ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಮನೆಯಲ್ಲಿ ಸ್ಪರ್ಧಿಗಳ ನಡುವಿನ ಸ್ನೇಹ, ಆತ್ಮೀಯತೆ ಹಾಗೂ ಭಾವನೆಗಳು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿವೆ. ಇದೀಗ ನಟ ಯಶಸ್ ಮತ್ತು ಸೌಂದರ್ಯಾ ಶೆಟ್ಟಿ ನಡುವಿನ ಮಾತುಕತೆ ವೀಕ್ಷಕರ ಗಮನ ಸೆಳೆದಿದೆ. ಸೌಂದರ್ಯಾ ಅವರ ಮುಂದೆ ಯಶಸ್ (Yashas) ವ್ಯಕ್ತಪಡಿಸಿದ ಪ್ರೀತಿ ತುಂಬಿದ ಮಾತುಗಳು ಮನೆಯಲ್ಲಿ ಹೊಸ ಲವ್ ಸ್ಟೋರಿ ಆರಂಭವಾಗುವ ಸೂಚನೆ ನೀಡಿವೆಯೇ ಎಂಬ ಕುತೂಹಲ ಮೂಡಿಸಿದೆ.
ಬಿಗ್ ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಜೊತೆ ಸಮಯ ಕಳೆಯುತ್ತಿದ್ದ ಯಶಸ್, ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅಜ್ಜಿ ಹೇಳುತ್ತಿದ್ದ ಹಳೆಯ ಕಥೆಯೊಂದನ್ನು ನೆನಪಿಸಿಕೊಂಡ ಅವರು, ಅದನ್ನು ಸೌಂದರ್ಯಾ ಅವರಿಗೆ ಹೋಲಿಕೆ ಮಾಡುವ ಮೂಲಕ ಅವರ ಸೌಂದರ್ಯವನ್ನು ಹೊಗಳಿದ್ದಾರೆ.
ಇದನ್ನೂ ಓದಿ: Bigg Boss Kannada 13: ಆಸಿಯಾ ಈಗ ಯುವರಾಣಿ! ನಾಮಿನೇಶನ್ ಅಧಿಕಾರ ಚೆನ್ನಾಗಿ ನಿಭಾಯಿಸಿದ್ರಾ ಸೌಂದರ್ಯ?
ಮಂಗಳೂರನ್ನು ಒಂದು ಸುಂದರ ರಾಜ್ಯವೆಂದು ಕಲ್ಪಿಸಿಕೊಂಡು, ಅಲ್ಲಿನ ರಾಜಕುಮಾರಿ ಚಂದ್ರನ ಸೌಂದರ್ಯಕ್ಕೂ ಸವಾಲು ಹಾಕುವಷ್ಟು ಸುಂದರವಾಗಿದ್ದಳು ಎಂದು ಅಜ್ಜಿ ಕಥೆ ಹೇಳುತ್ತಿದ್ದರಂತೆ. ಆದರೆ ಬಾಲ್ಯದಲ್ಲಿ ಆ ಕಥೆಯನ್ನು ನಂಬದಿದ್ದ ಯಶಸ್, ಇದೀಗ ಬಿಗ್ ಬಾಸ್ ಮನೆಗೆ ಬಂದ ನಂತರ ಆ ಕಥೆಗೆ ಜೀವಂತ ಉದಾಹರಣೆ ಸಿಕ್ಕಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. 'ನನ್ನ ಅಜ್ಜಿ ಹೇಳುತ್ತಿದ್ದ ಕಥೆಗೆ ಉತ್ತರವಾಗಿ ನೀವು ಸಿಕ್ಕಿದ್ದೀರಿ. ಥ್ಯಾಂಕ್ಸ್' ಎಂದು ಹೇಳುವ ಮೂಲಕ ಸೌಂದರ್ಯಾ ಅವರ ಮುಖದಲ್ಲಿ ನಗು ಮೂಡಿಸಿದ್ದಾರೆ.
'ಶೆಟ್ಟಿ ಶೆಟ್ಟಿ, ಬಿಗ್ ಬಾಸ್ ಮನೆಯಲ್ಲಿ ನಮ್ಮ ನಿಮ್ಮ ಭೇಟಿ, ನಿಮ್ಮ ನಗುವಿಗಿಲ್ಲ ಸರಿಸಾಟಿ. ನಿಮ್ಮನ್ನು ನೋಡಲು ಯುವರಾಜರು ಬರುತ್ತಾರೆ ಸಪ್ತಸಾಗರದಾಟಿ. ಯಾಕೆಂದರೆ ನೀವು ಕ್ಯೂಟಿ, ಮನಸ್ಸು ಬ್ಯೂಟಿ. ನಿಮ್ಮನ್ನು ಭೂಮಿಗೆ ತಂದ ತಂದೆ-ತಾಯಿಗೆ ನಮನ ಕೋಟಿ ಕೋಟಿ' ಎಂದು ಕವನ ಹೇಳಿ ಸೌಂದರ್ಯಾ ಅವರನ್ನು ನಗಿಸಿದ್ದಾರೆ.
'ಸ್ನೇಹಿತೆಗಿಂತಲೂ ಹೆಚ್ಚು' ಎಂದ ಯಶಸ್!
ಸೌಂದರ್ಯಾ ಜೊತೆಗಿನ ಮಾತುಕತೆಯ ನಂತರ ಕ್ಯಾಮೆರಾ ಮುಂದೆ ಬಂದ ಯಶಸ್ ತಮ್ಮ ಭಾವನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಗೆ ಬಂದ ಬಳಿಕ ಒಳ್ಳೆಯ ಮನಸ್ಸಿನ ಗೆಳತಿಯೊಬ್ಬರು ಸಿಕ್ಕಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಬಂಧ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕು. ಆದರೆ ತಮ್ಮ ಮನಸ್ಸಿನಲ್ಲಿ ಸೌಂದರ್ಯಾ ಅವರಿಗೆ ವಿಶೇಷ ಸ್ಥಾನವಿದೆ. ಅವರು ಕೇವಲ ಸ್ನೇಹಿತೆಯಷ್ಟೇ ಅಲ್ಲ, ಸ್ನೇಹಕ್ಕಿಂತಲೂ ಹೆಚ್ಚಿನ ಸ್ಥಾನವನ್ನು ಹೊಂದಿದ್ದಾರೆ ಎಂಬರ್ಥದಲ್ಲಿ ಯಶಸ್ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.
ಇನ್ನೊಂದೆಡೆ, ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಆಸಿಯಾ, ಸೌಂದರ್ಯಾ ಮತ್ತು ಗಾನವಿ ಮೂವರು ಯುವರಾಣಿಯರಾಗಿ ಗುರುತಿಸಿಕೊಂಡಿದ್ದಾರೆ. ಈ ಮೂವರಿಗೂ ಮನೆಯ ಆಟದಲ್ಲಿ ವಿಶೇಷ ಅಧಿಕಾರಗಳು ದೊರೆತಿದ್ದು, ಕೆಲ ಸ್ಪರ್ಧಿಗಳನ್ನು ನೇರವಾಗಿ ನಾಮಿನೇಟ್ ಮಾಡುವ ಅವಕಾಶವೂ ಸಿಕ್ಕಿದೆ.
ಇದನ್ನೂ ಓದಿ: Bigg Boss Kannada 13: ದೊಡ್ಮನೆಯಿಂದ ಎಲಿಮಿನೇಟ್ ಆದ ಸೋನಿಕಾ ಗೌಡ ಫಸ್ಟ್ ರಿಯಾಕ್ಷನ್ ಏನು? ಫಿನಾಲೆ ತಲುಪೋದು ಯಾರಂತೆ ಗೊತ್ತಾ?
ಟಾಸ್ಕ್ನಲ್ಲಿ ಗೆಲುವು ಸಾಧಿಸಿ ನಾಮಿನೇಷನ್ ಅಧಿಕಾರ ಪಡೆದುಕೊಂಡ ಗಾನವಿ, ಎಲ್ಲರಿಗೂ ಅಚ್ಚರಿ ಮೂಡಿಸುವ ನಿರ್ಧಾರ ಕೈಗೊಂಡಿದ್ದಾರೆ. ತಮ್ಮೊಂದಿಗೆ ಹೆಚ್ಚು ಆತ್ಮೀಯವಾಗಿದ್ದ ಮಂಜನನ್ನೇ ನಾಮಿನೇಟ್ ಮಾಡುವ ಮೂಲಕ ಮನೆಯೊಳಗೆ ಹೊಸ ಚರ್ಚೆಗೆ ಕಾರಣರಾಗಿದ್ದಾರೆ.