ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಆಸಿಯಾ ಈಗ ಯುವರಾಣಿ! ನಾಮಿನೇಶನ್‌ ಅಧಿಕಾರ ಚೆನ್ನಾಗಿ ನಿಭಾಯಿಸಿದ್ರಾ ಸೌಂದರ್ಯ?

Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss Kannada 13)ನಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋನಿಕಾ ಗೌಡ ಅವರ ಎಲಿಮಿನೇಷನ್ ಬಳಿಕ ಮನೆಯಲ್ಲಿ ಕೇವಲ ಮೂವರು ಮಹಿಳಾ ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಈ ನಡುವೆ ಬಿಗ್ ಬಾಸ್ ಮನೆಯ ಆಡಳಿತದ ಜವಾಬ್ದಾರಿಯನ್ನು ಯಾರಿಗೆ ನೀಡಬೇಕು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

ನಾಮಿನೇಶನ್‌ ಅಧಿಕಾರ ಚೆನ್ನಾಗಿ ನಿಭಾಯಿಸಿದ್ರಾ ಸೌಂದರ್ಯ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 16, 2026 6:29 PM

ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss Kannada 13)ನಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋನಿಕಾ ಗೌಡ ಅವರ ಎಲಿಮಿನೇಷನ್ ಬಳಿಕ ಮನೆಯಲ್ಲಿ ಕೇವಲ ಮೂವರು ಮಹಿಳಾ ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಈ ನಡುವೆ ಬಿಗ್ ಬಾಸ್ ಮನೆಯ ಆಡಳಿತದ ಜವಾಬ್ದಾರಿಯನ್ನು ಯಾರಿಗೆ ನೀಡಬೇಕು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

ಮನೆಯ ನೂತನ ಯುವರಾಣಿಯಾಗಿ ಆಸಿಯಾ ಫಿರ್ದೋಸ್ ಆಯ್ಕೆಯಾಗಿದ್ದಾರೆ.ಈ ಆಯ್ಕೆ ಪ್ರಕ್ರಿಯೆಯಲ್ಲಿ ಸೌಂದರ್ಯ ಶೆಟ್ಟಿ ಅವರಿಗೆ ತಮ್ಮ ಮೇಲಿನ ವಿಶ್ವಾಸ ಹೆಚ್ಚಾಗಿತ್ತು. ತಾವೇ ಯುವರಾಣಿ ಪಟ್ಟ ಅಲಂಕರಿಸುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದ ಅವರು, ತಮ್ಮ ಫೋಟೋ ಮುಂದೆ ಸುಮಾರು ಮೂರು ಕೆಂಪು ಬಾವುಟಗಳು ಬಂದಿರಬಹುದು ಎಂದು ಊಹಿಸಿದ್ದರು.

ಕಳೆದ ವಾರದ ಆಟದಲ್ಲಿ ನಡೆದ ಗೊಂದಲಗಳು ಈ ವಾರದ ಕ್ಯಾಪ್ಟನ್‌ಶಿಪ್ ಮೇಲೆಯೂ ಪರಿಣಾಮ ಬೀರಿವೆ. ಒಂಬತ್ತನೇ ವಾರದ ಕೆಲವು ಟಾಸ್ಕ್‌ಗಳ ನಿರ್ವಹಣೆ ಹಾಗೂ ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಿಚ್ಚ ಸುದೀಪ್, ಹತ್ತನೇ ವಾರದ ಕ್ಯಾಪ್ಟನ್‌ಶಿಪ್ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ್ದಾರೆ.

ಇದನ್ನೂ ಓದಿ: Amruthadhaare Serial: ಜೈದೇವ್ ಅಂತ್ಯ ಹೇಗಾಯ್ತು? ಧಾರಾವಾಹಿ ಮುಕ್ತಾಯಕ್ಕೆ ವೀಕ್ಷಕರು ಭಾವುಕ!

ಸುಗಮವಾಗಿ ನಡೆಸಲು ಬಿಗ್ ಬಾಸ್ ಹೊಸ ಪ್ರಯೋಗ ಮಾಡಿದ್ದಾರೆ. ಅದರ ಭಾಗವಾಗಿ 'ಯುವರಾಣಿ' ಪರಿಕಲ್ಪನೆಯನ್ನು ಪರಿಚಯಿಸಲಾಗಿದ್ದು, ಆಸಿಯಾ ಫಿರ್ದೋಸ್, ಸೌಂದರ್ಯ ಶೆಟ್ಟಿ ಮತ್ತು ಗಾನವಿ ಗೌಡ ಅವರಿಗೆ ಈ ಪಟ್ಟಕ್ಕಾಗಿ ಸ್ಪರ್ಧಿಸುವ ಅವಕಾಶ ನೀಡಲಾಗಿದೆ.

ಸೌಂದರ್ಯ ಶೆಟ್ಟಿಗೆ ನಿರಾಸೆ

ಗಾನವಿ ಗೌಡ ಅವರ ಫೋಟೋ ಮುಂದೆ ಒಂದು ಹಸಿರು ಬಾವುಟ ಮಾತ್ರ ಕಾಣಿಸಿಕೊಂಡರೆ, ಉಳಿದವು ಕೆಂಪು ಬಾವುಟಗಳಾಗಿದ್ದವು. ಇನ್ನೊಂದೆಡೆ ಆಸಿಯಾ ಫಿರ್ದೋಸ್ ಅವರ ಫೋಟೋ ಮುಂದೆ ಬಹುತೇಕ ಎಲ್ಲರೂ ಹಸಿರು ಬಾವುಟ ಇರಿಸಿದ್ದರು. ಈ ಮೂಲಕ ಮನೆಯ ಸ್ಪರ್ಧಿಗಳ ಹೆಚ್ಚಿನ ಬೆಂಬಲ ಆಸಿಯಾಗೆ ಸಿಕ್ಕಿದ್ದು, ಅವರು ಬಿಗ್ ಬಾಸ್ ಮನೆಯ ನೂತನ ರಾಣಿಯಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Bigg Boss Kannada 13: ಯುವರಾಣಿ ಪಟ್ಟದಿಂದ ಸೌಂದರ್ಯಗೆ ಗೇಟ್‌ಪಾಸ್‌!

ಸೌಂದರ್ಯ ಶೆಟ್ಟಿಯ ನಿರೀಕ್ಷೆ ಹುಸಿಯಾಗಿರುವುದು ಮತ್ತು ಆಸಿಯಾಗೆ ಬಹುತೇಕ ಸ್ಪರ್ಧಿಗಳ ಬೆಂಬಲ ಸಿಕ್ಕಿರುವುದು ಮನೆಯೊಳಗಿನ ಮುಂದಿನ ಆಟಕ್ಕೆ ಹೊಸ ತಿರುವು ನೀಡುವ ಸಾಧ್ಯತೆಯಿದೆ. ಟಾಸ್ಕ್‌ ಸೋತರು ನಾಮಿನೇಶನ್‌ ಚೆನ್ನಾಗಿ ನಿಭಾಯಿಸುತ್ತಾರಾ ಸೌಂದರ್ಯ ಎಂದು ಕಾದು ನೋಡಬೇಕಿದೆ.