ಬಿಗ್ ಬಾಸ್ ಕನ್ನಡ 11 (Bigg Boss Kannada 11) ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಉಗ್ರಂ ಮಂಜು (Ugram Manju), ರಜತ್, ತ್ರಿವಿಕ್ರಮ್, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ (Chaitra Kundapura) ಬಂದಿದ್ದಾರೆ. ಆದರೆ ಮೊದಲೆರಡು ದಿನ ಗಿಲ್ಲಿ ಹಾಗೂ ಮಂಜು, ರಜತ್ ನಡುವೆ ಅಷ್ಟಾಗಿ ಸರಿ ಇರಲಿಲ್ಲ. ಗಿಲ್ಲಿ ಕಾಮಿಡಿ (Gilli Nata) ಮಾಡೋದನ್ನ ಸೀರಿಯೆಸ್ ಆಗಿ ತೆಗೆದುಕೊಂಡಿದ್ದಾರೆ. ಆ ಬಳಿಕ ಗಿಲ್ಲಿ ಸೈಲೆಂಟ್ ಆಗಿದ್ದರು. ಆದರೆ ನಿನ್ನೆಯ ಎಪಿಸೋಡ್‌ನಲ್ಲಿ ಗಿಲ್ಲಿ ಡೈಲಾಗ್‌ಗೆ ಸ್ವತಃ ರಜತ್ (Rajath) ಹಾಗೂ ಮಂಜು ಅವರು ಚಪ್ಪಾಳೆ ತಟ್ಟಿದ್ದಾರೆ.
ಅತಿಥಿಗಳನ್ನು ರಂಜಿಸುವ ಟಾಸ್ಕ್
ಬಿಗ್ಬಾಸ್ನ ಆದೇಶದಂತೆ ಅತಿಥಿಗಳನ್ನು ರಂಜಿಸಬೇಕಿತ್ತು. ಫ್ಯಾಷನ್ ಶೋ ಕೆಲ ಮಹಿಳಾ ಸ್ಪರ್ಧಿಗಳು. ರಘು ಮತ್ತು ರಕ್ಷಿತಾ ನಾಟಕವೊಂದನ್ನು ಮಾಡಿದರು. ಅಭಿ ಮತ್ತು ಸ್ಪಂದನಾ ಧಾರಾವಾಹಿ ಸೀನ್ ಒಂದನ್ನು ರೀಕ್ರಿಯೇಟ್ ಮಾಡಿದರು.
ಇದನ್ನೂ ಓದಿ: Bigg Boss Kannada 12: ನನಗೆ ಪುನರ್ ಜನ್ಮ ಕೊಟ್ಟಿದ್ದೇ ಬಿಗ್ ಬಾಸ್! ಕಣ್ಣೀರಿಟ್ಟ ಚೈತ್ರಾ ಕುಂದಾಪುರ
ಅಶ್ವಿನಿ, ಜಾನ್ವಿ ಮತ್ತು ಸ್ಪಂದನಾ ತಮಾಷೆಯ ಸ್ಕಿಟ್ ಒಂದನ್ನು ಮಾಡಿ ನಗಿಸಿದರು. ಗಿಲ್ಲಿಮಾತ್ರ ಮುಂಗಾರು ಮಳೆ ರೀತಿ ಡೈಲಾಗ್ ಹೇಳಿದ್ದಾರೆ.
ಗಿಲ್ಲಿ ಡೈಲಾಗ್!
ಮೊದಲಿಗೆ ಮುಂಗಾರು ಮಳೆ ಡೈಲಾಗ್ ರೀತಿ ಮಾತನಾಡಿ, ʻಇಷ್ಟೊತ್ತಲ್ಲಿ ಟೈಂ ಬಗ್ಗೆ ಯಾಕ್ರೀ ಮಾತಾಡ್ತೀರಾ. ಟೈಂ ಅಂದ್ರೆನೇ ಪಕ್ಕಾ 420 ಕಂಡ್ರಿ. ನಾನು ಈ ಮನೆ ಕ್ಯಾಪ್ಟನ್ ಆಗ್ತೀನಿ. ಕ್ಯಾಪ್ಟನ್ ರೂಮ್ ಸಿಗತ್ತೆಮ ಸೂಪರ್ ಸ್ಟಾರ್ ಅಲ್ಲಿ ಫೋಟೋ ಬರತ್ತೆ ಅಂದುಕೊಂಡೆ ಅಂದು ಬಂದಿಲ್ಲ. ಈ ಮನೆಗೆ ಗೆಸ್ಟ್ ಬರ್ತಾರೆ, ಟಿಪ್ಸ್ ಕೊಟ್ಟು ಬೆನ್ನು ತಟ್ಟುತ್ತಾರೆ , ಕ್ಯಾಪ್ಟನ್ಸಿ ಓಟಕ್ಕೆ ಹೋಗ್ತಿನಿ ಅಂತ ಅಂದುಕೊಂಡೆ ಅದು ಟೈಂ ಬರಲಿಲ್ಲ. ಗೊತ್ತಾಯ್ತು ಕಂಡ್ರಿ. ಈ ಜನ್ಮದಲ್ಲಿ ಕ್ಯಾಪ್ಟನ್ ಆಗಲ್ಲ ಅಂತ ಗೊತ್ತಾಯ್ತು ಕಂಡ್ರಿ.ಓಂದಂತೂ ಸತ್ಯ, ನಿಮ್ಮ ಜೊತೆ ಕಳೆದ ದಿನ ನೆನಪಲ್ಲಿ ತಳ್ಳಕೊಂಡು ಹೋಗ್ತಿನಿ ಕಂಡ್ರಿʼ ಅಂತ ಹೇಳಿದ್ದಾರೆ.
ವೈರಲ್ ವಿಡಿಯೋ
ಗಿಲ್ಲಿ ಮಾಸ್ ಡೈಲಾಗ್
ಬಳಿಕ ಮತ್ತೊಂದು ಡೈಲಾಗ್ ಹೊಡೆದ ಗಿಲ್ಲಿ, ಡೈಲಾಗ್ ಹೇಳುವ ಮುಂಚೆಯೇ ಅತಿಥಿಗಳಿಗೆ ಕೈಮುಗಿದು, ʻಈ ಡೈಲಾಗ್ ಯಾವುದೇ ವ್ಯಕ್ತಿಗಳಿಗೆ, ಪ್ರಾಣಿಗಳಿಗೆ , ಅಲ್ಲ ಕಾಲ್ಪನಿಕʼ ಎಂದು ಡೈಲಾಗ್ ಹೇಳಿದ್ದು ಹೀಗೆ, ʻಬಿಬಿ ಪ್ಯಾಲೆಸ್ಗೆ ಬಂದೆ ಕುಲುಮೇಲಿ ಬಿದ್ದಂಗಾಯ್ತು, ಆರ್ಡರ್ ಕೇಳಿದ್ಕೆ ಬಡುದ್ರು, ಟಿಪ್ಸ್ ಕೇಳಿದ್ಕೆ ತಟ್ಟುದ್ರು, ತಟ್ಟಿ, ತಟ್ಟಿ ಬಡ್ದು, ಬಡ್ದು ಈಗ ಕಬ್ಣ ಕತ್ತಿ ಆಗೈತೆ, ಈ ಕತ್ತಿಗೆ ಗೊತ್ತಿರೋದು ಒಂದೇ, ಕೇಳಿದ್ದನ್ನು ಸಪ್ಲೈ ಮಾಡೋದಷ್ಟೆ’ ಎಂದರು.
ಸತತ ಎರಡನೇ ಬಾರಿಗೆ ಧನುಷ್ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅಂತಿಮವಾಗಿ ಸೂರಜ್, ಧನುಷ್, ರಘು, ಸ್ಪಂದನಾ ಸೋಮಣ್ಣ ಮತ್ತು ಅಭಿಷೇಕ್ ಭಾಗವಹಿಸಿದ್ದರು.
ಇದನ್ನೂ ಓದಿ: Bigg Boss Kannada 12: ಎರಡನೇ ಬಾರಿಗೆ ಕ್ಯಾಪ್ಟನ್ ಆದ ಧನುಷ್! ʻಟಾಸ್ಕ್ ಮಾಸ್ಟರ್ʼ ಅಂತ ಬಿರುದು ಕೊಟ್ಟ ಫ್ಯಾನ್ಸ್
ಧನುಷ್ ಪರ ತ್ರಿವಿಕ್ರಮ್ ಆಟ ಆಡಿದರೆ, ಅಭಿಷೇಕ್ ಜೊತೆಗೆ ಚೈತ್ರಾ ಕುಂದಾಪುರ, ರಘು ಜೊತೆಗೆ ಮೋಕ್ಷಿತಾ ಪೈ, ಸ್ಪಂದನಾ ಜೊತೆಗೆ ರಜತ್, ಸೂರಜ್ ಜೊತೆಗೆ ಉಗ್ರಂ ಮಂಜು ಟಾಸ್ಕ್‌ನಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಧನುಷ್ ವಿನ್ ಆಗಿದ್ದಾರೆ.