ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಗಿಲ್ಲಿ ನಟ ಹೇಳೋ ಮಾತಿಂದ ಅಶ್ವಿನಿ ಗೌಡಗೆ ನೋವಾಯ್ತು; ಕಣ್ಣೀರಿಟ್ಟ ರಾಜಮಾತೆಗೆ ಸಾಂತ್ವನ ಮಾಡಿದ್ಯಾರು?

BBK 12 Ashwini Gowda: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವಿನ ವೈಮನಸ್ಸು ಈಗ ತಾರಕಕ್ಕೇರಿದೆ. ಗಿಲ್ಲಿ ನಟ ಕೊಟ್ಟ ಟಾಂಗ್‌ಗೆ ಅಶ್ವಿನಿ ಗೌಡ ತೀವ್ರವಾಗಿ ನೊಂದುಕೊಂಡು ಕಣ್ಣೀರಿಟ್ಟಿದ್ದಾರೆ. 'ಮರ್ಯಾದೆಗಾಗಿ ಬದುಕುತ್ತಿದ್ದೇನೆ' ಎಂದು ಅಶ್ವಿನಿ ನೋವು ತೋಡಿಕೊಂಡಿದ್ದಾರೆ. ಅಶ್ವಿನಿಗೆ ಧನುಷ್ ಸಾಂತ್ವನ ಹೇಳಿದ್ದಾರೆ. ಈ ವೇಳೆ ಗಿಲ್ಲಿಗೆ 'ವ್ಯಾಲ್ಯೂ ಇಲ್ಲ' ಎಂಬ ಮಾತುಗಳೂ ಬಂದಿವೆ.

ʻಬಿಗ್‌ ಬಾಸ್‌ʼ ಮನೆಯಲ್ಲಿ ಆರಂಭದಿಂದಲೂ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವೆ ಒಂದು ಫೈಟ್‌ ಇದ್ದೇ ಇದೆ. ಪದೇ ಪದೇ ಅಶ್ವಿನಿ ಗೌಡಗೆ ಟಾಂಗ್‌ ಕೊಡುತ್ತಲೇ ಇದ್ದಾರೆ. ಅವರಿಬ್ಬರು ಹಾವು ಮುಂಗುಸಿಯಂತೆ ಜಗಳವಾಡುತ್ತಿರುತ್ತಾರೆ. ಇದೀಗ ಅದು ತಾರಕಕ್ಕೇರಿದೆ. ಗಿಲ್ಲಿ ನಟ ಹೇಳುವ ಮಾತಿನಿಂದ ಹರ್ಟ್‌ ಆಗಿರುವ ಅಶ್ವಿನಿ ಗೌಡ ಅವರು ಗಳಗಳಗನೇ ಅತ್ತಿದ್ದಾರೆ.

ಹೊಸ ಪ್ರೋಮೋದಲ್ಲಿ ಏನಿದೆ?

ನವೆಂಬರ್‌ 18ರ ಹೊಸ ಪ್ರೋಮೋವನ್ನು ರಿಲೀಸ್‌ ಮಾಡಿರುವ ಕಲರ್ಸ್‌ ಕನ್ನಡ ವಾಹಿನಿಯು ಗಿಲ್ಲಿ ಮಾತಿಗೆ ಕಣ್ಣೀರಿಟ್ಟ ಅಶ್ವಿನಿ ಗೌಡ ಎಂದು ಕ್ಯಾಪ್ಷನ್‌ ನೀಡಿ ಒಂದು ಪ್ರೋಮೋವನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಏನಿದೆ? "ಇವ್ನ್‌ ಯಾರು ಮಾತನಾಡೋಕೆ? ಒಬ್ಬ ಕಾಮಿಡಿಯೆನ್‌ ಆದ್ರೆ ಏನ್‌ ಬೇಕಾದರೂ ಮಾತನಾಡಬಹುದಾ? ಒಬ್ಬರನ್ನ ತೇಜೋವಧೆ ಮಾಡುವುದು ಎಷ್ಟು ಸರಿ" ಎಂದು ಅತ್ತಿದ್ದಾರೆ ಅಶ್ವಿನಿ ಗೌಡ.

Bigg Boss Kannada 12: ಬಿಗ್ ಬಾಸ್ ಗಿಲ್ಲಿ ನಟನ ವಿರುದ್ಧ ದೂರು ದಾಖಲು; ಕಾರಣವೇನು?

ಗಿಲ್ಲಿಗೆ ಬೆಲೆ ಇಲ್ವಾ?

ವಾಷ್‌ ರೂಮ್‌ ಬಳಿ ಕಣ್ಣೀರಿಡುತ್ತಿದ್ದ ಅಶ್ವಿನಿ ಗೌಡ ಅವರನ್ನು ಸಮಾಧಾನ ಮಾಡಿರುವ ಧನುಷ್‌, "ವ್ಯಾಲ್ಯೂ ಇರುವವರ ಬಗ್ಗೆ ಕಣ್ಣೀರಾಕಿ" ಎಂದಿದ್ದಾರೆ. ಪರೋಕ್ಷವಾಗಿ ಅವರು ಗಿಲ್ಲಿ ನಟನಿಗೆ ವ್ಯಾಲ್ಯೂ ಇಲ್ಲ ಎಂದು ಹೇಳಿದ್ದಾರೆ ಧನುಷ್!‌ ನಂತರ ಮಾತನಾಡಿರುವ ಅಶ್ವಿನಿ ಗೌಡ, "ನಮ್ಮನ್ನು ಒಬ್ಬರು ಅಗೌರವದಿಂದ ನೋಡುತ್ತಿದ್ದಾರೆ ಎಂದಾಗ, ಆ ಜಾಗದಲ್ಲಿ ಒಂದು ಕ್ಷಣವೂ ಇರಬೇಕು ಎಂದು ನಮಗೆ ಅನ್ನಿಸುವುದಿಲ್ಲ. ನಾವು ಬದುಕ್ತಾ ಇರುವುದೇ ಮರ್ಯಾದೆಗೋಸ್ಕರ.." ಎಂದಿದ್ದಾರೆ.

Bigg Boss Kannnada 12: ಓವರ್ ಕಾನ್ಫಿಡೆನ್ಸ್ ಬೇಡ! ಮಾಳು ವಿಚಾರಕ್ಕೆ ಗಿಲ್ಲಿ ನಟನಿಗೆ ಕಿಚ್ಚನ ಕ್ಲಾಸ್‌

ಗಿಲ್ಲಿ ನಟ ಹೇಳಿದ ಮಾತುಗಳೇನು?

ಪ್ರೋಮೋದಲ್ಲಿ ಕಂಡುಬಂದಂತೆ, "ಎಲ್ಲಾ ವೃದ್ಧಾಪ್ಯದವರೇ ಸೇರಿಕೊಂಡು ಕಷ್ಟಪಡ್ತಾ ಇದ್ದಾರೆ. ಹಾಗಾಗಿ, ಅವರನ್ನು ಕಳುಹಿಸಿಬಿಡೋಣ... ಯೋಗ್ಯತೆ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನಿಮಗಿಲ್ಲ" ಎಂದು ಅಶ್ವಿನಿ ಗೌಡಗೆ ಟಾಂಗ್‌ ಕೊಟ್ಟಿದ್ದಾರೆ ಗಿಲ್ಲಿ ನಟ. ಇದರ ಸಂಪೂರ್ಣ ಚಿತ್ರಣ ಇಂದಿನ (ನ.18) ಸಂಚಿಕೆಯಲ್ಲಿ ಗೊತ್ತಾಗಲಿದೆ. ಈ ವಾರದ ವೀಕೆಂಡ್‌ನಲ್ಲಿ ಈ ವಿಚಾರವೂ ಚರ್ಚೆಗೆ ಬರಲಿದೆಯಾ? ಗೊತ್ತಿಲ್ಲ. ಈಗಾಗಲೇ ಸುದೀಪ್‌ ಅವರಿಂದ ಪದೇಪದೇ ವಾರ್ನಿಂಗ್‌ ಪಡೆದುಕೊಂಡಿರುವ ಗಿಲ್ಲಿ ನಟಗೆ ಮತ್ತೊಮ್ಮೆ ಕ್ಲಾಸ್‌ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ!

ಗಿಲ್ಲಿ ನಟ & ಅಶ್ವಿನಿ ಗೌಡ ಜಗಳದ ಪ್ರೋಮೋ



ಅಶ್ವಿನಿ ಹೇಳುವುದು ಸರಿಯೇ?

ಗಿಲ್ಲಿ ನಟ ಗೌರವ ಕೊಡುತ್ತಿಲ್ಲ ಎಂದು ಹೇಳಿಕೊಂಡು ಕಣ್ಣೀರಿಟ್ಟಿರುವ ಅಶ್ವಿನಿ ಬಗ್ಗೆಯೂ ಈಗ ಚರ್ಚೆ ಆಗುತ್ತಿದೆ. "ಧ್ರುವಂತ್‌ ಜೊತೆಗೆ ಕ್ಲೋಸ್ ಆದವರೆಲ್ಲಾ ಮನೆಯಿಂದ ಕ್ಲೋಸ್ ಆಗ್ತಾವ್ರೆ. ನೀವಿಬ್ರೂ (ಜಾಹ್ನವಿ ಮತ್ತು ಅಶ್ವಿನಿ ಗೌಡ) ಈಗ ಕ್ಲೋಸ್ ಆಗಿದ್ಧೀರಿ. ನಿಮಗೆ ಆಲ್ ದಿ ಬೆಸ್ಟ್" ಎಂದು ಗಿಲ್ಲಿ ಕೌಂಟರ್‌ ಕೊಟ್ಟಿದ್ರು. ಆಗ ಅದಕ್ಕೆ ರಿಯಾಕ್ಟ್‌ ಮಾಡಿದ್ದ ಅಶ್ವಿನಿ ಗೌಡ, "ಅಮಾವಾಸ್ಯೆಯನ್ನ ಜೊತೆಯಲ್ಲೇ ಇಟ್ಟುಕೊಂಡಿದ್ಯಾ.. ಹೋಗು" ಎಂದಿದ್ದರು. ಗಿಲ್ಲಿ ಜೊತೆಗೆ ಇರುವ ರಕ್ಷಿತಾ ಶೆಟ್ಟಿಗೇ ಈ ಮಾತನ್ನು ಅಶ್ವಿನಿ ಹೇಳಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ರಕ್ಷಿತಾಗೆ ಅಮವಾಸ್ಯೆ ಎಂದು ಕರೆದಿದ್ದು ಎಷ್ಟು ಸರಿ ಎಂದು ಅಶ್ವಿನಿ ಮೇಲೆ ಒಂದಷ್ಟು ಗರಂ ಆಗಿದ್ದಾರೆ.