ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಎರಡನೇ ಬಾರಿಗೆ ಕ್ಯಾಪ್ಟನ್‌ ಆದ ಧನುಷ್‌! ʻಟಾಸ್ಕ್‌ ಮಾಸ್ಟರ್‌ʼ ಅಂತ ಬಿರುದು ಕೊಟ್ಟ ಫ್ಯಾನ್ಸ್‌

Dhanush: ಧನುಷ್‌ ಪರ ತ್ರಿವಿಕ್ರಮ್‌ ಆಟ ಆಡಿದರೆ, ಅಭಿಷೇಕ್‌ ಜೊತೆಗೆ ಚೈತ್ರಾ ಕುಂದಾಪುರ, ರಘು ಜೊತೆಗೆ ಮೋಕ್ಷಿತಾ ಪೈ, ಸ್ಪಂದನಾ ಜೊತೆಗೆ ರಜತ್‌, ಸೂರಜ್‌ ಜೊತೆಗೆ ಉಗ್ರಂ ಮಂಜು ಟಾಸ್ಕ್‌ನಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಧನುಷ್‌ ವಿನ್‌ ಆಗಿದ್ದಾರೆ. ಈ ವಾರ ಬಿಗ್‌ ಬಾಸ್‌ ʻಬಿಬಿ ಪ್ಯಾಲೇಸ್‌ʼ ಆಗಿತ್ತು. ಉಗ್ರಂ ಮಂಜು ಜೊತೆಗೆ ತ್ರಿವಿಕ್ರಮ್, ಮೋಕ್ಷಿತಾ ಪೈ, ರಜತ್‌ ಹಾಗೂ ಚೈತ್ರಾ ಕುಂದಾಪುರ ದೊಡ್ಮನೆಗೆ ಎಂಟ್ರಿ ನೀಡಿದ್ದರು. ಅತಿಥಿಗಳಿಗೆ ಒಳ್ಳೆಯ ಆತಿಥ್ಯ ಕೊಟ್ಟು ಯಾರು ಹೆಚ್ಚು ಟಿಪ್ಸ್‌ ಪಡೆಯುತ್ತಾರೋ ಅವರು ಕ್ಯಾಪ್ಟನ್ಸಿ ರೇಸ್‌ನಲ್ಲಿ ಭಾಗವಹಿಸಲಿದ್ದಾರೆ ಎಂದಾಗಿತ್ತು.

ಎರಡನೇ ಬಾರಿಗೆ ಕ್ಯಾಪ್ಟನ್‌ ಆದ ಧನುಷ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 28, 2025 10:05 AM

ಸತತ ಎರಡನೇ ಬಾರಿಗೆ ಧನುಷ್‌ (Dhanush Captain) ಬಿಗ್‌ ಬಾಸ್‌ ಮನೆಯ (Bigg Boss Kannada 12) ಕ್ಯಾಪ್ಟನ್‌ ಆಗಿದ್ದಾರೆ. ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅಂತಿಮವಾಗಿ ಸೂರಜ್‌, ಧನುಷ್‌, ರಘು, ಸ್ಪಂದನಾ ಸೋಮಣ್ಣ (Spandana Somanna) ಮತ್ತು ಅಭಿಷೇಕ್‌ (Abhishek) ಭಾಗವಹಿಸಿದ್ದರು. ಈ ಐವರು ತಮ್ಮ ಪರ ಕ್ಯಾಪ್ಟನ್ಸಿ ಟಾಸ್ಕ್‌ ಆಡಲು ಐದು ಜನ ಗೆಸ್ಟ್‌ಗಳಿಗೆ ಮನವೊಲಿಸಬೇಕು ಎಂದು ಬಿಗ್‌ ಬಾಸ್‌ ಘೋಷಸಿದರು. ಅದರಂತೆ ತ್ರಿವಿಕ್ರಮ್‌ (Trivikram) ಅವರು ಧನುಷ್‌ ಪರ ಆಟ ಆಡಿದ್ದಾರೆ.

ಈ ವಾರ ಬಿಗ್‌ ಬಾಸ್‌ ʻಬಿಬಿ ಪ್ಯಾಲೇಸ್‌ʼ ಆಗಿತ್ತು. ಉಗ್ರಂ ಮಂಜು ಜೊತೆಗೆ ತ್ರಿವಿಕ್ರಮ್, ಮೋಕ್ಷಿತಾ ಪೈ, ರಜತ್‌ ಹಾಗೂ ಚೈತ್ರಾ ಕುಂದಾಪುರ ದೊಡ್ಮನೆಗೆ ಎಂಟ್ರಿ ನೀಡಿದ್ದರು. ಅತಿಥಿಗಳಿಗೆ ಒಳ್ಳೆಯ ಆತಿಥ್ಯ ಕೊಟ್ಟು ಯಾರು ಹೆಚ್ಚು ಟಿಪ್ಸ್‌ ಪಡೆಯುತ್ತಾರೋ ಅವರು ಕ್ಯಾಪ್ಟನ್ಸಿ ರೇಸ್‌ನಲ್ಲಿ ಭಾಗವಹಿಸಲಿದ್ದಾರೆ ಎಂದಾಗಿತ್ತು.

ಇದನ್ನೂ ಓದಿ: Bigg Boss Kannada 12: ಲಾಂಗ್ ಡ್ರೈವ್ ಹೋಗಿ ಹಿಂತಿರುಗಿ ಬರುವಾಗಲೇ ಚಿಗುರಿತ್ತು ಪ್ರೀತಿ! ಲವ್ ಸ್ಟೋರಿ ಬಿಚ್ಚಿಟ್ಟ ಉಗ್ರಂ ಮಂಜು

ಧನುಷ್‌ ವಿನ್‌

ಧನುಷ್‌ ಪರ ತ್ರಿವಿಕ್ರಮ್‌ ಆಟ ಆಡಿದರೆ, ಅಭಿಷೇಕ್‌ ಜೊತೆಗೆ ಚೈತ್ರಾ ಕುಂದಾಪುರ, ರಘು ಜೊತೆಗೆ ಮೋಕ್ಷಿತಾ ಪೈ, ಸ್ಪಂದನಾ ಜೊತೆಗೆ ರಜತ್‌, ಸೂರಜ್‌ ಜೊತೆಗೆ ಉಗ್ರಂ ಮಂಜು ಟಾಸ್ಕ್‌ನಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಧನುಷ್‌ ವಿನ್‌ ಆಗಿದ್ದಾರೆ.

ಇನ್ನು ಧನುಷ್‌ಗೆ ಟಾಸ್ಕ್‌ ಮಾಸ್ಟರ್‌ ಅಂತ ಬಿರುಕು ಕೊಟ್ಟಿದ್ದಾರೆ ಬಿಗ್‌ ಬಾಸ್‌. ಈ ಟಾಸ್ಕ್‌ ಉಸ್ತುವಾರಿಯನ್ನು ಗಿಲ್ಲಿ ಹಾಗೂ ಅಶ್ವಿನಿ ನಿಭಾಯಿಸಿದ್ದರು.

ʻಸೂರಜ್ ಈ ಬ್ಯಾಲೆನ್ಸಿಂಗ್ ಟಾಸ್ಕ್‌ಗಳನ್ನ ನಿರಂತರವಾಗಿ ಕಳೆದುಕೊಳ್ಳುತ್ತಿದ್ದಾರೆ. ಮುಂದಿನ ಬಾರಿ ನಿಮಗೆ ಶುಭವಾಗಲಿ. ರಘು ಅಣ್ಣ ಮೊದಲು ಟಾಸ್ಕ್ ಅನ್ನು ಬಹುತೇಕ ಪೂರ್ಣಗೊಳಿಸಿದ್ದರು ಆದರೆ ಎಣಿಕೆಯನ್ನು ತಪ್ಪಿಸಿಕೊಂಡರು. ಸೀಸನ್‌ 11ರ ಟಾಸ್ಕ್ ಮಾಸ್ಟರ್ ತ್ರಿವಿಕ್ರಮ್ ಸೀಸನ್‌ 12ರ ಟಾಸ್ಕ್ ಮಾಸ್ಟರ್ ಧನುಷ್ ಅವರನ್ನು ಕ್ಯಾಪ್ಟನ್ ಆಗಲು ಸಹಾಯ ಮಾಡಿದರುʼ ಎಂದು ಕಮೆಂಟ್‌ ಮಾಡಿದ್ದಾರೆ ವೀಕ್ಷಕರು.

ಕೊನೆಯ ದಿನ

ಕಳೆದ ಮೂರು ದಿನಗಳಿಂದ ಸ್ಪರ್ಧಿಗಳೊಂದಿಗೆ ಆಟವಾಡಿ, ಮನರಂಜಿಸಿದ್ದಾರೆ. ಇದೀಗ ಅವರ ಕೊನೆಯ ದಿನ. ಹೀಗಾಗಿ ಬಿಗ್‌ ಬಾಸ್‌ (Bigg Boss) ಕುರಿತು ಮಾತನಾಡಿ ತುಂಬಾ ಭಾವುಕರಾಗಿದ್ದಾರೆ ಮಾಜಿ ಸ್ಪರ್ಧಿಗಳು.

ರಜತ್‌ ಮಾತನಾಡಿ, ನಾವು ಸತ್ತ ಮೇಲೆಯೂ ನಮ್ಮ ವಂಶ ಪರಂಪರೆ ನಮ್ಮನ್ನ ನೋಡತ್ತೆ. ಆ ಅವಕಾಶ ಬಿಗ್‌ ಬಾಸ್‌ ಕೊಟ್ಟಿದೆ. ಉಗ್ರಂ ಮಂಜು ಮಾತನಾಡಿ, ಕಾರ್‌ ಅಲ್ಲಿ ಹೋಗುವಾಗ, ಅಲ್ಲೇ ಬಸ್‌ ನಿಲ್ಲಿಸಿ ಮಾತಾಡ್ತಾರೆ.ಪ್ರೀತಿ ಕೊಡುತ್ತಾರೆ.

ಇದನ್ನೂ ಓದಿ: Bigg Boss Kannada 12: ನನಗೆ ಪುನರ್ ಜನ್ಮ ಕೊಟ್ಟಿದ್ದೇ ಬಿಗ್‌ ಬಾಸ್‌! ಕಣ್ಣೀರಿಟ್ಟ ಚೈತ್ರಾ ಕುಂದಾಪುರ

ಮೋಕ್ಷಿತಾ ಅವರು ಮಾತನಾಡಿ, ನನಗೆ ತಲೆ ಎತ್ತಿ ನಿಲ್ಲುವ ಹಾಗೇ ಮಾಡಿದ್ದು ಬಿಗ್‌ ಬಾಸ್‌. ಕರ್ಮಗಳನ್ನು ಕಳೆದಂತ ಜಾಗ ಎಂದರು ತ್ರಿವಿಕ್ರಮ್‌. ಚೈತ್ರಾ ಕಣ್ಣೀರಿಡುತ್ತಾ, ಬಿಗ್‌ ಬಾಸ್‌ ಯಾರಿಗೆ ಏನು ಕೊಟ್ಟಿದೆ ಗೊತ್ತಿಲ್ಲ. ನನಗೆ ಅಂತೂ ಪುನರ್‌ ಜನ್ಮ ಕೊಟ್ಟಿದೆ ಎಂದು ಭಾವುಕರಾದರು.