Bigg Boss Kannada 12: ಬಿಗ್ ಬಾಸ್ ಫಿನಾಲೆ ಯಾವಾಗ? ಕಿಚ್ಚ ಸುದೀಪ್ ಏನಂದ್ರು?
Bigg Boss Kannada Finale: ಈ ವಾರ ವೋಟಿಂಗ್ ಲೈನ್ ಓಪನ್ ಇಲ್ಲದ ಕಾರಣ ಧ್ರುವಂತ್ ಹಾಗೂ ರಕ್ಷಿತಾ ಅವರು ಸೀಕ್ರೆಟ್ ರೂಂನಲ್ಲಿದ್ದಾರೆ. ಯಾರೂ ಈ ವಾರ ಎಲಿಮಿನೇಟ್ ಆಗಿಲ್ಲ. ಆದರೆ ಕಿಚ್ಚ ಸುದೀಪ್ ಅವರು ವೇದಿಕೆಯಲ್ಲಿ ಸ್ಪರ್ಧಿಗಳಿಗೆ ಒಂದು ಎಚ್ಚರಿಕೆ ಕೊಟ್ಟಿದ್ದಾರೆ. ಫಿನಾಲೆಗೆ ಕೆಲವೇ ದಿನಗಳು ಇದೆ ಎಂದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭ ಆಗಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಹಾಗಾದ್ರೆ ಫಿನಾಲೆ ಯಾವಾಗ?
ಬಿಗ್ ಬಾಸ್ ಕನ್ನಡ -
ಈ ವಾರ ವೋಟಿಂಗ್ ಲೈನ್ ಓಪನ್ ಇಲ್ಲದ ಕಾರಣ ಧ್ರುವಂತ್ (Dhruvanth) ಹಾಗೂ ರಕ್ಷಿತಾ (Rakshitha Shetty) ಅವರು ಸೀಕ್ರೆಟ್ ರೂಂನಲ್ಲಿದ್ದಾರೆ. ಯಾರೂ ಈ ವಾರ ಎಲಿಮಿನೇಟ್ ಆಗಿಲ್ಲ. ಆದರೆ ಕಿಚ್ಚ ಸುದೀಪ್ ಅವರು ವೇದಿಕೆಯಲ್ಲಿ ಸ್ಪರ್ಧಿಗಳಿಗೆ ಒಂದು ಎಚ್ಚರಿಕೆ ಕೊಟ್ಟಿದ್ದಾರೆ. ತುಂಬಾ ಓವರ್ ಕಾನಿಫೆಡೆನ್ಸ್ ಹಾಗೂ ಆರಾಮದಾಯಕವಾಗಿ ಗೇಮ್ ತೆಗೆದುಕೊಳ್ಳಬೇಡಿ. ಫಿನಾಲೆಗೆ ಕೆಲವೇ ದಿನಗಳು ಇದೆ ಎಂದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg boss Kannada 12) ಆರಂಭ ಆಗಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಹಾಗಾದ್ರೆ ಫಿನಾಲೆ (Finale) ಯಾವಾಗ?
ಓವರ್ ಕಾನಿಫೆಡೆನ್ಸ್ ಬೇಡ
ಸೆಪ್ಟೆಂಬರ್ 28ರಂದು ಬಿಗ್ ಬಾಸ್ ಕನ್ನಡ ಶುರು ಆಯ್ತು. ಪ್ರತಿ ದಿನ ರಾತ್ರಿ 9.30ಕ್ಕೆ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುದರ ಜೊತೆ ಜಿಯೋ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತೆ. ಕೆಲವು ವಿವಾದಗಳು ಆಗಿವೆ.ಅಷ್ಟೇ ಅಲ್ಲ ಈ ಬಾರಿ ಶೋನಲ್ಲಿ 24 ಜನರನ್ನು ತರಲಾಗಿದೆ. ಇದರ ಪೈಕಿ ಕೆಲವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು. ಧ್ರುವಂತ್, ರಕ್ಷಿತಾ ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿದೆ.
ಇದನ್ನೂ ಓದಿ: Bigg Boss Kannada 12: ರಕ್ಷಿತಾ ಹೊರ ಹೋಗುತ್ತಿದ್ದಂತೆ ಸ್ಪಂದನಾ -ಕಾವ್ಯ ಫುಲ್ ಖುಷ್! ಮಾಳು ಕಣ್ಣೀರು
ಮನೆಯ ಸದಸ್ಯರಿಗೆ ಕೆಲವು ಕಿವಿ ಮಾತು ಹೇಳಿದರು ಕಿಚ್ಚ . ತುಂಬಾ ಓವರ್ ಕಾನಿಫೆಡೆನ್ಸ್ ಹಾಗೂ ಆರಾಮದಾಯಕವಾಗಿ ಗೇಮ್ ತೆಗೆದುಕೊಳ್ಳಬೇಡಿ. ಫಿನಾಲೆಗೆ ಕೆಲವೇ ದಿನಗಳು ಇದೆ ಎಂದಿದ್ದಾರೆ.
ಸ್ಪರ್ಧಿಗಳು ಹೆಚ್ಚಿರುವುದರಿಂದ ಮಿಡ್ ವೀಕ್ ಎಲಿಮಿನೇಶನ್ ಜೊತೆ ಡಬಲ್ ಎಲಿಮಿನೇಶನ್ ಇರಲಿದೆ ಎನ್ನಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ ಜನವರಿ 17 ಹಾಗೂ 18ರಂದು ಫಿನಾಲೆ ನಡೆಯಲಿದೆ ಎನ್ನಲಾಗುತ್ತಿದೆ.
A dangerous man doesn’t shout or show anger..
— 🌿 Gear Brylls (@g_brylls) December 14, 2025
He stays calm..
He listens..
He understands people before reacting..
In #BBK12, Gilli proves that silence, clarity and self control are more powerful than noise..
That’s real strength.. Kilaadi #Gilli.. pic.twitter.com/goHylwmBkW
ಮಿಡ್ ಫಿನಾಲೆ!
ಇದೇ ಸೀಸನ್‌ನಲ್ಲಿ ಮಿಡ್ ಸೀಸನ್ ಫಿನಾಲೆ ಕೂಡ ನಡೆದಿತ್ತು. ನಿರೀಕ್ಷೆಗೂ ಮೀರಿದ, ಕುತೂಹಲಕರ ತಿರುವುಗಳು ಇತ್ತು. ಕಾಕ್ರೋಚ್ ಸುಧಿ ಅವರು ಮಿಡ್ ಸೀಸನ್ ವಿನ್ನರ್ ಆಗಿದ್ದರು.
ಪವರ್ ಕೊಟ್ಟಿದ್ದ ಬಿಗ್ ಬಾಸ್
ಮಿನಿ ಫಿನಾಲೆಯಲ್ಲಿ ಕಾಕ್ರೋಚ್ ಸುಧಿ ವಿನ್ ಆಗಿ ಸ್ಪೆಷಲ್ ಪವರ್ ಪಡೆದುಕೊಂಡಿದ್ದರು. ನಾಮಿನೇಟ್ ಆದಾಗ, ಆ ಪವರ್ ಅನ್ನು ಬಳಸಿ ಕಾಕ್ರೋಚ್ ಮನೆಯಲ್ಲೇ ಉಳಿದುಕೊಂಡರು. ಆದರೆ, ಆ ನಂತರದಲ್ಲಿ ಸುಧಿಗೆ ಯಾವುದೇ ಪವರ್ ಇರಲಿಲ್ಲ.
ಇದನ್ನೂ ಓದಿ: Bigg Boss Kannada 12: ಧ್ರುವಂತ್‌ಗೆ ಆಟ, ರಕ್ಷಿತಾಗೆ ಪ್ರಾಣ ಸಂಕಟ; ಸೀಕ್ರೆಟ್ ರೂಮ್‌ನಲ್ಲಿ ಪುಟ್ಟಿ ನಡುಕ!
ಸುಧಿ ಸೇಫ್ ಆಗಿ ಮತ್ತೆ ನಾಮಿನೇಟ್ ಆಗಿದ್ದರು. ಆದರೆ, ಲಕ್ ಅವರ ಕೈ ಹಿಡಿಯಲಿಲ್ಲ. ಪರಿಣಾಮ, ಕಾಕ್ರೋಚ್ ಸುಧಿ ʻಬಿಗ್ ಬಾಸ್ʼನಿಂದ ಎಲಿಮಿನೇಟ್ ಆಗಿದ್ದರು.