ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಯಶಸ್ ವಿರುದ್ಧ ಆಸಿಯಾ ಗರಂ; ಸ್ನೇಹ ಅಂತ್ಯ!

Bigg Boss Kannada 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ರಿಯಾಲಿಟಿ ಶೋ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಮನೆಯಲ್ಲಿ ಈವರೆಗೆ ಸ್ನೇಹಿತರಂತೆ ಇದ್ದ ಸ್ಪರ್ಧಿಗಳ ನಡುವೆ ಇದೀಗ ಭಿನ್ನಾಭಿಪ್ರಾಯಗಳು ಶುರುವಾಗಿದ್ದು, ಆಟದ ಜೊತೆಗೆ ರಾಜಕೀಯವೂ ಜೋರಾಗಿದೆ. ಅದರಲ್ಲೂ ಆಪ್ತ ಸ್ನೇಹಿತರಾಗಿದ್ದ ಆಸಿಯಾ ಫಿರ್ದೋಸ್ (Asia Yashas) ಮತ್ತು ಯಶಸ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ. ಇಬ್ಬರೂ ನೇರಾನೇರ ಜಗಳಕ್ಕೆ ಇಳಿದಿದ್ದು, ಮನೆಯ ವಾತಾವರಣ ಮತ್ತಷ್ಟು ಕಾವೇರಿದೆ.

ಬಿಗ್‌ ಬಾಸ್‌ ಕನ್ನಡ

‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ರಿಯಾಲಿಟಿ ಶೋ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಮನೆಯಲ್ಲಿ ಈವರೆಗೆ ಸ್ನೇಹಿತರಂತೆ ಇದ್ದ ಸ್ಪರ್ಧಿಗಳ ನಡುವೆ ಇದೀಗ ಭಿನ್ನಾಭಿಪ್ರಾಯಗಳು ಶುರುವಾಗಿದ್ದು, ಆಟದ ಜೊತೆಗೆ ರಾಜಕೀಯವೂ ಜೋರಾಗಿದೆ. ಅದರಲ್ಲೂ ಆಪ್ತ ಸ್ನೇಹಿತರಾಗಿದ್ದ ಆಸಿಯಾ ಫಿರ್ದೋಸ್ (Asia Yashas) ಮತ್ತು ಯಶಸ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ. ಇಬ್ಬರೂ ನೇರಾನೇರ ಜಗಳಕ್ಕೆ ಇಳಿದಿದ್ದು, ಮನೆಯ ವಾತಾವರಣ ಮತ್ತಷ್ಟು ಕಾವೇರಿದೆ.

ಆಸಿಯಾ ಮತ್ತು ಯಶಸ್ ಸ್ನೇಹದಲ್ಲಿ ಬಿರುಕು!

ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಆತ್ಮೀಯವಾಗಿದ್ದ ಆಸಿಯಾ ಹಾಗೂ ಯಶಸ್ ನಡುವೆ ಇದೀಗ ಎಲ್ಲವೂ ಸರಿಯಿಲ್ಲ ಎಂಬುದು ನವೆಂಬರ್ 12ರ ಸಂಚಿಕೆಯ ಪ್ರೋಮೋದಲ್ಲಿ ಬಹಿರಂಗವಾಗಿದೆ. ಯಶಸ್ ಅವರ ವರ್ತನೆಯಿಂದ ಅಸಮಾಧಾನಗೊಂಡಿರುವ ಆಸಿಯಾ, ಅವರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಯಶಸ್ ಅವರಲ್ಲಿ ಸ್ವಾರ್ಥದ ಗುಣವಿದೆ ಎಂಬುದು ಈಗ ಆಸಿಯಾಗೆ ಅರ್ಥವಾಗಿದೆ ಎಂಬಂತೆ ಪ್ರೋಮೋದಲ್ಲಿ ಕಾಣಿಸುತ್ತಿದೆ.

ಇದನ್ನೂ ಓದಿ: Bigg Boss Kannada 13: ಚಾಕು ತಂದ ಗಾನವಿ ಗೌಡ, ಬಗೆದುಬಿಡ್ತೀನಿ ಎಂದ ಮಂಜ! ಸವಾಲ್‍‍ಗೆ ಸವಾಲ್!

ಇಬ್ಬರ ನಡುವಿನ ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆಸಿಯಾ ಅವರು ಯಶಸ್‌ಗೆ ನೇರವಾಗಿಯೇ ಸವಾಲು ಹಾಕಿದ್ದಾರೆ. ಇಷ್ಟು ದಿನಗಳ ಸ್ನೇಹದ ಹಿಂದೆ ಇದ್ದ ಮುಖವಾಡ ಕಳಚಿದೆಯೇ ಎಂಬ ಪ್ರಶ್ನೆ ಇದೀಗ ವೀಕ್ಷಕರಲ್ಲಿ ಮೂಡಿದೆ.

ಜಗಳ ನೋಡಿ ಚಪ್ಪಾಳೆ ತಟ್ಟಿದ ಸೌಂದರ್ಯಾ ಶೆಟ್ಟಿ!

ಆಸಿಯಾ ಮತ್ತು ಯಶಸ್ ನಡುವಿನ ಮಾತಿನ ಚಕಮಕಿ ನಡೆಯುತ್ತಿದ್ದ ಸಂದರ್ಭದಲ್ಲಿ ಸೌಂದರ್ಯಾ ಶೆಟ್ಟಿ ಅವರು ಚಪ್ಪಾಳೆ ತಟ್ಟಿರುವುದು ಪ್ರೋಮೋದ ಮತ್ತೊಂದು ವಿಶೇಷ ಆಕರ್ಷಣೆಯಾಗಿದೆ. ಮನೆಯೊಳಗಿನ ಈ ಬೆಳವಣಿಗೆ ಸ್ಪರ್ಧಿಗಳ ನಡುವಿನ ಸಂಬಂಧಗಳು ಯಾವ ಹಂತಕ್ಕೆ ತಲುಪಿವೆ ಎಂಬುದನ್ನು ತೋರಿಸುತ್ತಿದೆ.



ಬಿಗ್ ಬಾಸ್ ಮನೆಯಲ್ಲಿ ‘ಪರಿಷತ್’ ಕಾನ್ಸೆಪ್ಟ್!

ಈ ವಾರ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ‘ಬಿಗ್ ಬಾಸ್ ಪರಿಷತ್’ ಎಂಬ ವಿಭಿನ್ನ ಕಾನ್ಸೆಪ್ಟ್ ಪರಿಚಯಿಸಲಾಗಿದೆ. ಮನೆಯೊಳಗೆ ರಾಜಕೀಯ ವಾತಾವರಣ ನಿರ್ಮಾಣವಾಗಿದ್ದು, ಸ್ಪರ್ಧಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಈ ಪರಿಷತ್‌ಗೆ ಮಾಡ್ರನ್ ಮಹಾಕವಿ ಮಂಜ ಅವರು ಅಧ್ಯಕ್ಷರಾಗಿದ್ದಾರೆ.

ಇದೇ ವೇಳೆ ಆಸಿಯಾ ಫಿರ್ದೋಸ್ ಮತ್ತು ಧನುಷ್ ಮಂಜುನಾಥ್ ನಡುವೆ ಕೂಡ ವಾದ-ವಿವಾದ ನಡೆದಿದೆ. ಧನುಷ್ ವಿರುದ್ಧ ಮಾತನಾಡಿರುವ ಆಸಿಯಾ, ಕಳೆದ ಮೂರು ವಾರಗಳಿಂದ ತಮ್ಮ ಆಟದಲ್ಲಿ ಫೈರ್ ಕಾಣಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

“ಕಳೆದ ಮೂರು ವಾರಗಳಿಂದ ಆಸಿಯಾ ನಿಮ್ಮಲ್ಲಿ ನಾನು ಆಡುವ ಫೈಯರ್ ನೋಡಲಿಲ್ಲ. ನಿಮಗಿಂತ ಹೆಚ್ಚು ಈ ಮನೆಯಲ್ಲಿ ಯೋಗ್ಯತೆ ಇರುವುದು ನನಗೆ” ಎಂದು ಸವಾಲಿನ ಧಾಟಿಯಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಮಂಜ -ಯಶಸ್‌ ನಡುವಿನ ವೈಮನಸ್ಸು; ಮತ್ತೆ ರದ್ದಾಯ್ತು ಟಾಸ್ಕ್!

ಆಸಿಯಾ ಮತ್ತು ಯಶಸ್ ನಡುವಿನ ಜಗಳ, ಸೌಂದರ್ಯಾ ಅವರ ಪ್ರತಿಕ್ರಿಯೆ ಹಾಗೂ ಪರಿಷತ್‌ನಲ್ಲಿ ನಡೆಯುವ ಮಾತಿನ ಸಮರ ವೀಕ್ಷಕರ ಕುತೂಹಲ ಹೆಚ್ಚಿಸಿವೆ.

Yashaswi Devadiga

View all posts by this author