ʻಬಿಗ್ ಬಾಸ್ʼ ಮನೆಯಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಪಟ್ಟಕ್ಕೇರಿದ್ದ ಮಾಳು ನಿಪನಾಳ್ ಈಗ ಕಳಪೆ ಪಟ್ಟ ಪಡೆದುಕೊಂಡಿದ್ದಾರೆ. ಮನೆಯ ಕೆಲ ಸ್ಪರ್ಧಿಗಳು ಮಾಳುಗೆ ಕಳಪೆ ಪಟ್ಟವನ್ನು ನೀಡಿದ್ದು, ಇದೀಗ ಮಾಳು ಕ್ಯಾಪ್ಟನ್ ರೂಮ್‌ನಿಂದ ಸೀದಾ ಜೈಲಿಗೆ ಹೋಗಿದ್ದಾರೆ. ಅಷ್ಟಕ್ಕೂ ಮಾಳುಗೆ ಕಳಪೆ ನೀಡುವುದಕ್ಕೆ ಕಾರಣವೇನು? ಮುಂದೆ ಓದಿ.
ನಾಮಿನೇಟ್ ಮಾಡಿದ್ದೇ ಮುಳುವಾಯ್ತು!
ಈ ವಾರ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದ ಮಾಳುಗೆ ನಾಮಿನೇಟ್ ಮಾಡುವ ಅಧಿಕಾರ ಸಿಕ್ಕಿತ್ತು. ಏಳು ಮಂದಿಯನ್ನು ನಾಮಿನೇಟ್ ಮಾಡಿದ್ದ ಮಾಳು ಅವರು ಏಳು ಮಂದಿಯನ್ನು ನಾಮಿನೇಟ್ ಮಾಡಿದ್ದರು. ಇದೀಗ ಅವರೆಲ್ಲಾ ಮಾಳು ವಿರುದ್ಧ ತಿರುಗಿಬಿದ್ದಿದ್ದಾರೆ. ಕ್ಯಾಪ್ಟನ್ ರೂಮ್‌ನಿಂದ ಸೀದಾ ಜೈಲಿಗೆ ಹೋಗುವಂತೆ ಮಾಳುವನ್ನು ಮಾಡಿದ್ದಾರೆ. ರಿಷಾ ಗೌಡ, ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಜಾಹ್ನವಿ ಮುಂತಾದವರು ಮಾಳು ನಿಪನಾಳ್ ಅವರು ಕಳಪೆ ಪಟ್ಟ ನೀಡಿದ್ದಾರೆ.
ಯಾರ್ ಯಾರು ಏನೇನು ಕಾರಣ ನೀಡಿದರು?
ಜಾಹ್ನವಿ: ಕ್ಯಾಪ್ಟನ್ ಆಗಿದ್ದವರಿಗೆ ತಲೆಯಲ್ಲಿ ಬುದ್ಧಿ ಇರಬೇಕು. ಅಡುಗೆ ಮಾಡಬೇಕು ಎಂದರೆ, ಅವರ ಕಡೆಗೆ ಕ್ಯಾಮೆರಾ ಟರ್ನ್ ಆಗಬೇಕು, ಬ್ಯಾಟರಿ ಹಾಕಿಕೊಳ್ಳಬೇಕು ಎಂದರೆ, ಅವರ ಕಡೆ ಕ್ಯಾಮೆರಾ ಟರ್ನ್ ಆಗಬೇಕು ಎಂದು ಕಾರಣ ನೀಡಿದ್ರಿ ನೋಡಿ, ಆಗ ನನಗೆ ತುಂಬಾ ಹರ್ಟ್ ಆಯ್ತು.
ಕಾಕ್ರೋಚ್ ಸುಧಿ: ಕ್ಯಾಪ್ಟನ್ ಎನ್ನುವುದಕ್ಕಿಂತ ಅವರೊಬ್ಬರು ಕಂಟ್ರಾಕ್ಟರ್ ಅನ್ನಿಸ್ತು. ನಾಮಿನೇಟ್ ಮಾಡುವಾಗ ಸರಿಯಾದ ಕಾರಣಗಳನ್ನ ನೀಡಬೇಕು.
ಅಶ್ವಿನಿ: ಆರು ಕಾರಣಗಳಲ್ಲಿ ನೀವು ಕೊಟ್ಟಂತಹ ಒಂದು ಕಾರಣವೂ ನನಗೆ ಸರಿ ಅನ್ನಿಸಲಿಲ್ಲ. ಅಧಿಕಾರವನ್ನು ದುರುಪಯೋಗ ಮಾಡಿಕೊಂಡ್ರಿ ಅಂತ ಅನ್ನಿಸ್ತು.
ಕ್ಯಾಪ್ಟನ್ ಪಟ್ಟದಿಂದ ಸೀದಾ ಜೈಲಿಗೆ
ಮಾಳು ನಿಪನಾಳ್ ಅವರು ಕ್ಯಾಪ್ಟನ್ ಪಟ್ಟ ಪಡೆದು, ಈ ಬಾರಿ ಮನೆಯೊಳಗೆ ಹಲವು ಬದಲಾವಣೆಗಳನ್ನು ಮಾಡುವುದಕ್ಕೆ ಮುಂದಾಗಿದ್ದರು. ಎಲ್ಲರಿಂದ ಕೆಲಸ ಮಾಡಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದರು. ಈ ಮಧ್ಯೆ ನಾಮಿನೇಟ್ ಅಧಿಕಾರ ಸಿಕ್ಕಿದ್ದರಿಂದ, ಸರಿಯಾದ ಕಾರಣಗಳನ್ನು ನೀಡದೇ ನಾಮಿನೇಟ್ ಮಾಡಿದರು ಎಂಬ ಆರೋಪ ಆರಂಭದಿಂದಲೂ ಮಾಳು ಮೇಲೆ ಇತ್ತು. ಇದೀಗ ಕಳಪೆ ಕೊಡುವಾಗ ಅದನ್ನೇ ಹೈಲೈಟ್ ಮಾಡಿ, ಮಾಳುಗೆ ಕಳಪೆ ನೀಡಲಾಗಿದೆ.
ಕ್ಯಾಪ್ಟನ್ ಪಟ್ಟ ಸಿಕ್ಕಿದ್ದರಿಂದ ಒಬ್ಬರೇ ಕ್ಯಾಪ್ಟನ್ ರೂಮ್‌ನಲ್ಲಿ ಮಲಗುತ್ತಿದ್ದ ಮಾಳು ನಿಪನಾಳ್ ಅವರು ಇದೀಗ ಅಲ್ಲಿಂದ ಸೀದಾ ಜೈಲಿಗೆ ಹೊಗಬೇಕಾದ ಪರಿಸ್ಥಿತಿ ಸಿಲುಕಿದ್ದಾರೆ.
ಈ ಯಾರ್ ಯಾರು ನಾಮಿನೇಟ್?
ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್, ರಕ್ಷಿತಾ ಶೆಟ್ಟಿ, ಕಾಕ್ರೋಚ್ ಸುಧಿ, ರಿಷಾ ಗೌಡ, ರಾಶಿಕಾ ಶೆಟ್ಟಿ ಮತ್ತು ರಘು ಅವರು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕಾದುನೋಡಬೇಕು.