ಬಿಗ್ ಬಾಸ್ ಮನೆಗೆ ಮಂಜನ ರೀ-ಎಂಟ್ರಿ (Mahakavi Manja) ಆಗಿದೆ. ಸ್ಪರ್ಧಿಗಳ ಮೇಲೆ ನಾಲಿಗೆ ಹರಿಬಿಟ್ಟು, ಅಶ್ಲೀಲ ಮಾತುಗಳನ್ನು ಆಡಿದ್ದರು. ಆ ಕಾರಣದಿಂದಲೇ ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿತ್ತು. ಅಂಥ ವ್ಯಕ್ತಿಗೆ ಈಗ 2ನೇ ಅವಕಾಶ ನೀಡಲಾಗಿದೆ. ಆದರೀಗ ಹೊಸ ಪ್ರೋಮೋ ನೋಡಿ ವೀಕ್ಷಕರು ಶಾಕ್ ಆಗಿದ್ದಾರೆ. ಮಂಜ ಫುಲ್ ಅಬ್ಬರಿಸಿದ್ದಾನೆ. ಅಷ್ಟೇ ಅಲ್ಲ ಇಡೀ ಮನೆ ಕಸ ಹಾಕಿ ಗಲೀಜು ಮಾಡಿ ಎಂಟ್ರಿ ಕೊಟ್ಟಿದ್ದಾರೆ.
ಮಾನವೀಯತೆಯ ದೃಷ್ಟಿಯಿಂದ ಮಂಜ ಅವರಿಗೆ ಈ ಅವಕಾಶ ಕೊಡಲಾಗಿದೆ. ಜೀವನಪೂರ್ತಿ ಕೆಟ್ಟ ಹೆಸರಿನಿಂದ ಬದುಕುವುದು ಬೇಡ. ಬದಲಾಗಲು ಒಂದು ಅವಕಾಶ ಇರಲಿ ಎಂಬ ಕಾರಣಕ್ಕೆ ಮಂಜ ಅವರನ್ನು ಮತ್ತೆ ಬಿಗ್ ಬಾಸ್ ಮನೆಯೊಳಗೆ ಕಳಿಸಲಾಗಿದೆ ಎಂದು ಸುದೀಪ್ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ವೈಲ್ಡ್ ಕಾರ್ಡ್ ಸ್ಪರ್ಧಿ ಅಲ್ಲ, ಕಪ್ ಕೂಡ ಸಿಗಲ್ಲ.ಅಸಭ್ಯ ಭಾಷೆ ಬಳಸಿದರೆ ಕೂಡಲೇ ರೆಡ್ ಕಾರ್ಡ್ ತೋರಿಸಿ ಬಿಗ್ ಬಾಸ್ ಆಟದಿಂದ ಹೊರಕ್ಕೆ ಹಾಕಲಾಗುತ್ತದೆ.
ಇದನ್ನೂ ಓದಿ: Notice movie: 39 ವರ್ಷಗಳ ಬಳಿಕ ಮತ್ತೆ ಒಂದಾದ ರಾಮ್-ಸೀತಾ ಜೋಡಿ! ಈ ಮೂವಿ ಸ್ಟ್ರೀಮಿಂಗ್ ಎಲ್ಲಿ?