Bigg Boss Kannada 13: ಚಾಕು ತಂದ ಗಾನವಿ ಗೌಡ, ಬಗೆದುಬಿಡ್ತೀನಿ ಎಂದ ಮಂಜ! ಸವಾಲ್ಗೆ ಸವಾಲ್!
Bigg Boss Kannada 13: ಬಿಗ್ ಬಾಸ್ ಕನ್ನಡ (Bigg Boss Kannada 13) ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವಿನ ಪೈಪೋಟಿ ಹೆಚ್ಚಾಗುತ್ತಿದೆ. ಟಾಸ್ಕ್ ವಿಚಾರವಾಗಿ ಆರಂಭವಾಗುವ ಸಣ್ಣಪುಟ್ಟ ವಾದಗಳು ಕೆಲವೊಮ್ಮೆ ದೊಡ್ಡ ಮಟ್ಟದ ಜಗಳಕ್ಕೆ ಕಾರಣವಾಗುತ್ತಿವೆ. ಇದೀಗ ಮನೆಯೊಳಗೆ ನಡೆದ ರಾಜಕೀಯ ಚಟುವಟಿಕೆಯ ಟಾಸ್ಕ್ ಸ್ಪರ್ಧಿಗಳ ನಡುವಿನ ಸಂಘರ್ಷಕ್ಕೆ ವೇದಿಕೆಯಾಗಿದೆ. ಅದರಲ್ಲೂ ಮಂಜು (Manja Thandav) ಮತ್ತು ತಾಂಡವ್ ನಡುವಿನ ಮಾತಿನ ಸಮರ ತಾರಕಕ್ಕೇರಿದ್ದು, ಮನೆಯ ವಾತಾವರಣವೇ ಕೆಲಕಾಲ ಉದ್ವಿಗ್ನಗೊಂಡಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಕನ್ನಡ (Bigg Boss Kannada 13) ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವಿನ ಪೈಪೋಟಿ ಹೆಚ್ಚಾಗುತ್ತಿದೆ. ಟಾಸ್ಕ್ ವಿಚಾರವಾಗಿ ಆರಂಭವಾಗುವ ಸಣ್ಣಪುಟ್ಟ ವಾದಗಳು ಕೆಲವೊಮ್ಮೆ ದೊಡ್ಡ ಮಟ್ಟದ ಜಗಳಕ್ಕೆ ಕಾರಣವಾಗುತ್ತಿವೆ. ಇದೀಗ ಮನೆಯೊಳಗೆ ನಡೆದ ರಾಜಕೀಯ ಚಟುವಟಿಕೆಯ ಟಾಸ್ಕ್ ಸ್ಪರ್ಧಿಗಳ ನಡುವಿನ ಸಂಘರ್ಷಕ್ಕೆ ವೇದಿಕೆಯಾಗಿದೆ. ಅದರಲ್ಲೂ ಮಂಜು (Manja Thandav) ಮತ್ತು ತಾಂಡವ್ ನಡುವಿನ ಮಾತಿನ ಸಮರ ತಾರಕಕ್ಕೇರಿದ್ದು, ಮನೆಯ ವಾತಾವರಣವೇ ಕೆಲಕಾಲ ಉದ್ವಿಗ್ನಗೊಂಡಿದೆ.
ಯಶಸ್ ಕೃಷ್ಣ ಮತ್ತು ಮತ್ತೊಂದು ಬದಿಯಲ್ಲಿ ತಾಂಡವ್ ರಾಮ್ ಅವರು ನಿಂತಿದ್ದಾರೆ. ಇವರಿಬ್ಬರೂ ಎರಡು ತಂಡಗಳಾಗಿದ್ದರು. ತಮ್ಮ ತಮ್ಮ ವಿರುದ್ಧದ ತಂಡದ ಸದಸ್ಯರ ಬಗ್ಗೆ ಮಾತನಾಡುವಾಗ ತಾಂಡವ್ ರಾಮ್ ನಿಮ್ಮ ಒಳ್ಳೆತನ ಎಲ್ಲಿಗೆ ಹೋಯ್ತು? ಬರೀ ನಾಟಕ, ಹೆಸರಿಗೆ ಅಷ್ಟೇ ತಾಂಡವ್ ಎಂದು ತೊಡೆ ತಟ್ಟುತ್ತಾ ಇಲ್ಲಿರಬೇಕು ತಾಕತ್ತು” ಎನ್ನುತ್ತಾರೆ, ಇದಕ್ಕೆ ತಾಂಡವ್ ಅವರು “ತೋಳು ತಟ್ಟಿ, ನೋಡುತ್ತೀಯಾ ತಾಕತ್ತು ಬಾ ಆಚೆ ನೋಡೋಣ” ಎಂದು ಸವಾಲ್ ಹಾಕುತ್ತಾರೆ.“ಬಗಿದು ಬಿಡುತ್ತೇನೆ” ಎಂದು ಮಂಜ ಹೇಳಿದರೇ, “ಬಗಿದು ತಿಂದು ಹಾಕುತ್ತೇನೆ, ಕೆಣಕಿದರೆ ಯಾವನ್ನು ಬಿಡಲ್ಲ” ಎನ್ನುತ್ತಾರೆ ತಾಂಡವ್ ರಾಮ್.
ಇದನ್ನೂ ಓದಿ: Bigg Boss Kannada 13: ಈ ವಾರ ದೊಡ್ಮನೆಯಲ್ಲಿ ತಂತ್ರ, ಪ್ರತಿತಂತ್ರ ಜೊತೆಗೆ ಸ್ವಲ್ಪ ಕುತಂತ್ರ!
ಯಶಸ್ ಗಾನವಿ ಗೌಡ ಅವರ ಬಗ್ಗೆ ಹೇಳುತ್ತಾರೆ, “ತಾಂಡವ್ ರಾಮ್ ಅವರು ಹಲ್ಲು ಕಿತ್ತಾಕುತ್ತೇನೆ ಅಂದಾಗ ನೀವು ಎಷ್ಟು ಚೆನ್ನಾಗಿ ನಗುತ್ತಾ ಇದ್ದೀರಿ, ಆಗಲೇ ನೀವು ದಂಸ ಮಾಡಬೇಕಿತ್ತು” ಎನ್ನುತ್ತಾರೆ. ಗಾನವಿ ಗೌಡ ಎದ್ದು ಸೀದಾ ಚಾಕು ತಂದು ತಾಂಡವ್ ಮುಂದೆ ಎಸೆಯುತ್ತಾರೆ, ಬನ್ನಿ ಚಾಕು ಕೊಡ್ತೀನಿ, ಹಲ್ಲು ಕಿತ್ತಾಕಿ, ದಮ್ ಇಲ್ಲವಾ ಮೀಟರ್ ಇಲ್ಲವಾ? ಎಂದು ಸವಾಲ್ ಹಾಕುತ್ತಾರೆ. “ಅದು ನನ್ನಿಷ್ಟ, ನಾನು ಏನಾದರೂ ಮಾಡಿಕೊಳ್ಳುತ್ತೇನೆ” ಎಂದು ತಾಂಡವ್ ರಾಮ್ ಅವರು ಮರು ಉತ್ತರ ಕೊಟ್ಟಿದ್ದಾರೆ.
ಈ ಗಲಾಟೆಗೆ ಕಾರಣವಾಗಿದ್ದು ಈ ಹಿಂದಿನ ಟಾಸ್ಕ್ ವೇಳೆ ಗಾರ್ಡನ್ ಏರಿಯಾದಲ್ಲಿ ನಡೆದಿದ್ದ ದೈಹಿಕ ತಿಕ್ಕಾಟ. ಆಟದ ಸಂದರ್ಭದಲ್ಲಿ ಚಾಕು ತಂದು ಹಲ್ಲು ಕಿತ್ತು ಹಾಕಬೇಕು ಎಂಬ ರೀತಿಯಲ್ಲಿ ಮಾತನಾಡಿದ್ದ ವಿಚಾರವನ್ನು ಸದನದ ಚರ್ಚೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದೇ ವಿಚಾರ ಸ್ಪರ್ಧಿಗಳ ನಡುವೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಗಾನವಿ ಅವರ ಈ ನಡೆ ಮನೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದೆ. ಗಾನವಿ ಚಾಕುಗಳನ್ನು ಟೇಬಲ್ ಮೇಲೆ ಇಡುತ್ತಿದ್ದಂತೆ ಮನೆಯ ಇತರ ಸ್ಪರ್ಧಿಗಳು ಅವುಗಳನ್ನು ಅಲ್ಲಿಂದ ತೆಗೆದುಕೊಂಡು ಹೋಗುವಂತೆ ಕೂಗಾಡಿದ್ದಾರೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿರುವುದನ್ನು ಗಮನಿಸಿದ ತಾಂಡವ್, ಈ ವಿಚಾರದಲ್ಲಿ ಸಭಾಧ್ಯಕ್ಷರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Bigg Boss Kannada 13: ಮಂಜು-ಯಶಸ್ ಕಿರಿಕ್; ಮಹಾಕವಿಯ ಚುಚ್ಚುವ ಮಾತು ಶುರು
. ಮಂಜು ಮತ್ತು ತಾಂಡವ್ ನಡುವಿನ ಜಗಳ, ಗಾನವಿ ಅವರ ಚಾಕು ತಂದು ಮಾಡಿದ ಸವಾಲು ಇದೀಗ ಬಿಗ್ ಬಾಸ್ ಮನೆಯ ಪ್ರಮುಖ ಚರ್ಚೆಯಾಗಿದೆ