಲ್ ಆಗಿ ಕೇಳಿದ್ದು, ಆಟ ಶುರುವಾಗಿ ಫೈನಲ್ ತೀರ್ಪು ಕೇಳಿದ್ದಿಲ್ಲ” ಎಂದಿದ್ದಾರೆ.
ಧ್ರುವಂತ್ ಅವರು “ಈಗ ಎಲ್ಲಿದ್ದೀಯಾ? ನಮ್ಮನ್ನು ಬಿಟ್ಟು ಪ್ರೊಸೆಸ್ ನಡೆಯುತ್ತಿದೆ. ತಲೆಯಲ್ಲಿ ಕಾಲೇಜಿನಲ್ಲಿ ಓದಿರೋದು ಯಾವುದು ಇಲ್ಲವಾ? ಎಂದು ಕೇಳಿದ್ದೀರಾ. ಹಾಗಾದ್ರೆ ನೀವು ಏಕೆ ಕೇಳ್ತಾ ಇದ್ದೀರಾ? ಯಾರು ಬೆಸ್ಟ್ ಅಂತ? ಕೇಳಿದ್ದಾರೆ. ಅದಕ್ಕೆ ಧ್ರುವಂತ್‌ಗೆ ಪಿತ್ತ ನೆತ್ತಿಗೇರಿದೆ. ನಿಂಗೆ ಜನರಲ್ ಆಗಿ ಕೇಳಿದ್ದು, ಆಟ ಶುರುವಾಗಿ ಫೈನಲ್ ತೀರ್ಪು ಕೇಳಿದ್ದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಫಿನಾಲೆ ಯಾವಾಗ? ಕಿಚ್ಚ ಸುದೀಪ್ ಏನಂದ್ರು?
ಧ್ರುವಂತ್ ಸಹಜವಾಗಿ ಪ್ರಶ್ನೆ ಮಾಡಿದ್ದು, ರಕ್ಷಿತಾ ಅವರು ಉರಿದುರಿದು ಮಾತನಾಡಿದ್ದಾರೆ. ಈ ಬಗ್ಗೆ ವೀಕ್ಷಕರೊಬ್ಬರು, “ಧ್ರುವಂತ್ ಮತ್ತು ರಕ್ಷಿತಾ...! ಅವನು ಮೃದುವಾಗಿ ಒಂದು ಸರಳ ಪ್ರಶ್ನೆ ಕೇಳಿದ್ದು. ಇವಳು ಉಲ್ಟಾ ಏನೇನೋ ಹೇಳ್ತಾ ಇದ್ದಾಳೆ. ಒಳ್ಳೇ ತಮಾಷೆ. ಅಂತ ಕಮೆಂಟ್ ಮಾಡಿದ್ದಾರೆ.